Sunday, 15th December 2024

ಇಂದಿರಾ ಕ್ಯಾಂಟೀನ್ ಗೆ ಉಪಮುಖ್ಯಮಂತ್ರಿ ಭೇಟಿ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಬೆಳಗ್ಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಾರ್ಜನಿಕರ ಜೊತೆಗೆ ಉಪಹಾರ ಸೇವಿಸಿದ್ದಾರೆ.

ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ತೆರಳಿದ ಡಿಸಿಎಂ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರ ಜೊತೆಗೆ ಕೂತು ಉಪಹಾರ ಸೇವಿಸಿದ್ದಾರೆ.

ಮೊದಲು ಬೆಂಗಳೂರಿನ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ ಗೆ ಹೋಗಿದ್ದರು. ಅಲ್ಲಿ ತಿಂಡಿ ಖಾಲಿಯಾದ ಹಿನ್ನೆಲೆಯಲ್ಲಿ ದಾಸರಹಳ್ಳಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ್ದು, ಅಲ್ಲಿ ಸಾರ್ವಜನಿಕರ ಜೊತೆಗೆ ಕೂತು ಕೇಸರಿಬಾತ್, ಉಪ್ಪಿಟ್ಟು ಸೇವನೆ ಮಾಡಿದ್ದಾರೆ.