Sunday, 15th December 2024

ಬಸ್ ಸೀಟಿಗಾಗಿ ಮಹಿಳೆಯರ ಚಪ್ಪಲಿಯಿಂದ ಹೊಡೆದಾಟ

ಬೀದರ್‌: ರಾಜ್ಯದಲ್ಲಿ ಜಾರಿಗೆ ತಂದ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ರಾಜ್ಯದ ಕೋಟ್ಯಾಂತರ ಮಹಿಳೆಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.

ಈ ಯೋಜನೆ ಜಾರಿಗೆ ಬಂದ ಬಳಿಕ ಸೀಟ್‌ಗಾಗಿ ಆಗ್ಗಾಗೆ ಜಗಳ ಕೂಡ ಆಗುತ್ತದೆ. ಬೀದರ್‌ನಲ್ಲಿ ಬರಿ ಜಗಳ ಮಾತ್ರವಲ್ಲ…. ಚಪ್ಪಲಿಯಲ್ಲೇ ಹೊಡೆದಾಡಿ ಕೊಂಡಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಜೊತೆಗೆ ಬಟ್ಟೆ ಎಳೆದು ಹೊಡೆದಾಡಿ ಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬೀದರ್‌ನಿಂದ ಕಲಬುರಗಿಗೆ ಹೋಗುವ ಬಸ್ಸಿನಲ್ಲಿ ಈ ಘಟನೆ ನಡೆದಿದೆ.

ಉಚಿತ ಟಿಕೆಟ್ ಪಡೆದಿದ್ದ ಇಬ್ಬರು ಮಹಿಳೆಯರು ಜೋರಾಗಿ ಕಿತ್ತಾಡಿದ್ದಾರೆ. ತುಂಬಿದ್ದ ಬಸ್‌ನಲ್ಲಿ ಎಲ್ಲರ ಮುಂದೆ ಜೋರಾಗಿ ಕೆಟ್ಟ ಕೆಟ್ಟ ಮಾತುಗಳಲ್ಲಿ ಬೈದಾಡಿಕೊಂಡಿದ್ದಾರೆ.

ಒಬ್ಬ ಯುವತಿ ಮೇಲೆ ಮೂರರಿಂದ ನಾಲ್ಕು ಜನ ಹಲ್ಲೆ ಮಾಡುತ್ತಿದ್ದಾರೆ. ಸೀಟಿನ ಮೇಲೆ ಕುಳಿತಿದ್ದ ಯುವತಿ ಬಳಿ ಸೀಟು ನನ್ನದು ಎಂದು ಮತ್ತೊಬ್ಬ ಮಹಿಳೆ ಜಗಳಕ್ಕೆ ನಿಂತಿದ್ದಾರೆ. ನಾನು ಸೀಟು ಬಿಡಲ್ಲ ಎಂಬ ಮಾತಿಗೆ ಮಾತು ಬೆಳೆದು ಜಗಳ ದೊಡ್ಡದಾಗಿದೆ. ಬಳಿಕ ಚಪ್ಪಲಿ ತೆಗೆದುಕೊಂಡು ಹೊಡೆದಾಡುವ ಹಂತಕ್ಕೆ ಹೋಗಿದೆ.

ನಿಂತಿದ್ದ ಮಹಿಳೆಯರು ಸೀಟಿನ ಮೇಲಿದ್ದ ಯುವತಿಯ ಬಟ್ಟೆ ಹಿಡಿದು ಹರಿದಿದ್ದಾರೆ. ಕೂದಲು ಹಿಡಿದುಕೊಂಡು ಎಳೆದಾಡಿದ್ದಾರೆ. ಬಳಿಕ ಅಲ್ಲೆ ಇದ್ದ ಪುರುಷರೊಬ್ಬರು ಇಬ್ಬರ ಜಗಳ ಬಿಡಿಸಿದ್ದಾರೆ.