ಮಧುಗಿರಿ : ವಿಕಾಸ ಸಮಿತಿ ವತಿಯಿಂದ ಕನ್ನಡರಾಜ್ಯೋತ್ಸವ & ಪುನೀತ್ ಪುಣ್ಯಸ್ಮರಣೆ ಅಂಗವಾಗಿ ನ .೧೩ ರಂದು ಭಾನುವಾರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦ ರಿಂದ ೨ ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಮತ್ತು ಕನ್ನಡರತ್ನ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ . ಆರೋಗ್ಯ ತಪಾಸಣೆಯನ್ನು ಸಿದ್ದಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆಯ ಮೂಲಕ ನಡೆಸಲಾಗುತ್ತದೆ.
ಈ ತಪಾಸಣೆಯಲ್ಲಿ ಮಧುಮೇಹ ತಜ್ಞರು, ಮೂಳೆ ಮತ್ತು ಕೀಲು ತಜ್ಞರು ಸ್ತ್ರೀರೋಗ ತಜ್ಞರು, ಇಎನ್ಟಿ ತಜ್ಞರು ಮತ್ತು ಜನರಲ್ ಸರ್ಜನ್ ಲಭ್ಯವಿರುತ್ತಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಸಂಜೆ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯರವರ ನೇತೃತ್ವದಲ್ಲಿ ಸಂಗೀತ ರಸ ಸಂಜೆ ಯನ್ನು ಆಯೋಜಿಸ ಲಾಗಿರುತ್ತದೆ ಎಂದರು.
ಕನ್ನಡ ಪರ ಸಂಘಟನೆ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಹನುಮಂತೇಗೌಡ ರವರು ಮಧುಗಿರಿ ಜನತೆಗೆ ಅದ್ಬುತ ವಾದ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದ್ದಾರೆ, ರಕ್ತ ದಾನ ಮಾಹಾ ದಾನ ಜನರ ಜೀವ ಉಳಿಸುವಂತಹ ಈ ರಕ್ತ ಧಾನ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜಣ್ಣ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರಾದ ಎ.ಶಿವಕುಮಾರ್, ರಾಘವೇಂದ್ರ, ರೋಹಿತ್, ಸಯ್ಯದ್ ಮುಜಾಮಿಲ್ ಪಾಷಾ, ಮತಿತ್ತರರು ಇದ್ದರು.