ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ‘ಟ್ವೀಟ್ಗಳನ್ನು ತೆಗೆದುಹಾಕಿ, ಟ್ವಿಟರ್ ಅಕೌಂಟ್ ಗಳನ್ನು ಬ್ಲಾಕ್ ಮಾಡಿ ಎಂದು ಟ್ವಿಟರ್ ಕಂಪನಿಗೆ ಆದೇಶ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿ ಭಾಗಗಳಲ್ಲಿ 2020ರ ಆಗಸ್ಟ್ನಿಂದ 2021ರ ಡಿಸೆಂಬರ್ವರೆಗೆ ಪ್ರತಿಭಟನೆ ನಡೆಸಿದ್ದರು. ಹಾಗೇ, 2020ರಿಂದ ಕೊವಿಡ್ 19 ಸಾಂಕ್ರಾಮಿಕವೂ ಪ್ರಾರಂಭವಾಯಿತು. ಈ ರೈತರ ಪ್ರತಿಭಟನೆ ಮತ್ತು ಕೊವಿಡ್ 19 ಬಗ್ಗೆ ಟ್ವಿಟರ್ನಲ್ಲಿ 2021ರಿಂದ 2022ರ ನಡುವೆ ಹಲವು ತಪ್ಪು ಮಾಹಿತಿಗಳು ಟ್ವೀಟ್ ಆಗಿದ್ದವು. ಕೆಲವು ಅಕೌಂಟ್ಗಳಂತೂ ಬರೀ ಸುಳ್ಳು ವಿಷಯಗಳನ್ನೇ ಟ್ವೀಟ್ ಮಾಡಿದ್ದವು. ಫೇಕ್ ನ್ಯೂಸ್ಗಳನ್ನು ಹಬ್ಬಿಸು ತ್ತಿರುವ ಆರೋಪ ಕೇಳಿಬಂದಿತ್ತು.
ರೈತರ ಪ್ರತಿಭಟನೆ, ಕೊವಿಡ್ 19 ಬಗ್ಗೆ ಹೀಗೆ ಸದಾ ತಪ್ಪು ಮಾಹಿತಿ ನೀಡುತ್ತಿರುವ ಒಂದಷ್ಟು ಟ್ವಿಟರ್ ಅಕೌಂಟ್ಗಳನ್ನು ಬ್ಲಾಕ್ ಮಾಡುವಂತೆ ಮತ್ತು ಅಂಥ ಟ್ವೀಟ್ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್ಗೆ ಸೂಚನೆ ನೀಡಿತ್ತು. ಆದರೆ ಟ್ವಿಟರ್ ಕೇಂದ್ರದ ಆದೇಶವನ್ನು ಪ್ರಶ್ನಿಸಿತ್ತು.