Tuesday, 12th November 2024

ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ದ್ವೇಷಿಸುತ್ತಿರುವುದು ವಿಷಾಧನೀಯ ಸಂಗತಿ

ಇಂಡಿ: ಕಾಂಗ್ರೆಸ್ ಪಕ್ಷಕ್ಕೆ ತನ್ನದೇಯಾದ ಇತಿಹಾಸವಿದೆ. ಸುಮಾರು ಶತಮಾನಗಳಿಂದ ಭಾರತ ದಾಸ್ಯ ಸಂಕೋಲೆಯನ್ನು ಬಿಡುಗಡೆಗೊಳಿಸಿದ ಪಕ್ಷ ಕಾಂಗ್ರೆಸ್ ಇತಿಹಾಸವನ್ನು ತಿಳಿಯಬೇಕು. ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ದ್ವೇಷಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಲಾಳಸಂಗಿ ಗ್ರಾಮದಲ್ಲಿ ೨೦೨೪ರ ಲೋಕಸಭಾ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು ಸ್ವಾತಂತ್ರ‍್ಯಕ್ಕಿ೦ತ ಪೂರ್ವ ನಂತರ ದೇಶದ ಆರ್ಥಿಕ ಕ್ಷೀಣವಾಗಿತ್ತು ಎಣ್ಣೆಯಿಂದ ಬೀದಿ ದೀಪ ಬೆಳಗುವ ಪರಸ್ಥಿತಿ ಇತ್ತು ಗುಂಡು ಸೂಚಿ ತಯಾರಿಸಲಾಗದ ದೇಶ ಕಾಂಗ್ರೆಸ್ ಆಡಳಿತ ದಲ್ಲಿ ಅಣೆಕಟ್ಟು, ವಿಜ್ಞಾನ ತಂತ್ರಜ್ಞಾನ, ಆಯ್.ಆಯ್.ಟಿ, ರಸ್ತೆ, ಸಾರಿಗೆ ವಿಮಾನಯಾನ, ಕೈಗಾರಿಕೆ, ಪ್ರವಾಸೋದ್ಯಮ ಬೆಳವಣಿಗೆ, ಬಡವರಿಗೆ ಒಳ್ಳೆಯ ಆರ್ಥಿಕ ಬದ್ರತೆ ಸೇರಿದಂತೆ ಸಾಕಷ್ಟು ಬೆಳವಣಿಗೆ ಕಂಡಿದೆ.

೧೦ ವರ್ಷ ಆಡಳಿತ ಪ್ರಧಾನ ಮಂತ್ರಿ ಮೋದಿ ಸರಕಾರ ಒಂದೇ ಒಂದು ಯೋಜನೆ ಮಾಡದೆ ವಿಶ್ವಗುರು ಆಗಿದ್ದಾರೆ. ವಿಶ್ವಗುರು ಸ್ವೀಜ್ ಬ್ಯಾಂಕಿನಿ೦ದ ಕಪ್ಪ ಹಣತರುತ್ತೇನೆ ಎಂದರು ಆರ್ಥ ಮಂತ್ರಿ ನಿರ್ಮಲಾ ಸೀತಾರಾಮ ಕೇಳಿದರೆ ನನಗೆ ಗೊತ್ತಿನಲ್ಲ ಎನ್ನುತ್ತಾರೆ. ಹಾಗಾದರೆ ವಿಶ್ವಗುರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ? ನಮ್ಮ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವೀಗುಣ, ನದಿಗಳ ಜೊಡಣೆ, ಯುವಕರಿಗೆ ಉದ್ಯೋಗ ಎಂದ ಪ್ರಧಾನಿ ಇಂದು ಇಡೆರಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇಂತಹವರಿಗೆ ಸುಳ್ಳುಗಾರ ಎನ್ನದೆ ಮತ್ತೇನು ಅನ್ನಬೇಕು. ಕರ್ನಾಟಕ ಕಾಂಗ್ರೆಸ್ ವಿಧಾನ ಸಭಾ ಚುನಾವಣಾ ಸಂಧರ್ಬದಲ್ಲಿ ಪಂಚ ಗ್ಯಾರಂಟಿ ಯೋಜನೆ ಮಾತು ಕೊಟ್ಟಿತ್ತು ಇಂದು ನುಡಿದಂತೆ ಈಡೇರಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಇದು ರಾಜಕೀಯ ಬದ್ದತೆ. ಒಬ್ಬ ರಾಜಕಾರಣಿಯಾದವರಿಗೆ ಜನರ ನಾಡಿಮಿಡಿತ ಅರಿತಿರಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ ಶಾ ಬಿಟ್ಟರೆ ಕೆಂದ್ರದ ಮಂತ್ರಿಗಳು ಯಾರು ಎಂಬುದು ತಿಳಿಯುತ್ತಿಲ್ಲ. ಹಲವರ ಆಡಳಿತವಾಗದೆ ಕೆಲವರ ಆಡಳಿತವಾಗಿದೆ. ಹೀಗಾಗಿ ಲೋಕ ಸಭಾ ಚುನಾವಣೆಯಲ್ಲಿ ಪ್ರೋ ರಾಜು ಆಲಗೂರ ಇವರಿಗೆ ಗೆಲ್ಲಿಸಿ ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತಾರೆ. ಈ ಬಾರಿ ಲೋಕ ಸಭಾ ಚುನಾವಣೆ ದೇಶದ ದಿಕ್ಸೋಚಿ ರಾಜು ಗೆಲುವಲ್ಲ. ಇದು ನನ್ನ ಗೆಲುವು ಜಿಲ್ಲೆಯಲ್ಲಿ ಯಾವುದೂ ವಿಧದಲ್ಲಿ ಕಪ್ಪು ಚುಕ್ಕೆ ಇದೆ. ಮತದಾರ ಬಂಧು ಗಳು ಇದೊಂದು ಬಾರಿ ನನಗೆ ಯಾವ ರೀತಿಯಲ್ಲಿ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದೀರಿ ಹಾಗೆ ಪ್ರೊ.ರಾಜು ಆಲಗೂರ ಇವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಮದ್ದಾನೆ ಮಹಾರಾಜರು ದಿವ್ಯಸಾನಿಧ್ಯ ವಹಿಸಿದರು. ಗ್ಯಾರಂಟಿ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ರುದ್ರೇಶ ಅಲಗೊಂಡ, ಭೀಮಣ್ಣಾ ಕೌಲಗಿ,ಸೇರಿದಂತೆ ಗ್ರಾಮದ ಮುಖಂಡರು ಇದ್ದರು.