ಕಳ್ಳರನ್ನ ಹಿಡಿಯಲು ಹೋದವರ ಮೇಲೆಯೇ ಮಚ್ಚಿನಿಂದ ಅಟ್ಯಾಕ್‌ಗೆ ಯತ್ನ
ಸಿನಿಮೀಯ ಶೈಲಿಯಲ್ಲಿ ಪೆಪ್ಪರ್ ಸ್ಪ್ರೆ ಹೊಡೆದು ಕಳ್ಳರ ಹಿಡಿಯುವ ಯತ್ನ.!
ಸಾರ್ವಜನಿಕರ ಮೇಲೆಯೇ ಮಚ್ಚು ಬೀಸಿ ಪರಾರಿಯಾದ ಕಿಲಾಡಿ ಕಳ್ಳರು…!
ಚಿಕ್ಕಬಳ್ಳಾಪುರ : ಹಾಡಹಗಲೇ ಬೈಕ್ ಅಡ್ಡಗಟ್ಟಿದ ಕಳ್ಳರು ಮಚ್ಚು ತೋರಿಸಿ ಬೈಕ್ ಸವಾರರ ಬಳಿ ಇದ್ದ ನಗದು ಮೊಬೈಲ್ ದೋಚಿ ಪರಾರಿಯಾಗಿರುವ ಪ್ರಕರಣ ನಂದಿಗಿರಿಧಾಮ ಪೊಲೀಸ್‌ಠಾಣೆ ವ್ಯಾಪ್ತಿ ಕುಡುವತಿ ಗ್ರಾಮದ ಸರಹದ್ದಿನಲ್ಲಿ ನಡೆದಿದೆ.
ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕುಡುವತಿ ಗ್ರಾಮದಿಂದ ಹುರುಳಗುರ್ಕಿ ಗ್ರಾಮಕ್ಕೆ ತೆರಳುವ ರಸ್ತೆ ನಡುವೆ ಶನಿವಾರ ನಡೆದಿದೆ ಎನ್ನಲಾಗಿದೆ.ಇನ್ನೂ ನಗದು ದೋಚಿ ಪರಾರಿಯಾಗಿದ್ದ ಕಳ್ಳರನ್ನು ಹಿಡಿಯಲು ಬಂದ ಸಾರ್ವಜನಿಕರ ಮೇಲೆಯೇ ಹಾಡುಹಗಲೇ ಮತ್ತೆ ಮಚ್ಚು ಬೀಸಿ ಪರಾರಿಯಾಗಿದ್ದಾರೆ.
ಇವರು ದರೋಡೆ ಮಾಡಿರುವ ಚಿತ್ರವನ್ನು ನೋಡಿದರೆ ಎಂಥಹವರಿಗೂ ಭಯ ಉಂಟಾಗುತ್ತದೆ. ಥೇಟ್ ಸಿನಿಮಾ ಶೈಲಿಯಲ್ಲಿ ನಡೆದ ಈ ಘಟನೆಯನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು,ಸದರಿ ದೃಶ್ಯಾವಳಿ ಸಿಸಿಟಿವಿ ಯಲ್ಲೂ ಸೆರೆಯಾಗಿದೆ.
ರಸ್ತೆ ಮಧ್ಯೆ ಬೈಕ್ ಸವಾರನೊಬ್ಬನನ್ನು ಅಟ್ಟಗಟ್ಟಿದ ಇಬ್ಬರು ದರೋಡೆಕೋರರು ಆತ ತಪ್ಪಿಸಿಕೊಂಡು ಜಮೀನಿ ನತ್ತ ಓಡಿ ಹೋದರೂ ಬಿಡದೆ ಮಚ್ಚು ಹಿಡಿದು ಬೆದರಿಸುತ್ತಾ ಆತನ ಬಳಿ ಇರೋ ನಗದನ್ನು ಲೂಟಿ ಮಾಡಿದ್ದಾರೆ. ಇಬ್ಬರ ಪೈಕಿ ಒಬ್ಬ ರಾಬರಿ ಮಾಡಿದರೆ ಮತ್ತೊಬ್ಬ ಬೈಕ್ ಆನ್ ಮಾಡಿಕೊಂಡೇ ಇದ್ದು ಕೆಲಸ ಮುಗಿದ ನಂತರ ಎಸ್ಕೇಪ್ ಆಗಿದ್ದಾರೆ. ಈ ಇಬ್ಬರನ್ನು ಹಿಡಿಯಲು ಮುಂದಾದ ಸಾರ್ವಜನಿಕರು ಹಾಗೂ ಕಳ್ಳರ ಮಧ್ಯೆ ಸಣ್ಣ ಫೈಟ್ ನಡೆದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಘಟನೆಯನ್ನು ಮನೆಯಲ್ಲಿದ್ದ ಒಬ್ಬ ಮಹಿಳೆ ಮೊಬೈಲ್ ಮೂಲಕ ಸೆರೆ ಹಿಡಿದಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಸಕತ್ ವೈರಲ್ ಆಗಿದೆ.
ಇನ್ನೂ ಮಹಿಳೆ ಮಾಡಿದ್ದ ವಿಡಿಯೋ ವಾಟ್ಸಾಫ್ ಮೂಲಕ ಸ್ನೇಹಿತರು ಹಾಗೂ ಸಂಬ0ಧಿಕರಿಗೆ ಕಳುಹಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆ ಗೇಟ್ ಬಳಿ ಮೆಡಿಕಲ್ಸ್ ಶಾಪ್ ಇಟ್ಟಿರುವ ಪ್ರದೀಪ್ ಪರಿಶೀಲನೆ ಮಾಡಿದಾಗ ರಾಬರಿ ಮಾಡಿರುವ ಇಬ್ಬರು ಹಾಗೂ ಬೈಕ್ ತಮ್ಮ ಮೆಡಿಕಲ್ ಶಾಪ್ ಮುಂಭಾ ಗದ ಅಂಗಡಿ ಮುಂದೆಯೇ ಇರುವ ನಂದಿನಿ ಬೂತ್ ಬಳಿ ಇರುವುದು ಕಂಡಿದೆ. ಕೂಡಲೇ ಜಾಗೃತರಾದ ಇವರು ಕುಡುವತಿ ಗ್ರಾಮಸ್ಥರಿಗೂ ಮಾಹಿತಿ ನೀಡಿ, ಎಲ್ಲರೂ ಸೇರಿ ಕಳ್ಳರ ಮುಖಕ್ಕೆ ಪೆಪ್ಪರ್ ಸ್ಪೆç ಹೊಡೆದು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈಸಂದರ್ಭದಲ್ಲಿ ಕಳ್ಳರು ಸ್ಥಳೀಯರ ಜೊತೆ ಹೊಡೆದಾಟ ಬಡಿದಾಟ ಮಾಡಿಕೊಂಡು ಕೊನೆಗೆ ಮಚ್ಚು ತೋರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಎಸ್ಪಿ ಕುಶಾಲ್ ಚೌಕ್ಸೆ ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದು ತನಿಖೆ ಕೈಗೊಂಡಿದ್ದೇವೆ.ದರೋಡೆಗೆ ಒಳಗಾದವರು ಖಾಸಗಿ ಫೈನಾನ್ಸ್ ಕಂಪನಿಗೆ ಸೇರಿದವರಾಗಿದ್ದಾರೆ. ಅವರನ್ನು ಬಲ್ಲವರೇ ಫಾಲೋ ಮಾಡಿ ಕೃತ್ಯ ಎಸಗಿರಬಹುದು ಅಂತ ಅಂದಾಜಿಸಲಾಗಿದೆ ಎಂದಿದ್ದಾರೆ.
ಇನ್ನೂ ಕಳ್ಳರು ಕೃತ್ಯಕ್ಕೆ ಬಳಸಿರುವ ಫೇಜರ್ ಯಮಹಾ ಬೈಕ್‌ನ ನಂಬರ್ ಸಹ ನಕಲಿ ಎಂದು ತಿಳಿದುಬಂದಿದ್ದು ಈ ಸಂಬAಧ ಪ್ರಕರಣ ದಾಖಲಿಸಿಕೊಂಡಿರುವ ನಂದಿಗಿರಿಧಾಮ ಪೊಲೀಸರು ಕಳ್ಳರ ಬೆನ್ನುಹತ್ತಿದ್ದಾರೆ ಎನ್ನಲಾಗಿದ್ದು ಆದಷ್ಟು ಬೇಗ ಖದೀಮರ ಹೆಡೆಮುರಿ ಕಟ್ಟಲಿಲ್ಲ ಎಂದರೆ ಸಾರ್ವಜನಿಕ ವಲಯದಲ್ಲಿ ಭಾರೀ ಆತಂಕ ಸೃಷ್ಟಿಯಾಗಿ ಪೊಲೀಸರ ಮೇಲಿನ ನಂಬಿಕೆಯೇ ಹುಸಿಯಾಗಲಿದೆ ಎನ್ನುವುದು ಸ್ಥಳೀಯರ ಮಾತಾಗಿದೆ.