Saturday, 14th December 2024

ಎಂ.ಕೆ. ಆಳಗಿರಿಯ ಆಪ್ತ ಮಧುರೈನ ವಿ.ಕೆ.ಗುರುಸ್ವಾಮಿ ಸಾವು

ಬೆಂಗಳೂರು: ಬೆಂಗಳೂರಿನ ಹೋಟೆಲ್​ ನಲ್ಲಿ ಮಾರಣಾಂತಿಕ ಹಲ್ಲೆಗೀಡಾಗಿದ್ದ ಡಿಎಂಕೆ ಪಕ್ಷದ ನಾಯಕ ಎಂ.ಕೆ. ಆಳಗಿರಿಯ ಆಪ್ತ ಮಧುರೈನ ವಿ.ಕೆ.ಗುರುಸ್ವಾಮಿ (55) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ಧಾರೆ.

ವಿರೋಧಿಗಳ ಗುಂಪು ಬೆಂಗಳೂರಿನ ಬಾಣಸವಾಡಿಯಲ್ಲಿರುವ ಸುಖ್​ಸಾಗರ್​ ಹೋಟೆಲ್​ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿತ್ತು.

ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಗುರುಸ್ವಾಮಿಯನ್ನು ಸೆಪ್ಟೆಂಬರ್​ 04ರಂದು ತಮಿಳುನಾಡಿ ನಿಂದ ಹಿಂಬಾಲಿಸಿಕೊಂಡು ತಂಡ ವೊಂದು ಬಂದಿತ್ತು. ಲಿಟಿಗೇಷನ್ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಗುರುಸ್ವಾಮಿ ಬೆಂಗಳೂರಿಗೆ ಬಂದಿದ್ದ. ಹೋಟೆಲ್​ನಲ್ಲಿ ಬ್ರೋಕರ್ ಜತೆ ಮಾತನಾಡುತ್ತಿದ್ದಾಗ ಈ ದಾಳಿ ಮಾಡಲಾಗಿತ್ತು.

ಮೃತ ಗುರುಸ್ವಾಮಿ ಹಾಗೂ ಎಐಎಡಿಎಂಕೆ ನಾಯಕ ಅಟ್ಯಾಕ್ ಪಾಂಡಿಯನ್ ಜೊತೆಗೆ ಹಲವು ವರ್ಷಗಳಿಂದ ವೈರತ್ವ ಇದೆ ಎನ್ನಲಾಗಿದೆ.