Friday, 18th October 2024

ವಿದುಷಿ ಸಿಂಧು ಆರ್.ಹೆಗಡೆ ಮನಮೋಹಕ ಪ್ರದರ್ಶನ

ಜಯನಗರದ ವಿವೇಕ ಸಭಾಂಗಣದಲ್ಲಿ 25ನೇ ನವೆಂಬರ್ 2023, ಶನಿವಾರ ಸಂಜೆ ನಡೆದ “ಶ್ರೀ ಕೃಷ್ಣ ತುಲಾಭಾರ” ನೃತ್ಯ ರೂಪಕ ಕಲೆ ಹಾಗು ಶಾಸ್ತ್ರೀಯ ನೃತ್ಯದ ಅದ್ಭುತ ಸಮಾಗಮವಾಗಿತ್ತು. ವಿದುಷಿ ಸಿಂಧು ಆರ್.ಹೆಗಡೆ ಅವರ ಮನಮೋಹಕ ಪ್ರದರ್ಶನವು ತಮ್ಮ ಗುರುಗಳಾದ ‘ಕರ್ನಾಟಕ ಕಲಾಶ್ರೀ’ ಗುರು ಅಶೋಕ್ ಕುಮಾರ್ ಅವರ ಕಲಾ ಪಾಂಡಿತ್ಯ ಹಾಗು ಅದರ ಮಾರ್ಗದರ್ಶನಕ್ಕೆ ಸಾಕ್ಷಿಯಾಗಿತ್ತು.

ನಾಟ್ಯಾಂಜಲಿಯ ಹಿರಿಯ ಹಾಗೂ ನುರಿತ ಕಲಾವಿದೆಯಾದ ಸಿಂಧು ಅವರ ಬಹು ಪಾತ್ರಗಳ ಚಿತ್ರಣ, ವಿಶೇಷವಾಗಿ ಸತ್ಯಬಾಮ ಮತ್ತುರುಕ್ಮಿಣಿ, ಅವರ ಕಲಾತ್ಮಕತೆಯ ಒಂದು ರಮಣೀಯ ಪ್ರದರ್ಶನ ವಾಗಿತ್ತು, ಅವರ ಸೊಗಸಾದ ಅಭಿವ್ಯಕ್ತಿಗಳು ಮತ್ತುಮನಮುಟ್ಟುವ ಭಾವನಾತ್ಮಕ ಅಭಿನಯ ಮನೋ ರಂಜಕವಾಗಿ ಪ್ರೇಕ್ಷಕರನ್ನು ಆಕರ್ಷಿಸಿದ್ದೂ ಅಲ್ಲದೆ, ಭಾಗವತದ ಸಾರವನ್ನು ಒಳಗೊoಡ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಜೀವ ತುಂಬುವಂತಿದ್ದವು.

ಸಿಂಧು ಅವರ  ಸೂಕ್ಷ್ಮ ಮತ್ತು ಭಾವನಾತ್ಮಕ ನೃತ್ಯವು ನೋ ಡುಗರ ಗಮನ ಸೆಳೆದು, ತಡೆರಹಿತ ನಿರೂಪಣೆಯನ್ನು ಹೆಣೆಯುವಲ್ಲಿ ಯಶಸ್ವಿಯಾಯಿತು. ನೃತ್ಯ ಪ್ರದರ್ಶನವು ಪ್ರದರ್ಶಕ ಮತ್ತುನೋ ಡುಗರ ನಡುವೆ ಸ್ಪಷ್ಟವಾದ ಸಂಪರ್ಕವನ್ನು ರೂಪಿಸಿ, ತುಂಬಿದ ಸಭಾಂಗಣವು ಕಲಾವಿದೆಯಾಗಿ, ನೃತ್ಯ ಗಾರ್ತಿಯಾಗಿ ಸಿಂಧು ಅವರ ಕೌಶಲ್ಯವನ್ನು ದೃಢೀಕರಿಸಿದಂತಿತ್ತು.

ನಿರ್ಮಾಣದ ಶ್ರೀಮಂತಿಕೆ, ಗುರು ಅಶೋ ಕ್ ಕುಮಾರ್ ಅವರ ಪರಿಕಲ್ಪನೆ, ಡಾ. ವಿ.ವಿ. ಗೋ ಪಾಲ್, ಗುರು ಅಶೋ ಕ್ ಕುಮಾರ್ ಮತ್ತುವಿವೇಕ್ ಶ್ರೀಧರ್ ಅವರ ಕಥೆ, ಪ್ರವೀಣ್ ಡಿ.ರಾವ್ ಅವರ ಸುಶ್ರಾವ್ಯ ಮತ್ತುಸ್ಪಂದನಾತ್ಮಕ ಸಂಗೀತ, ಮತ್ತುವಿದುಷಿ ಅದಿತಿ ಅಶೋ ಕ್ ಅವರು ಅದ್ಭುತ ನೃತ್ಯ ಸಂಯೋಜನೆ ಈ ನೃತ್ಯ ರೂಪಕವನ್ನು ಉತ್ಕೃಷ್ಟವಾಗಿ ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿವೆ. ಈ ಪ್ರದರ್ಶನವು ಕಲೆ ಮತ್ತುಸಂಪ್ರದಾಯದ ಈ ಸಾಮರಸ್ಯದ ಮಿಲನವನ್ನು ವೀಕ್ಷಿಸಲು ನೆರೆದಿದ್ದಸಾಕಷ್ಟು ಕಲಾರಸಿಕರ ಹೃದಯದಲ್ಲಿಶಾಶ್ವತವಾದ ಸ್ಥಾನವನ್ನು ಪಡೆದುಕೊಳ್ಳುವಂತಿತ್ತು.