Sunday, 15th December 2024

ಬನ್ನೇರುಘಟ್ಟ: ಬಿಎಂಟಿಸಿ ಬಸ್-ಬೈಕ್ ಡಿಕ್ಕಿ, ಸವಾರನ ದಾರುಣ ಸಾವು

ಆನೇಕಲ್​: ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಶನಿವಾರ ಅಪಘಾತ ಸಂಭವಿಸಿದೆ.

ಘಟನಾ ಸ್ಥಳದಲ್ಲೇ ಬೈಕ್​ ಸವಾರ ಮೃತಪಟ್ಟ ಘಟನೆ ಬನ್ನೇರುಘಟ್ಟ ಮುಖ್ಯರಸ್ತೆಯ ಆನಂದ್ ಸಭಾ ಕಲ್ಯಾಣ ಮಂಟಪದ ಬಳಿ ಸಂಭವಿಸಿದೆ.

ಉತ್ತರಹಳ್ಳಿಯ ಯಾದಲ್ ನಗರದ ನಿವಾಸಿ ಗುಣಶಂಕರ್ ಮೃತ ದುರ್ದೈವಿ. ಬನ್ನೇರುಘಟ್ಟದಿಂದ- ಬೆಂಗಳೂರು ಕಡೆಗೆ ತೆರಳು ತ್ತಿದ್ದ ಬಿಎಂಟಿಸಿ ಬಸ್, ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಬೈಕ್​ ಸವಾರನ ಮೇಲೆ ಬಸ್​ನ ಚಕ್ರ ಹರಿದಿದೆ.

ತಲೆಯ ಕೆಲ ಭಾಗ ಛಿದ್ರವಾಗಿದ್ದು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾನೆ. ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿ ದ್ದಾರೆ.