ಬೆಂಗಳೂರು: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ, ಅತಿ ವಿಶಿಷ್ಟ ಸೇವಾ ಪದಕ ಮತ್ತು ಪರಮ ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತ ವಿ.ಎಂ. ಪಾಟೀಲ್(84) ಬೆಂಗಳೂರಿನಲ್ಲಿ ನಿಧನರಾದರು.
ಲೆಫ್ಟಿನೆಂಟ್ ಜನರಲ್ ವಿ.ಎಂ.ಪಾಟೀಲ್ ಅವರು 1962ರ ಭಾರತ-ಚೀನಾ ಯುದ್ಧ ಮತ್ತು 1965ರ ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಎರಡೂ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಮೊದಲ ರಕ್ಷಣಾ ಸಲಹೆಗಾರರಾಗಿದ್ದರು.
ಇರಾನ್-ಇರಾಕ್ನಲ್ಲಿದ್ದ ವಿಶ್ವಸಂಸ್ಥೆಯ ಸೇನಾ ವೀಕ್ಷಕರ ಗುಂಪಿನ ಕಮಾಂಡರ್ ಕೂಡ ಆಗಿದ್ದರು. ಹಿರಿಯ ಸೇನಾಧಿಕಾರಿ ವಿ.ಎಂ. ಪಾಟೀಲ್ ನಿಧನಕ್ಕೆ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.