ಕೋಲಾರ: ಉನ್ನತ ಸಾಧನೆ ಮಾಡುವ ಮೂಲಕ ಹಳ್ಳದಗೆಣ್ಣೂರು ಗ್ರಾಮದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದ ಶಂಕರ್ ಬೆಳ್ಳುಬ್ಬಿ ಅವರ ಕಾರ್ಯ ಸರ್ವರಿಗೂ ಮಾದರಿಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ತಾಲ್ಲೂಕಿನ ಹಳ್ಳದಗೆಣ್ಣೂರ ಗ್ರಾಮದ ಬೀರಲಿಂಗೇಶ್ವರ ಹಾಗೂ ಜಟ್ಟಿಂಗ ರಾಯ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಹಳ್ಳದಗೆಣ್ಣೂರು ಗ್ರಾಮದ ಕೆಎಎಸ್ ಅಧಿಕಾರಿ ಶಂಕರ್ ಬೆಳ್ಳುಬ್ಬಿ ಅವರು ವಾಣಿಜ್ಯ ತೇರಿಗೆ ಇಲಾಖೆಯ ಉಪ ಆಯುಕ್ತರಾಗಿ ಮುಂಬಡ್ತಿ ಪಡೆದಿರುವ ಕಾರಣ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಶಾಸಕರು ಮಾತನಾಡಿದರು ಸಾದನೆ ಮಾಡುವುದು ಸುಲಭವಾದ ಮಾತಲ್ಲ, ಕಡು ಬಡತನದಲ್ಲಿ ಹುಟ್ಟಿ ವಿದ್ಯೆ ಎಂಬ ಅಮೃತ ಕುಡಿದು ಸಾಧನೆಯ ಶಿಖರ ಏರಿರುವ ಶಂಕರ್ ಬೆಳ್ಳುಬ್ಬಿ ಯವರ ಕಥೆ ಇತರರಿಗೆ ಪ್ರೇರಣಾದಾಯಕವಾಗಿದೆ.
ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದಿರುವ ಶ್ರಮ ತುಂಬ ಕಠಿಣವಾಗಿರುತ್ತದೆ. ಕಡು ಬಡತನದಲ್ಲಿ ಹುಟ್ಟಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಾಧನೆ ಮಾಡುವ ತುಡಿತದಿಂದ ಸತತ ಅದ್ಯಯನದ ಮೂಲಕ ಕೆಎಎಸ್ ಪರೀಕ್ಷೆ ಬರೆದು ಉನ್ನತ ಅಧಿಕಾರಿ ಯಾಗಿ ನಿಮ್ಮ ಮುಂದೆ ನಿಂತಿರುವುದರ ಹಿಂದಿರುವ ಅವರ ಹೋರಾಟ ಯುವಜನತೆಗೆ ಮಾದರಿ ಯಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಕೆಎಎಸ್ ಅಧಿಕಾರಿ ಶಂಕರ್ ಬೆಳ್ಳುಬ್ಬಿ ಮಾತನಾಡುತ್ತಾ ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸಾಧಿಸಬೇಕು ಎನ್ನುವ ತುಡಿತವಿಟ್ಟುಕೊಂಡು ಶ್ರಮಿಸಿದರೆ ಸಾಧನೆ ಕಷ್ಟವಲ್ಲ ಅತ್ಯಂತ ಕಡುಬಡತನದಲ್ಲಿ ಹುಟ್ಟಿದ ನನಗೆ ಸಾಧಿಸಲು ನೀವುಗಳು ಪ್ರೇರಣೆ ನೀಡಿದ್ದರಿ ನಿಮ್ಮ ಋಣ ತೀರಸಲು ಆಗದು ಎಂದರು. ಅಲ್ಪನಾದ ನನಗೆ ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದರಿ ಇದು ನನ್ನ ಪುಣ್ಯ ಎಂದು ತಮ್ಮ ಸರಳತೆ ಮೆರೆದರು.
ಈ ಸಂದರ್ಭದಲ್ಲಿ ಹುಲಜಂತಿ ಪಟ್ಟದ ಪೂಜ್ಯರಾದ ಮಾಳಿಂಗರಾಯ ಮರಾಯ, ಸಂದೀಪ ಮಹೋದರರು, ಗುರುದೇವ ಆಶ್ರಮ ಕಾಖಂಡಕಿ, ಸಿದ್ದಪ್ಪ ಪೂಜಾರಿ, ಶಕೀಲ ಸುತಾರ್, ಕಲ್ಲು ದೇಸಾಯಿ, ಆರ್.ಬಿ ಪಕಾಲಿ, ರಶೀದಅಹ್ಮದ ಹವಾಲ್ದಾರ್, ಅಖೀಲ್ ರೆಡ್ಡಿ ಪಾಟೀಲ್, ಗುರು ಚಲವಾದಿ ಹಾಗೂ ಇತರರು ಇದ್ದರು.