Sunday, 15th December 2024

ಕಾಂಗ್ರೆಸ ಗ್ಯಾರಂಟಿ ಕಾರ್ಡ ವಿತರಣೆ

ಕೊಲ್ಹಾರ: ಭಾರತ ದೇಶದ ಚಾರಿತ್ರಿಕ ಇತಿಹಾಸದಲ್ಲಿ ಕಾಂಗ್ರೆಸ ಪಕ್ಷ ಸಮಾನತೆ, ಸಹಕಾರ, ಸಹಬಾಳ್ವೆಗೆ ಆದ್ಯತೆ ನೀಡುವ ಮೂಲಕ ಸರ್ವರನ್ನು ಸಮಾನತೆಯಿಂದ ಕಂಡಿದೆ ಎಂದು ಪ.ಪಂ ಸದಸ್ಯ ತೌಶಿಪ ಗಿರಗಾವಿ ಹೇಳಿದರು.

ಪಟ್ಟಣದ ವಾರ್ಡ್ ಸಂಖ್ಯೆ 9 ಹಾಗೂ 16 ರಲ್ಲಿ ಕಾಂಗ್ರೆಸ ಗ್ಯಾರಂಟಿ ಕಾರ್ಡ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡು ಅವರು ಮಾತನಾಡಿದರು ರಾಜ್ಯದಲ್ಲಿ ಚುನಾವಣೆ ಮುಂಚೆ ಕಾಂಗ್ರೆಸ ಪಕ್ಷ ನೀಡಿದ ಪಂಚ ಭರವಸೆಗಳನ್ನ ಈಡೇರಿಸಿದೆ ಕೇಂದ್ರದಲ್ಲೂ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಆಗಮಿಸಿ ನೀಡಿದ ಭರವಸೆಗಳನ್ನ ಈಡೇರಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ ಯುವ ಮುಖಂಡ ಇಕ್ಬಾಲ್ ನದಾಫ ಮಾತನಾಡಿ ದೇಶದ ಜನರಿಗಾಗಿ ಕಾಂಗ್ರೆಸ ಪಕ್ಷ ಗ್ಯಾರಂಟಿಗಳನ್ನ ಜಾರಿಗೆ ತರುವ ಭರವಸೆ ನೀಡಿದೆ ಹಾಗಾಗಿ ದೇಶದ ಹಿತಾಸಕ್ತಿಯ ಬಗ್ಗೆ ಚಿಂತಿಸುವ ಕಾಂಗ್ರೆಸ ಪಕ್ಷಕ್ಕೆ ಆಶಿರ್ವಧಿಸಿ ಇಬ್ಬಗೆಯ ನೀತಿ ಅನುಸರಿಸುವ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಎಂದರು.
ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ ಮುಖಂಡರು ಇದ್ದರು.

ಪ.ಪಂ ಸದಸ್ಯ ರಾಜಮಾ ನದಾಫ, ಬ್ಲಾಕ್‌ ಕಾಂಗ್ರೆಸ ಅಧ್ಯಕ್ಷ ಮುಸ್ಕಾನ ಶಿರಬೂರ, ಇಕ್ಬಾಲ್ ನದಾಫ, ಮೈನು ಜಾಲಗಾರ, ಗುಡುಸಾಬ ಜಾಲಗಾರ, ರಾಜೇಸಾಬ ಜಾಲಗಾರ, ದಸ್ತಗೀರಸಾಬ ಕಾಖಂಡಕಿ, ಹಾಜಿ ಕಂಕರಪೀರ, ರಪೀಕ ಕೂಡಗಿ, ರಪೀಕ ಹವಾಲ್ದಾರ, ಸೈಯದ ಕಮತಗಿ, ಹಾಜಿ ಶಿರಬೂರ, ರಾಜು ಶಿರುರ, ಅಲ್ತಾಪ ಜಮಾದಾರ ಹಾಗೂ ಇನ್ನಿತರರು ಇದ್ದರು.