Sunday, 15th December 2024

Onam Jewel Trend 2024: ಯುವತಿಯರ ಓಣಂ ಸಿಂಗಾರಕ್ಕೆ ಜತೆಯಾಗಿವೆ ವೈವಿಧ್ಯಮಯ ಆಭರಣಗಳು

Onam Jewel Trend 2024

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನಿನಿಯರ ಓಣಂ ಹಬ್ಬದ (Onam Festival) ಸಿಂಗಾರಕ್ಕೆ ನಾನಾ ಡಿಸೈನ್‌ನ ಬಂಗಾರದ ಜ್ಯುವೆಲರಿಗಳು (Gold Jewellery) ಸಾಥ್‌ ನೀಡುತ್ತಿವೆ. ಹಬ್ಬದ ಸಡಗರ-ಸಂಭ್ರಮವನ್ನು ಹೆಚ್ಚಿಸುವ ಕೇರಳ ಮೂಲದ ಈ ಟ್ರೆಡಿಷನಲ್‌ ಆಭರಣಗಳು (Onam Jewel Trend 2024) ಹಬ್ಬದ ಸೀಸನ್‌ನ ಸಂಭ್ರಮ ಹೆಚ್ಚಿಸಿವೆ. ಓಣಂ ಹಬ್ಬದ ಸಂಭ್ರಮಕ್ಕೆ ಅದಕ್ಕಾಗಿಯೇ ಮೀಸಲಾಗಿರುವ ಸೀರೆ ಹಾಗೂ ರೆಡಿಮೇಡ್‌ ಡಿಸೈನರ್‌ವೇರ್‌ಗಳಿದ್ದು, ಅವುಗಳಿಗೆ ಮ್ಯಾಚ್‌ ಆಗುವಂತೆ ಟ್ರೆಡಿಷನಲ್‌ ಜ್ಯುವೆಲರಿಗಳನ್ನು (Traditional Jewellery) ಧರಿಸುವುದು ಅಗತ್ಯ. ಯಾವುದೋ ಜಂಕ್‌ ಹಾಗೂ ಫಂಕಿ ಜ್ಯುವೆಲರಿ ಧರಿಸಿದರೇ ಮ್ಯಾಚ್‌ ಆಗುವುದಿಲ್ಲ! ಆಗೊಮ್ಮೆ ಧರಿಸಿದರೂ, ಓಣಂ ಲುಕ್‌ ಸಿಗದು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರಾಶಿ ವಾರಿಯರ್.

ಚಿತ್ರಗಳು: ನಿಖಿಲಾ ವಿಮಲ್‌, ನಟಿ

ಪರ್ಫೆಕ್ಟ್ ಓಣಂ ಲುಕ್‌ ಹೇಗೆ?

ಇನ್ನು, ಇಂದಿನ ಜನರೇಷನ್‌ ಹೆಣ್ಣುಮಕ್ಕಳು ಮಾತ್ರ ಓಣಂ ಸೀರೆ ಹಾಗೂ ಡಿಸೈನರ್‌ವೇರ್‌ಗಳನ್ನು ನಾನಾ ರೀತಿಯಲ್ಲಿ ಪ್ರೆಸೆಂಟ್‌ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಬಗೆಬಗೆಯ ಜ್ಯುವೆಲರಿಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಆದರೆ, ಟ್ರೆಡಿಷನಲ್‌ ಲುಕ್‌ ನೀಡುವ ಜ್ಯುವೆಲರಿ ಧರಿಸಿದಾಗ ಪರ್ಫೆಕ್ಟ್ ಓಣಂ ಲುಕ್‌ ಪಡೆಯಬಹುದು ಎಂದು ಸಲಹೆ ನೀಡುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್ ನಾಗವೇಣಿ.

ಸದ್ಯ ಟ್ರೆಂಡ್‌ನಲ್ಲಿರುವ ಟ್ರೆಡಿಷನಲ್‌ ಕೇರಳ ಜ್ಯುವೆಲರಿಗಳಿವು

ಈ ಹಬ್ಬದಲ್ಲಿ ಕಂಪ್ಲೀಟ್‌ ಬಂಗಾರದಲ್ಲಿ ತಯಾರಾಗಿರುವ ಜ್ಯುವೆಲರಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇನ್ನು, ಇತ್ತೀಚೆಗೆ ಬಿಡುಗಡೆಗೊಂಡ ಬಗೆಬಗೆಯ ಕಾಸು ಮಾಲೆ, ನೆಲ್ಲಿಕಾಯಿ ಮಾಲೆ, ಪಲಕ್ಕಾ ಮಾಲೆ, ಮ್ಯಾಂಗೋ ಮಾಲೆ, ನಾಗಪಾದ ತಾಳಿ, ಕಾಶಾಲಿ, ಪತಾಳಿ, ಜಾಸ್ಮಿನ್‌ ಬಡ್‌ಗಳ ವಿನ್ಯಾಸದ ನೆಕ್ಲೇಸ್‌, ಮಾವಿನಕಾಯಿ ಡಿಸೈನ್‌ನ ಹಾರ ಸೇರಿದಂತೆ ಟ್ರೆಡಿಷನಲ್‌ ಟೆಂಪಲ್‌ ಆಭರಣಗಳು, ಬಗೆಬಗೆಯ ಜುಮಕಿಗಳು, ಮುತ್ತಿನ ಕಿವಿ ಸರಪಳಿಗಳು ಹಬ್ಬದ ಲುಕ್‌ಗೆ ಸಾಥ್‌ ನೀಡಲು, ಈಗಾಗಲೇ ಜ್ಯುವೆಲರಿ ಲೋಕದಲ್ಲಿ ಬಿಡುಗಡೆಗೊಂಡು ಟ್ರೆಂಡಿಯಾಗಿವೆ.

ಈ ಸುದ್ದಿಯನ್ನೂ ಓದಿ | Star Fashion: ಅಮೆರಿಕದಲ್ಲಿ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌ ಹೈ ಸ್ಟ್ರೀಟ್‌ ಫ್ಯಾಷನ್‌!

ಓಣಂ ಹಬ್ಬದ ಆಭರಣ ಪ್ರಿಯರಿಗೆ ಒಂದಿಷ್ಟು ಸಲಹೆ

ಹಬ್ಬಕ್ಕೆ ಕೇರಳ ಡಿಸೈನ್‌ನ ಜ್ಯುವೆಲರಿ ಕೊಳ್ಳುವಾಗ ಟ್ರೆಡಿಷನಲ್‌ ಡಿಸೈನ್‌ವನ್ನು ಆಯ್ಕೆ ಮಾಡಿ.
ಕಂಪ್ಲೀಟ್‌ ಬಂಗಾರದ ಆಭರಣಗಳು ಪರ್ಫೆಕ್ಟ್ ಓಣಂ ಲುಕ್‌ ನೀಡುತ್ತವೆ.
ಉದ್ಯೋಗಸ್ಥರಿಗೆಂದು ಕಂಟೆಂಪರರಿ ಡಿಸೈನ್‌ನವು ಲಭ್ಯ.
ಹುಡುಗಿಯರಿಗೆಂದೇ ಸಿಂಪಲ್‌ ಮಾಲೆ ಹಾಗೂ ಹಾರಗಳು ದೊರೆಯುತ್ತಿವೆ.
ಮೇಕಪ್‌ ಹಾಗೂ ಸೀರೆ ಡ್ರೇಪಿಂಗ್‌ ಆದ ನಂತರ ಆಭರಣ ಧರಿಸಿ.
ಪರ್ಲ್ ಹಾಗೂ ಸ್ಟೋನ್‌ ಇರುವಂತವನ್ನು ಬ್ಲೌಸ್‌ ಮ್ಯಾಚಿಂಗ್‌ಗೆ ತಕ್ಕಂತೆ ಧರಿಸಬಹುದು.
ಬಂಗಾರದ ಸೆಟ್‌ ಧರಿಸಿದಾಗ ಆಕರ್ಷಕವಾಗಿ ಕಾಣಬಹುದು.

(ಲೇಖಕಿ, ಫ್ಯಾಷನ್‌ ಪತ್ರಕರ್ತೆ)