Friday, 22nd November 2024

ಕೋವಿಡ್-19 ಪ್ರಕರಣ: ಕರ್ನಾಟಕ ಅಗ್ರಸ್ಥಾನ

ಬೆಂಗಳೂರು: ಕಳೆದ ಎರಡು ವಾರಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ಕರ್ನಾಟಕ ಕಳೆದ ವಾರ ಡಿಸೆಂಬರ್ 26 ರಿಂದ ಜನವರಿ 1ರವರೆಗೆ 276 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಆಗಿವೆ.

ಡಿಸೆಂಬರ್ 19 ರಿಂದ ಡಿ.25 ರ ನಡುವಿನ ಅವಧಿಯಲ್ಲಿ 116 ಪ್ರಕರಣಗಳು ದಾಖಲಾಗಿದ್ದವು. ಕರ್ನಾಟಕದಲ್ಲಿ 309 ಸಕ್ರಿಯ ಪ್ರಕರಣಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗು ತ್ತಿದೆ.

ಕರ್ನಾಟಕದಲ್ಲಿ ಅತ್ಯಧಿಕ ಸೋಂಕಿನ ಪ್ರಕರಣಗಳ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ವರದಿಯಾಗಿವೆ. 266 ಸಕ್ರಿಯ ಪ್ರಕರಣ ಹೊಂದಿರುವ ಬೆಂಗಳೂರು ರಾಜ್ಯದ ಕೇಂದ್ರ ಬಿಂದುವಾಗಿದೆ.  ಚೆನ್ನೈ ನಗರದಲ್ಲಿ ಕೇವಲ 27 ಸಕ್ರಿಯ ಪ್ರಕರಣಗಳು ಇವೆ.

ನಗರದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಆಗಿದ್ದರೂ ಸಹ ಆತಂಕ ಪಡುವ ಅಗತ್ಯವಿಲ್ಲ. ಸದ್ಯ ದಿನಕ್ಕೆ ಬಿಬಿಎಂಪಿಯು 5,000 ಕೋವಿಡ್ ಪರೀಕ್ಷೆ ಮಾಡುತ್ತಿದೆ.

Read E-Paper click here