ಚಿಕ್ಕನಾಯಕನಹಳ್ಳಿ : ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ, ಕೃಷಿ ಜಮೀನಿನ ಸ್ವಾಧೀನ ತೆರವುಗೊಳಿಸಿ, ದೈಹಿಕ ಹಲ್ಲೆ, ಜಾತಿ ನಿಂದನೆ ಮಾಡಿರುವವರ ವಿರುದ್ದ ಕ್ರಮ ಜರುಗಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಬದಿಯಾನಾಯ್ಕ ಕುಟುಂಬ ದವರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನಲೆ : ಹುಳಿಯಾರು ಹೋಬಳಿಯ ಅಂಬಾರಪುರ ಗ್ರಾಮದ ಸರ್ವೆನಂ ೬ ರಲ್ಲಿ ಹುಸೇನ್ಬೀಅಮ್ಮ ಅವರಿಂದ ೭.೧೪ ಎಕರೆ, ಮತ್ತು ಕೆ.ವಿ.ಪುಟ್ಟಣ್ಣನವರಿಂದ ೭.೧೪ ಎಕರೆ ಜಮೀನನ್ನು ೧೯೫೬ ರಲ್ಲಿ ಮೇಘನಾಯ್ಕ ಖರೀದಿಸಿದ್ದರು. ನಂತರ ದುರಸ್ತಾಗಿ ಪ್ರತ್ಯೇಕ ಪೋಡಾಗಿ ಸರ್ವೆ ನಂ ೬/೧ ರಲ್ಲಿ ೭.೨೫ ಎಕರೆ, ೬/೨ ರಲ್ಲಿ ೭.೦೮ ಎಕರೆ ಒಟ್ಟು ೧೪.೨೦ ಎಕರೆ ಜಮೀನು ಇವರ ಹೆಸರಿಗೆ ದಾಖಲಾಯಿತು.
ಸದರಿ ೧೪.೨೦ ಎಕರೆ ಜಮೀನಿಲ್ಲಿ ಮೇಘನಾಯ್ಕು÷ ಕುಟುಂಬದವರು ಅನುಭವದಲ್ಲಿ ದ್ದಾರೆ. ನೊಣವಿನಕೆರೆ ಹೊಬಳಿಯ ಹುಲ್ಲೇಕೆರೆ ಗ್ರಾಮದ ಶಿವಕುಮಾರ್ ೧೯೯೨ ರಲ್ಲಿ ಈ ಜಮೀನಿನ ಖಾತೆ ಪಹಣಿ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದು ಇದು ವಜಾಗೊಂಡಿರುತ್ತದೆ.
ಮೇಘನಾಯ್ಕ ನಿಧನ ಹೊಂದಿದ ನಂತರ ಶಿವಕುಮಾರ್ ಉಪವಿಭಾಗಾಧಿಕಾರಿಗಳ ಆದೇಶವನ್ನು ಮರೆಮಾಚಿ ಸರ್ವೆ ನಂ ೬.೧ ರ ೭.೨೫ ಎಕರೆ ಜಮೀನಿಗೆ ಅಕ್ರಮ ಖಾತೆ ಮಾಡಿಸಿ ಗುಟ್ಟಾಗಿ ನೊಣವಿನಕೆರೆ ಹೊಬಳಿಯ ಸಾಸಲಹಳ್ಳಿ ಗ್ರಾಮದ ಲಕ್ಷಿö್ಮÃಶ ಎಂಬುವರಿಗೆ ಮಾರಾಟ ಮಾಡಿದ್ದಾರೆ.
ಅಕ್ರಮ ಖಾತೆ ವರ್ಗಾವಣೆ ಕುರಿತು ಚಿ.ನಾ.ಹಳ್ಳಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದಾಗ ಜೂ.೨೧.೨೦೧೯ರಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಈ ತೀರ್ಪಿನ ವಿರುದ್ದ ಯಾರು ಮೇಲ್ಮನವಿ ಸಲ್ಲಿಸಿಲ್ಲ ಎಂದು ನಾಗರಾಜನಾಯ್ಕ ಧೃಢಿಕರಿಸಿದರು.
ಅಕ್ರಮ ಖಾತೆದಾರರು ಪೋಲೀಸರ ಮೂಲಕ ನಮ್ಮ ಕುಟುಂಬಕ್ಕೆ ಜಾಗ ತೆರವುಗೊಳಿಸುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ನ್ಯಾಯಾ ಲಯದ ತೀರ್ಪನ್ನು ಪರೀಶೀಲಿಸದೆ ಹುಳಿಯಾರು ಪೋಲೀಸರು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಹೆಣ್ಣು ಮಕ್ಕಳು ಎಂದು ಕನಿಕರವಿಲ್ಲದೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ.
ನ್ಯಾಯಾಲಯದ ಓ.ಎಸ್.ನಂ ೫/೨೦೧೪ ಆದೇಶವನ್ನು ಉಲ್ಲಂಘಿಸಿ ಅಕ್ರಮ ಪ್ರವೇಶ ಮಾಡಿರುವ ಖಾತೆದಾರರು ಹಾಗು ಪೋಲೀಸರ ಮೇಲೆ ನ್ಯಾಯಾಂಗ ನಿಂದನೆ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಂಡು ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸು ವಂತೆ ನಾರಾಯಣನಾಯ್ಕ, ಚಂದ್ರನಾಯ್ಕ ಮನವಿಯಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರನ್ನು ದಾಖಲಿಸಿದ್ದಾರೆ.