Thursday, 28th November 2024

ಟಿಎಚ್ಎಸ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

ತುಮಕೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಟಿಎಚ್ಎಸ್ ಆಸ್ಪತ್ರೆಯಲ್ಲಿ  ಹಮ್ಮಿ ಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಸ್ಪತ್ರೆಯ ಛೇರ್ಮನ್ ಡಾ.ವಿಜಯಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ.ಪಿ.ಸುರೇಶ್‌ ಬಾಬು ಉದ್ಘಾಟಿಸಿದರು.
ರಾಜ್ಯೋತ್ಸವದ ಅಂಗವಾಗಿ ಒಂದು ತಿಂಗಳ ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆ ಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಛೇರ್ಮನ್ ಡಾ. ವಿಜಯಕುಮಾರ್ ಮಾತನಾಡಿ, ಮಹಿಳೆಯರು ತಮ್ಮ ಖಾಯಿಲೆಗಳನ್ನು ಹೇಳಿಕೊಳ್ಳದೆ ಅದು ಉಲ್ಬಣವಾದಾದಾಗ ತಪಾಸಣೆ ಮಾಡಿಸದೆ ಕೊನೆ ಕ್ಷಣದಲ್ಲಿ ಬರುತ್ತಾರೆ. ಆ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ರಾಜ್ಯೋತ್ಸವ ಪ್ರಯುಕ್ತ ಒಂದು ತಿಂಗಳು ಉಚಿತ ಸ್ತೀರೋಗ ತಪಾಸಣೆ ಏರ್ಪಡಿಸ ಲಾಗಿದ್ದು, ಸ್ತೀಯರಿಗೆ ಸಂಬ0ಧಿಸಿದ ಗರ್ಭ ರೋಗ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಖಾಯಿಲೆ ಗಳ ಮ್ಯಾಮೋಗ್ರಫಿಯನ್ನು ಉಚಿತವಾಗಿ ಮಾಡಲಾಗುತ್ತದೆ. ಗರ್ಭಕೋಶ ತಪಾಸಣೆಗೆ ಪ್ಲಾಪ್‌ಸ್ಮಿಯರ್ ಟೆಸ್ಟ್, ಅಲ್ಟಾçಸೌಂಡ್ ಸ್ಕಾö್ಯನ್ ಉಚಿತವಾಗಿ ಮಾಡಲಾಗುತ್ತದೆ ಇದನ್ನು ವಿಶೇಷವಾಗಿ 40 ವರ್ಷ ಮೇಲ್ಪಟ್ಟ ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ.ಪಿ.ಸುರೇಶ್‌ಬಾಬು ಮಾತನಾಡಿ, ಸ್ತ್ರೀ ರೋಗಕ್ಕೆ  ಸಂಬಂಧಿಸಿದ ಮಹಿಳಾ ತಜ್ಞರಾದ ಡಾ. ಪ್ರತಿಭಾ ಹಾಗೂ ಡಾ. ಹೇಮಾವತಿ ನುರಿತ ಸ್ತ್ರೀ ತಜ್ಞರಾಗಿದ್ದು, ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖ್ಯಅತಿಥಿಗಳಾಗಿದ್ದ ವೀರಶೈವ ಮಹಿಳಾ ಸಂಘದ ಕಾರ್ಯದರ್ಶಿ ಶಿವಲಿಂಗಮ್ಮ, ಕನಕ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ರಾದ ಸುನಿತ ನಟರಾಜನ್, ಮಹಿಳಾ ತಜ್ಞರಾದ ಡಾ. ಪ್ರತಿಭಾ, ಡಾ. ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.