ಚಿಂತಾಮಣಿ: ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ರಚಿಸಿದ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಬಾಂಬೆ ಚಲೋ ಕಾರ್ಯಕ್ರಮಕ್ಕೆ ತಾಲೂಕಿನ ತಳಗವಾರ ಗ್ರಾಮದಿಂದ ಅಂಬೇಡ್ಕರ್ ಸೇವ ಸಮಿತಿ ಪದಾಧಿಕಾರಿಗಳು ಚಾಲನೆ ನೀಡಿದರು.
ನಂತರ ಮಾತನಾಡಿದ ಮಹಾ ನಾಯಕ ಡಾ!ಬಿ ಆರ್ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ತಳಗವಾರ ಎಂ ರಮೇಶ್ ಇದೇ ಮೊದಲ ಬಾರಿಗೆ ಬಾಂಬೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಮಹಾನ್ ನಾಯಕ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಣಾ ದಿನಾಚರಣೆಯನ್ನು ಬಾಂಬೆಯಲ್ಲಿ ಆಚರಿಸಲು ಹೊರಡುತ್ತಿದ್ದೇವೆ ಅಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪ ಬೆಳಗಿಸಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರಾದ ವೆಂಕಟರಾಯಪ್ಪ,ರಾಜ್ಯಉಪಾಧ್ಯಕ್ಷ ಜಂಗಮಶಿಗೆಹಳ್ಳಿ ದೇವರಾಜ್,ರಾಜ್ಯ ಸಂಚಲಕ ತಳಗವಾರ ಟಿ.ಎಂ ಜೈಪಾಲ್ ,ರಾಜ್ಯ ಸದಸ್ಯ ನಾರಾಯಣಸ್ವಾಮಿ,ತಾಲ್ಲೂಕು ಸದಸ್ಯರಾದ ಬೈರಪ್ಪ ,ಶಿಡ್ಲಘಟ್ಟ ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷ ಚಿಮಂಗಲ ಲಕ್ಷಿö್ಮÃ,ಸದಸ್ಯರಾದ ಮಂಜುಳಾ ,ನಾಗಮಣಿ , ಅನಿತಾ,ನಂದಿನಿ,ಕನಕ,ರಾಜಮ್ಮ,ಲಕ್ಷ್ಮಮ್ಮ,ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: chikkaballapurnews