Sunday, 29th December 2024

Belgaum News: ಸಿವಿಲ್ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಮತ್ತು ಬಾಣಂತಿಯರು ಸಾವು

ಬೆಳಗಾವಿ: ಈ ವರ್ಷ ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ 120 ಶಿಶುಗಳು ಮತ್ತು 11 ಮಹಿಳೆಯರು ಮೃತಪಟ್ಟಿದ್ದಾರೆ.

ಕಲುಷಿತ ಸಲೈನ್‌ನಿಂದ ಬಳ್ಳಾರಿಯಲ್ಲಿ ಇದೇ ರೀತಿಯ ಸಾವು ಸಂಭವಿಸಿದ ನಂತರ ಬಿಜೆಪಿಯ ಕರ್ನಾಟಕ ಮಹಿಳಾ ಮೋರ್ಚಾ ರಾಜ್ಯಾದ್ಯಂತ ಅಭಿಯಾನವನ್ನು ಪ್ರಾರಂಭಿಸಿದೆ.

ಮೃತ ಕುಂದರಗಿ ಗ್ರಾಮದ ಪೂಜಾ ಕಡಕಭಾವಿ ಅವರ ಮನೆಗೆ ತೆರಳಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್, ರಾಜ್ಯ ಉಪಾಧ್ಯಕ್ಷೆ ಶಾಂಭವಿ ಅಶ್ವಥಪುರೆ, ಬೆಳಗಾವಿ ಗ್ರಾಮೀಣ ಮಹಿಳಾ ಅಧ್ಯಕ್ಷೆ ಡಾ.ನಯನಾ ಭಸ್ಮೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಗೋಕಾಕ ಬಿಜೆಪಿ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪಗೋಳ, ಆನಂದ ಅಪ್ಪುಗೋಳ, ಶಿವಾನಂದ ಟೋಪಗಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.