Thursday, 12th December 2024

Viral Video : ಆಟೋ ಬುಕ್ ಮಾಡಿ ರದ್ದು ಮಾಡಿದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಚಾಲಕ ಅರೆಸ್ಟ್‌

Viral Video

ಬೆಂಗಳೂರು: ಮಹಿಳೆಯೊಬ್ಬರು ಓಲಾ ಮೂಲಕ ಆಟೋ (ola auto) ಬುಕ್ ಮಾಡಿ ಬಳಿಕ ಅದನ್ನು ರದ್ದುಗೊಳಿಸಿ ಬೇರೆ ಆಟೋ ಹತ್ತಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ ಬೆಂಗಳೂರಿನ ಆಟೋ ಡ್ರೈವರ್ ಮೇಲೆ ಕೇಸ್‌ ದಾಖಲಾಗಿದೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಮಾಗಡಿ ರೋಡ್‌ ಪೊಲೀಸರು ಪ್ರಕರಣ ದಾಖಲಿಸಿ ಚಾಲಕನನ್ನು ಬಂಧಿಸಿದ್ದಾರೆ. ವಿಡಿಯೊದಲ್ಲಿ ಆರೋಪಿ ಆಟೋ ಚಾಲಕ ಮಹಿಳೆಯೊಂದಿಗೆ ತೀವ್ರ ವಾಗ್ವಾದ ನಡೆಸಿರುವುದು ಮಾತ್ರವಲ್ಲ ಮಹಿಳೆಗೆ ಕಪಾಳ ಮೋಕ್ಷ ಮಾಡಿರುವುದು ಗೊತ್ತಾಗಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ.

ಬೆಂಗಳೂರು ಪೂರ್ವ ಪೊಲೀಸ್‌ ವಿಭಾಗದ ಟ್ವೀಟ್‌ ಹ್ಯಾಂಡಲ್‌ನಲ್ಲಿ ಆರೋಪಿ ಚಾಲಕನನ್ನು ಬಂಧಿಸಿರುವ ಮಾಹಿತಿ ಪ್ರಕಟಿಸಲಾಗಿದೆ. ಆರೋಪಿಯನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಕಾನೂನಿನ ಪ್ರಕಾರ ಆತನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಬೆಂಗಳೂರಿನ ಮಹಿಳೆಯೊಬ್ಬರು ಓಲಾ ಮೂಲಕ ಆಟೋವನ್ನು ಬುಕ್ ಮಾಡಿದ್ದರು. ಬಳಿಕ ಅದನ್ನು ರದ್ದುಗೊಳಿಸಿ ತಾವು ಹೋಗಬೇಕಿರುವ ಸ್ಥಳಕ್ಕೆ ಬೇರೆ ಆಟೋ ಆಯ್ಕೆ ಮಾಡಿಕೊಂಡಿದ್ದರು. ಕ್ಯಾನ್ಸಲ್‌ ಆಗಿರುವುದಕ್ಕೆ ಕುಪಿತಗೊಂಡ ಓಲಾ ಆಟೋ ಚಾಲಕ ಆಕೆಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಮತ್ತೊಬ್ಬ ಆಟೋ ಚಾಲಕನ ಎದುರೇ ಮಹಿಳೆಗೆ ಚಾಲಕ ಕಪಾಳಮೋಕ್ಷ ಮಾಡಿದ್ದಾನೆ. ಮಹಿಳೆ ತನ್ನ ಫೋನ್‌ನಲ್ಲಿ ಇದನ್ನು ರೆಕಾರ್ಡ್ ಮಾಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿರುವ ಹಲವರು ಆಟೋ ಚಾಲಕನನ್ನು ಬಂಧಿಸಿ ಲೈಸನ್ಸ್ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಮಹಿಳೆಯರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ಹಗಲು ಹೊತ್ತಿನಲ್ಲಿ ಈ ವ್ಯಕ್ತಿಯು ಮಹಿಳೆ ಮೇಲೆ ಹಲ್ಲೆ ನಡೆಸಿದ್ದರೆ ಇನ್ನು ಏಕಾಂತ ಪ್ರದೇಶಗಳಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರು ಈ ಆಟೋರಿಕ್ಷಾ ಚಾಲಕನ ವಿರುದ್ಧ ಕಠಿಣ ಕೈಗೊಳ್ಳುವುದು ಅನಿವಾರ್ಯವಾಗಿದೆ. ಅವನ ಕಾರ್ಯಗಳು ಅಪಾಯವನ್ನುಂಟು ಮಾಡುವುದು ಮಾತ್ರವಲ್ಲದೆ ನಗರದ ಖ್ಯಾತಿಯನ್ನು ಹಾಳು ಮಾಡುತ್ತದೆ. ಓಲಾ ಚಾಲಕರನ್ನು ನೇಮಿಸಿಕೊಳ್ಳುವ ಮೊದಲು ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸಲಾಗಿದೆಯೇ ಎಂಬುದನ್ನು ತಿಳಿಸುವುದು ಮುಖ್ಯವಾಗಿದೆ. ಇಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ಎಲ್ಲಾ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸುವುದು ಅತ್ಯಗತ್ಯ ಎಂದು ಎಕ್ಸ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅನೇಕರು ಕಾಮೆಂಟ್ ವಿಭಾಗದಲ್ಲಿ ಹೇಳಿದ್ದಾರೆ.

ಮಹಿಳೆ ಹಿಂದಿಯಲ್ಲಿ ಮಾತನಾಡಿದ್ದು ಸಂಪೂರ್ಣ ವಿಡಿಯೋದಲ್ಲಿ ದಾಖಲಾಗಿದೆ. ಆಟೋ ಚಾಲಕ ಇಂಧನ ವೆಚ್ಚವನ್ನು ಯಾರು ಭರಿಸುತ್ತಾರೆ, ನಿಮ್ಮ ಅಪ್ಪ ಪಾವತಿಸುತ್ತಾರೆಯೋ ಎಂದು ಆಕ್ರೋಶದಿಂದ ಹೇಳಿದ್ದು ದಾಖಲಾಗಿದೆ.

Natasa Stankovic : ಪುತ್ರನನ್ನು ಹಾರ್ದಿಕ್ ಪಾಂಡ್ಯನ ಮನೆಯಲ್ಲಿ ಬಿಟ್ಟು ಹೋದ ಮಾಜಿ ಪತ್ನಿ ನತಾಶಾ!

ಆಟೋ ತನ್ನ ಬಳಿಗೆ ಬರಲು ಕೇವಲ ಒಂದು ನಿಮಿಷ ಇರುವಾಗ ಓಲಾ ಸವಾರಿಯನ್ನು ರದ್ದುಗೊಳಿಸಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ. ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಮಹಿಳೆ ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಕೆ ಹಾಕಿದ್ದಾಳೆ. ಆದರೆ ಚಾಲಕ ಪೊಲೀಸ್ ಠಾಣೆಗೆ ಹೋಗುವ ಬಾ ತನ್ನೊಂದಿಗೆ ಎಂದು ಮಹಿಳೆಯನ್ನು ಒತ್ತಾಯಿಸಿದ್ದಾನೆ.

ಮಹಿಳೆ ತನ್ನ ಬಳಿ ನಿಮ್ಮ ಫೋನ್ರೆ ನಂಬರ್, ಆಟೋ ವಿವರ ಇದೆ. ಅದನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗುತ್ತೇನೆ ಎಂದು ಹೇಳಿದ್ದಾಳೆ. ಇದಕ್ಕೆ ಚಾಲಕ ಇದ್ದಕ್ಕಿದ್ದಂತೆ ಅವಳಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇದರ ವಿಡಿಯೋವನ್ನು ಸೆಪ್ಟೆಂಬರ್ 5 ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದು 66,500 ವೀಕ್ಷಣೆಗಳನ್ನು ಗಳಿಸಿದೆ.

ಈ ವಿಡಿಯೋ ನೋಡಿರುವ ಅನೇಕರು, ಅವನಿಗೆ ಎಷ್ಟು ಧೈರ್ಯ, ಅವನ ಪರವಾನಗಿಯನ್ನು ರದ್ದುಮಾಡಿ ಮತ್ತು ಅವನನ್ನು ಕಂಬಿಗಳ ಹಿಂದೆ ಬಂಧಿಸಿ ಎಂದು ಹೇಳಿದ್ದಾರೆ. ಇನ್ನೊಬ್ಬ, ಬೆಂಗಳೂರು ಸಂಪೂರ್ಣ ಅಸಹ್ಯಕರವಾಗಿದೆ. ದಯವಿಟ್ಟು ಕೂಡಲೇ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ.