Thursday, 7th December 2023

ಸೆ.29ರ ಬಂದ್‌ಗೆ ಮಾತ್ರ ನಮ್ಮ ಬೆಂಬಲ: ತನ್ವೀರ್ ಪಾಷಾ

ಬೆಂಗಳೂರು: ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಸೆ.29ರಂದು ನಡೆಯುವ ಬಂದ್‌ಗೆ ಮಾತ್ರ ನಮ್ಮ ಬೆಂಬಲ ಎಂದು ಓಲಾ- ಉಬರ್ ಅಸೋಸಿಯೇಶನ್ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.

ಬೆಂಗಳೂರು ಬಂದ್‌ ಬಗ್ಗೆ ಸ್ಪಷ್ಟನೆ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಉಬರ್ ಅಸೋಸಿಯೇಶನ್ ಅಧ್ಯಕ್ಷ ತನ್ವೀರ್ ಪಾಷಾ ಅವರು ಹಾಗೂ ಆದರ್ಶ್ ಆಟೋ ಹೇಳಿಕೆ ಯೂನಿಯನ್ ಅಧ್ಯಕ್ಷ ಮಂಜುನಾಥ್, ನಾವು ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿಲ್ಲ. ನಾಳೆಯ ಬಂದ್‌ಗೆ ನಮ್ಮ ಬೆಂಬಲವಿಲ್ಲ ಅಷ್ಟೇ. ಸೆಪ್ಟೆಂಬರ್‌ 29ರಂದು ನಡೆಲಿರುವ ಬಂದ್‌ಗೆ ಬೆಂಬಲ ಸೂಚಿಸಿದ್ದೇವೆ ಎಂದಿದ್ದಾರೆ.

ಎರಡು ದಿನ ಬಂದ್ ಮಾಡುವ ಪರಿಸ್ಥಿತಿಯಲ್ಲಿ ನಮ್ಮ ಚಾಲಕರ ವರ್ಗ ಇಲ್ಲ. ಆರ್ಥಿಕ ಸಂಕಷ್ಟದ ಸುಳಿಯಲ್ಲಿದ್ದೇವೆ. ಎರಡು ದಿನ ದುಡಿಮೆ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬ ಕೂಗು ನಮ್ಮ ಸಂಘಟನೆಗಳ ಚಾಲಕರದ್ದಾಗಿದೆ. ಹಾಗಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ 29ನೇ ತಾರೀಖಿನ ಕರ್ನಾಟಕ ಬಂದ್‌ಗೆ ಮಾತ್ರ ನಮ್ಮ ಬೆಂಬಲ ಎಂದು ಉಬರ್ ಅಸೋಸಿಯೇಶನ್ ಅಧ್ಯಕ್ಷ ತನ್ವೀರ್ ಪಾಷಾ ಅವರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!