ಬೆಂಗಳೂರು: ಜಲ ಜಾಗೃತಿಗಾಗಿ ಉತ್ಸವ ಓಟವಾದ ಐಪಿಎ ನೀರಥಾನ್ 2023ರಲ್ಲಿ 1000ಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.
ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಗೌರವ ಖಡ್ಗ ಮತ್ತು ರಾಷ್ಟçಪತಿಗಳ ಸುವರ್ಣ ಪದಕ ಗೆದ್ದುಕೊಂಡಿರುವ ಮೇಜರ್ ಜನರಲ್ ವಿಕ್ರಮ್ ದೇವ್ ಡೋಗ್ರಾ ಅವರು ಈ ಓಟಕ್ಕೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಭಾವುಟ ತೋರಿಸಿ ಚಾಲನೆ ನೀಡಿದರು.
ಡೋಗ್ರಾ ಅವರು ತಮ್ಮ 58ನೇ ವಯಸ್ಸಿನಲ್ಲಿ ಐರನ್ ಮ್ಯಾನ್ ಆಸ್ಟಿçಯಾ ಸ್ಪರ್ಧೆಯನ್ನು ಜುಲೈ 01, 2018ರಂದು 14 ಗಂಟೆ ಮತ್ತು 20 ನಿಮಿಷಗಳಲ್ಲಿ ಪೂರ್ಣಗೊಳಿಸಿದರಲ್ಲದೆ, ಜಗತ್ತಿನಲ್ಲಿ ಈ ಸಾಧನೆ ಮಾಡಿದ ಮೊದಲ ಸೇವಾ ನಿರತ ಭಾರತೀಯ ಸೈನ್ಯಾಧಿಕಾರಿ ಮತ್ತು ಜಗತ್ತಿನ ಏಕೈಕ ಜನರಲ್ ಎಂಬ ಗೌರವ ಹೊಂದಿರುತ್ತಾರೆ.
ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಫೇಸ್‌ಮೇರ‍್ಸ್ನ ತರಬೇತುದಾರರಾದ ಕೆ.ಸಿ. ಪಾಣಿ, ಹಿರಿಯ ಓಟಗಾರರಾದ ಸಿದ್ಧೇಶ್ವರ್ ಮತ್ತು ಐಪಿಎ ಸದಸ್ಯರು ಭಾಗವಹಿಸಿದ್ದರು. ಓಟದ ರಾಯಭಾರಿ ಗಳಾದ ಆಕಾಂಕ್ಷ, ಭರಣಿ, ದೀಪ, ಮಮತಾ, ರೂಬಿ, ಫರ್ಹೀನ್, ಶ್ವೇತಾ, ಲವೇನಾ ಬಲೀನಾ, ಸಂಘಮಿತ್ರ, ಕಾರ್ತಿಕ್, ಪ್ರವೀಣ್, ಸಿಂತಾ, ಲಕ್ಷ್ಮೀನಾರಾಯಣ್, ಸುಬ್ರಹ್ಮಣಿಯಂ ಮತ್ತು ಪೇರ‍್ಸ್ಗಳು ಓಟದ ಸಂದರ್ಭದಲ್ಲಿ ಭಾಗವಹಿಸಿದ್ದವರಿಗೆ ಪ್ರೇರಣೆ ತುಂಬಿದರು.
*ಉದ್ಘಾಟನೆ ಸಮಯದಲ್ಲಿ ಇಂಡಿಯನ್ ಪ್ಲಂಬ್ಲಿAಗ್ ಅಸೋಸಿಯೇಷನ್‌ನ ಬೆಂಗಳೂರು ವಿಭಾಗದ ಸಂಚಾಲಕರಾದ ಶ್ರೀ ಬಿ.ಕೆ. ಪ್ರಸಾದ್ ಅವರು ಮಾತನಾಡಿ, “ಐಪಿಎ ನೀರಥಾನ್ 2023ಕ್ಕೆ ನಾವು ಅಪಾರ ಉತ್ಸಾಹ ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸಿ ದ್ದೇವೆ.
ಭಾಗವಹಿಸಿದ ಪ್ರತಿಯೊಬ್ಬರು ಜಲ ಸಂರಕ್ಷಣೆಯ ಸಂದೇಶವನ್ನು ತಮ್ಮ ಕುಟುಂಬಗಳಿಗೆ ಮಾತ್ರವಲ್ಲದೆ, ಒಟ್ಟಾರೆ ಸಮಾಜಕ್ಕೆ ಹರಡುವರು ಎಂಬ ವಿಶ್ವಾಸ ನಮಗಿದೆ. ಇಂತಹ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದವರಿಗೆ ನಾವು ಕೃತಜ್ಞರಾಗಿದ್ದೇವೆ. ಪ್ರತಿ ವ್ಯಕ್ತಿಯಿಂದ ಕೈಗೊಳ್ಳಲಾಗುವ ಜಲ ಸಂರಕ್ಷಣೆಯ ಅತ್ಯಂತ ಸಣ್ಣ ಕ್ರಮ ಕೂಡ ನಮ್ಮ ಭವಿಷ್ಯದ ಪೀಳಿಗೆಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ’’ ಎಂದರು.
18ರೊಳಗಿನ, 18ರಿಂದ 30ರ, 30ರಿಂದ 40ರ, 40ರಿಂದ 50ರ ಮತ್ತು 60ಕ್ಕೂ ಹೆಚ್ಚಿನ ವರ್ಷಗಳ ವಯೋಮಿತಿಗಳಲ್ಲಿನ ಅಲ್ಲದೆ, 10ಕೆ ಮತ್ತು 5ಕೆ ಓಟಗಳಲ್ಲಿ ಭಾಗವಹಿಸಿದ್ದ ಮೊದಲ ಮೂರು ಪುರುಷ ಮತ್ತು ಮಹಿಳಾ ವಿಜೇತರನ್ನು ಸನ್ಮಾನಿಸಲಾಯಿತು. ಭಾಗವಹಿಸಿದ ಪ್ರತಿಯೊಬ್ಬರಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಲಾಯಿತು.