ಬೆಂಗಳೂರು: ರಾಜಧಾನಿಯಲ್ಲಿ (Bengaluru Crime News) ಮತ್ತೊಂದು ರೋಡ್ ರೇಜ್ (Road Rage) ಪ್ರಕರಣ ನಡೆದಿದೆ. ತನ್ನಷ್ಟಕ್ಕೇ ಹೋಗುತ್ತಿದ್ದ ದಂಪತಿಯ ಕಾರನ್ನು ಬೈಕ್ನಲ್ಲಿ ಬಂದ ಪುಂಡರು ಅಡ್ಡಗಟ್ಟಿ ನಿಲ್ಲಿಸಿ, ಬೆದರಿಕೆ ಹಾಕಿದ್ದಾರೆ. ಘಟನೆಯ ವಿಡಿಯೋ ಲಭ್ಯವಾಗಿದ್ದು, ವೈರಲ್ (Viral video) ಆಗುತ್ತಿದೆ.
ಬೆಂಗಳೂರಿನ ತುರುಬರಹಳ್ಳಿ ವಿಬ್ ಗಯಾರ್ ಶಾಲೆಯ ಬಳಿ ಘಟನೆ ನಡೆದಿದೆ. ಕಾರು ಅಡ್ಡಗಟ್ಟಿ ಉತ್ತರ ಭಾರತ ಮೂಲದ ದಂಪತಿಗಳಿಗೆ ಧಮಕಿ ಹಾಕಲಾಗಿದೆ. ವಿಡಿಯೋದಲ್ಲಿ ಕಾಣುವ ಪ್ರಕಾರ, ಎದುರಿನಿಂದ ರಾಂಗ್ ಸೈಡ್ನಲ್ಲಿ ಬಂದ ಬೈಕ್ನಲ್ಲಿದ್ದ ಪುಂಡರು ಕಾರನ್ನು ಅಡ್ಡಗಟ್ಟಿದ್ದಾರೆ ದಂಪತಿಗೆ ಇಳಿಯಲು ಸೂಚಿಸಿದ್ದಾರೆ. ಬೆದರಿಕೆ ಹಾಕಿದ್ದಾರೆ.
ಬಳಿಕ ಇತರ ವಾಹನ ಚಾಲಕರು ಸ್ಥಳದಲ್ಲಿ ನಡೆಯುತ್ತಿರುವುದನ್ನು ನೋಡಿ ವಾಹನ ನಿಲ್ಲಿಸಿ ಬರತೊಡಗಿದಾಗ, ಪುಂಡರು ಅಲ್ಲಿಂದ ಬೈಕ್ ತಿರುಗಿಸಿ ಪರಾರಿಯಾಗಿದ್ದಾರೆ. ಈ ಘಟನೆಯ ಸಂಬಂಧ ದಂಪತಿಗಳು ವೀಡಿಯೋ ಸಹಿತ ಬೆಂಗಳೂರು ನಗರ ಪೊಲೀಸರಿ ಟ್ಯಾಗ್ ಮಾಡಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಸಿಟಿಜನ್ಗಳು ಇದನ್ನು ನೋಡಿ ʼಸುರಕ್ಷತೆ ಎಲ್ಲಿದೆ?ʼ ಎಂದು ಪ್ರಶ್ನಿಸಿದ್ದಾರೆ.
ಇದೇ ವೀಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಹಂಚಿಕೊಂಡಿದ್ದಾರೆ. “ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕನಿಷ್ಠ ಪಕ್ಷ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ರಾತ್ರಿಯಾದರೆ ಪುಂಡರು, ಕಿಡಿಗೇಡಿಗಳು ನಡು ರಸ್ತೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವುದು ದಿನೇ ದಿನೇ ವರದಿಯಾಗುತ್ತಲೇ ಇವೆ” ಎಂದಿದ್ದಾರೆ.
“ತಡರಾತ್ರಿ ಕಾಡುಬೀಸನಹಳ್ಳಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಪುಂಡನೊಬ್ಬ ಬೆದರಿಸುತ್ತಿರುವ ಘಟನೆ ಉದ್ಯೋಗಿಗಳು, ಮಹಿಳೆಯರು, ನಾಗರೀಕರು ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ಓಡಾಡಲೂ ಭಯ ಪಡುವ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದೆ” ಎಂದು ಹೇಳಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕನಿಷ್ಠ ಪಕ್ಷ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ರಾತ್ರಿಯಾದರೆ ಪುಂಡರು, ಕಿಡಿಗೇಡಿಗಳು ನಡು ರಸ್ತೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವುದು ದಿನೇ ದಿನೇ ವರದಿಯಾಗುತ್ತಲೇ ಇವೆ.
— Vijayendra Yediyurappa (@BYVijayendra) October 14, 2024
ತಡರಾತ್ರಿ ಕಾಡುಬೀಸನಹಳ್ಳಿಯಲ್ಲಿ ಕಾರಿನಲ್ಲಿ… pic.twitter.com/rLuFITHob4
“ಕಳೆದ ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಳಿತಪ್ಪಿರುವುದಕ್ಕೆ ಸಾಕ್ಷಿಯಾಗಿ ಸಂಭವಿಸಿರುವ ಅನೇಕ ದುರ್ಘಟನೆಗಳು ನಮ್ಮ ಮುಂದಿವೆ, ಅಭಿವೃದ್ಧಿಯತ್ತ ಒಂದೇ ಒಂದು ಹೆಜ್ಜೆ ಇಡದ ಭ್ರಷ್ಟ ಹಗರಣಗಳ ಸರಮಾಲೆ ಹೊತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯ ವಿಷಯದಲ್ಲಾದರೂ ಜನರಿಗೆ ನೆಮ್ಮದಿ ಕೊಡುವ ಪ್ರಮಾಣಿಕ ಪ್ರಯತ್ನ ಮಾಡಲಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದರು.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಭಾರತ ಮೂಲದ ದಂಪತಿಗಳಿಂದ ದೂರು ಪಡೆದು, ಬೆಂಗಳೂರು ನಗರ ಪೊಲೀಸರು ಧಮಕಿ ಹಾಕಿದ ಪುಂಡರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: Viral Video: ಬೆಂಗಳೂರಿನಲ್ಲಿ ನೆಕ್ಸ್ಟ್ ಲೆವೆಲ್ ತಲುಪಿದ ರೋಡ್ ರೇಜ್, ಮಹಿಳೆಗೆ ಅತ್ಯಾಚಾರ-ಕೊಲೆ ಬೆದರಿಕೆ