Monday, 25th November 2024

Chikkaballapur News: ದೇವಾಲಯದ ಹೋರಾವರಣದ ಪ್ರಾಂಗಣದಲ್ಲಿ ಬ್ರಹ್ಮರಥೋತ್ಸವದ ಅದ್ಧೂರಿ ಮೆರವಣಿಗೆಗೆ ಡಿ.ಸಿ ಚಾಲನೆ

ಜನಸಾಗರದ ನಡುವೆ ಸಾಂಗವಾಗಿ ನೆರವೇರಿದ ಭೋಗನಂದೀಶ್ವರ ಪಾರ್ವತಿ ಅಮ್ಮನವರ ಬ್ರಹ್ಮರಥೋತ್ಸವ

ಚಿಕ್ಕಬಳ್ಳಾಪುರ : ಇತಿಹಾಸ ಪ್ರಸಿದ್ಧ ನಂದಿಗ್ರಾಮದ ಭೋಗನಂದೀಶ್ವರನ ಸನ್ನಿಧಿಯಲ್ಲಿ ಇದೇ ಮೊದಲ ಬಾರಿಗೆ ಕಾರ್ತಿಕ ಮಾಸದ ಕಡೇ ಸೋಮವಾರ ಮದ್ಯಾಹ್ನ ೧೨ಕ್ಕೆ ಸಹಿತಗಿರಿಜಾಂಭ ಸಹಿತ ಭೋಗನಂದೀಶ್ವರಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥದ ದಾನಿ ವೆಂಕಟೇಗೌಡರು ನೂತನವಾಗಿ ನಿರ್ಮಿಸಿ ಕೊಟ್ಟಿರುವ ಬ್ರಹ್ಮರಥದಲ್ಲಿಟ್ಟು ಸಹಸ್ರಾರು ಭಕ್ತಗಣದ ನಡುವೆ ರಥೋತ್ಸವಕ್ಕೆ ವಿದ್ಯೂಕ್ತವಾಗಿ ಚಾಲನೆ ನೀಡಲಾಯಿತು.

ರಥೋತ್ಸವದ ಅಂಗವಾಗಿ ತಾಲೂಕಿನ ನಂದಿಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಶ್ರೀಭೋಗನಂದೀಶ್ವರನ ದೇವಾಲಯದಲ್ಲಿ ಭಾನುವಾರ ದಿಂದಲೇ ಹಬ್ಬದ ಸಂಭ್ರಮ ಮನೆ ಮಾಡಿತ್ತು.ಮಹಾಶಿವರಾತ್ರಿಯ ಮಾರನೇ ದಿನ ನಡೆಯುವ ಜೋಡಿಕಲ್ಲಿನ ರಥೋತ್ಸವ ನೋಡಲು ಸೇರುವ ಜನಜಾತ್ರೆಯಂತೆಯೇ ಸೋಮವಾರದ ಕಾರ್ತಿಕ ರಥೋತ್ಸವಕ್ಕೂ ಜನಜಾತ್ರೆಯೇ ನೆರೆದಿತ್ತು.

ಹೌದು ನಂದಿಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಭೋಗನಂದೀಶ್ವರ ದೇವಾಲಯದಲ್ಲಿ ಅರುಣಾಚಲೇಶ್ವರ,ಉಮಾಮಹೇಶ್ವರ ಭೋಗನಂದೀಶ್ವರ, ಗಿರಿಜಾAಭ ದೇವರಿಗೆ ನಿತ್ಯವೂ ಪೂಜೆ ನಡೆಯುವಂತೆ ಕಾರ್ತಿಕ ಮಾಸ ಮತ್ತು ಮಹಾಶಿವರಾತ್ರಿಯಂದು ವಿಶೇಷವಾಗಿ ಧಾರ್ಮಿಕ ಆಚರಣೆಗಳು ನೆರವೇರುತ್ತವೆ.

೨೦೨೨ರ ಮಹಾಶಿವರಾತ್ರಿಯಂದು ಉಮಾಮಹೇಶ್ವರಿ ಸಹಿತಿ ಶ್ರೀಭೋಗನಂದೀಶ್ವರಸ್ವಾಮಿಯಿದ್ದ ಪ್ರಧಾನ ಕಲ್ಲಿನ ರಥದ ಅಚ್ಚು ಮುರಿದಿತ್ತು.ಈ ಸಂದರ್ಭದಲ್ಲಿ ಶುಭ ಅಶುಭದ ಚರ್ಚೆಗಳು ಸಾಕಷ್ಟು ನಡೆದಂತೆ ನೂತನ ರಥನಿರ್ಮಾಣದ ಬಗ್ಗೆಯೋ ಚರ್ಚೆಗಳು ಮುನ್ನೆಲೆಗೆ ಬಂದಿತ್ತು.ಈ ಸಂಬAಧ ಮಾಹಿತಿ ಪಡೆದ ಗ್ರಾನೈಟ್ ಉಧ್ಯಮಿ ಹುರುಳುಗುರ್ಕಿ ಗ್ರಾಮದ ವೆಂಕಟೇಗೌಡರು ರಥಮಾಡಿಸಿಕೊಡಲು ಮುಂದೆ ಬಂದರಲ್ಲದೆ, ಕೋಟೇಶ್ವರದ ರಥದ ಶಿಲ್ಪಿ ಲಕ್ಷಿö್ಮÃನಾರಾಯಣಾಚಾರ್ ಅವರನ್ನು ಸಂಪರ್ಕಿಸಿ ೨ಕೋಟಿ ವೆಚ್ಚದಲ್ಲಿ ನೂತನ ರಥವನ್ನು ಸಿದ್ಧಪಡಿಸಿದರಲ್ಲದೆ ಸೋಮವಾರ ರಥೋತ್ಸನ ನಡೆಸುವ ಮೂಲಕ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡಿ ಸೈಎನಿಸಿಕೊಂಡರು.

ಸಹಸ್ರಾರು ಮಂದಿ ಸಾಕ್ಷಿ
ನೂತನ ರಥವನ್ನು ಕಣ್ತುಂಬಿಕೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಮಾತ್ರವಲ್ಲದೆ, ಬೆಂಗಳೂರು ಗ್ರಾಮಾಂತರ,ನಗರ ದೊಡ್ಡಬಳ್ಳಾಪುರ,ನೆರೆಯ ಆಂಧ್ರದಿAದಲೂ ಭಕ್ತರು ಆಗಮಿಸಿ ಕಾರ್ತಿಕ ಮಾಸದ ರಥೋತ್ಸವದ ಅಂಗವಾಗಿ ನಡೆದ ಹೋಮಹವನ,ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳಲ್ಲಿ ಭಾಗಿಯಾಗಿ ಕೃತಾರ್ಥರಾದರು.ರಥೋತ್ಸವ ಅಂಗವಾಗಿ ನಡೆದ ವೀರಗಾಸೆ ಕುಣಿತ, ನಾದಸ್ವರ ವಾಧನ, ಕಲಾರೇಟ್‌ಬ್ಯಾಂಡ್ ಸಂಗೀತ ಭಕ್ತರ ಉತ್ಸಾಹಕ್ಕೆ ಇಮ್ಮಡಿ ಮೆರುಗು ನೀಡಿತ್ತು.ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನಿಡುತ್ತಿದ್ದಂತೆ ಭಕ್ತಗಣದ ಹರಹರಮಹದೇವ್ ಘೋಷಣೆಗಳು ಮೇರೆ ಮೀರಿದ್ದವು.

ಅನ್ನದಾನ
ಕಾರ್ತಿಕ ಮಾಸದಲ್ಲಿ ಉಪವಾಸದಲ್ಲಿ ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಪ್ರಸಾದ ರೂಪದಲ್ಲಿ ಬೆಳಿಗ್ಗೆ ೬ ಗಂಟೆಯಿAದ ರಾತ್ರಿ ೯ ಗಂಟೆವರೆಗೆ ಅನ್ನದಾನ ನಡೆಯಿತು.ದೇವಾಲಯದ ಆವರಣದಲ್ಲಿರುವ ಶ್ರೀವೀರಭದ್ರಸ್ವಾಮಿ ದೇವಾಲಯದ ಪ್ರಾಂಗಣ,ಅಶ್ವತ್ಥಕಟ್ಟೆಯ ನಾಗರಕಲ್ಲುಗಳ ಪ್ರಾಂಗಣಣದಲ್ಲಿ ಭಕ್ತಾದಿಗಳು ದೀಪಗಳನ್ನು ಹಚ್ಚಿ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಿದ್ದ ದೃಶ್ಯಗಳು ಕಾರ್ತಿಕಮಾಸದ ಮಹತ್ವವನ್ನು ಸಾರಿಹೇಳುತ್ತಿದ್ದವು.

ಬತ್ತಾಸು ಬುರುಗು
ಶಿವರಾತ್ರಿ ಜಾತ್ರೆಯನ್ನು ನೆನೆಪಿಸುವ ರೀತಿಯಲ್ಲಿ ಕಡೇ ಕಾರ್ತಿಕದಿನ ನಡೆದ ಬ್ರಹ್ಮರಥೋತ್ಸವ ಕಣ್ತುಂಬಿಕೊಳ್ಳಲು ಜನ ಬರುತ್ತಾರೆ ಎಂದು ಅರಿತು ಬತಾಸು ಬುರುಗು ಮಾಎಉವ ಮಾರಾಟಗಾರರು, ಕಡಲೆಕಾಯಿ, ಆಟದ ಸಾಮಾನು ಮಾರುವ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಮುಂಗಟ್ಟೆಗಳನ್ನು ಇಟ್ಟುಕೊಂಡು ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದು ಜನತೆ ಮುಗಿಬಿದ್ದು ವ್ಯಾಪಾರ ಮಾಡಿದರು.
ಸಾಲುಗಟ್ಟಿ ನಿಂತ ಜನತೆ
ಭೋಗನಂದೀಶ್ವರ ದೇವಾಲಯದಲ್ಲಿ ಬೆಳಗ್ಗೆ ೬ ಗಂಟೆಯಿAದಲೇ ಪೂಜೆಗಳು ಆರಂಭವಾದ ಹಿನ್ನೆಲೆಯಲ್ಲಿ ಜನತೆ ಚುಮುಚುಮು ಚಳಿಯ ನಡುವೆ ಸಾಲುಗಟ್ಟಿನಿಂತು ಪೂಜೆಯಲ್ಲಿ ಭಾಗಿಯಾಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ರಥೋತ್ಸವದ ಹೊತ್ತಿಗೆ ಜನಜಂಗುಳಿ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.ಕಾರ್ತಿಕದಲ್ಲಿ ಶಿವನ ಆರಾಧನೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯೂ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ದೇವಾಲದತ್ತ ಹರಿದು ಬಂದಿದ್ದರು.

ಒAದೆಡೆ ಕಾರ್ತಿಕ ಮಾಸದ ಸಂಭ್ರಮ, ಮತ್ತೊಂದೆಡೆ ನೂತನ ರಥದ ಲೋಕಾರ್ಪಣೆ ಕಾರ್ಯಕ್ರಮ ಇವೆರಡೂ ಕೂಡ ಪುರಾಣಪ್ರಸಿದ್ದ ಭೋಗನಂದೀಶ್ವರನ ಸನ್ನಿಧಿಯಲ್ಲಿ ಸೋಮವಾರ ಸಾಕ್ಷಿಯಾಗಿದ್ದವು. ಇದನ್ನು ಕಣ್ತುಂಬಿಕೊಳ್ಳಲು ಮಾತ್ರ ಸಹಸ್ರಾರು ಸಂಖ್ಯೆಯಲ್ಲಿ ಜನಜಾತ್ರೆಯೇ ಸೇರಿದ್ದು ಕೈಲಾಸವೇ ಧರೆಗಿಳಿದುಬಂದAತ ಸನ್ನಿವೇಶವನ್ನು ಸೃಷ್ಟಿಸಿ ಕಾರ್ತಿಕ ಮಾಸಕ್ಕೆ ವಿಧಾಯ ಹೇಳಿತ್ತು.

೨೫ಸಿಬಿಪಿಎಂ೫: ಇತಿಹಾಸ ಪ್ರಸಿದ್ಧ ನಂದಿಗ್ರಾಮದ ಭೋಗನಂದೀಶ್ವರನ ಸನ್ನಿಧಿಯಲ್ಲಿ ಇದೇ ಮೊದಲ ಬಾರಿಗೆ ಕಾರ್ತಿಕ ಮಾಸದ ಕಡೇ ಸೋಮವಾರ ಮದ್ಯಾಹ್ನ ೧೨ಕ್ಕೆ ಸಹಿತಗಿರಿಜಾಂಭ ಸಹಿತ ಭೋಗನಂದೀಶ್ವರಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥದ ದಾನಿ ವೆಂಕಟೇಗೌಡರು ನೂತನವಾಗಿ ನಿರ್ಮಿಸಿ ಕೊಟ್ಟಿರುವ ಬ್ರಹ್ಮರಥದಲ್ಲಿಟ್ಟು ಸಹಸ್ರಾರು ಭಕ್ತಗಣದ ನಡುವೆ ರಥೋತ್ಸವಕ್ಕೆ ವಿದ್ಯೂಕ್ತವಾಗಿ ಚಾಲನೆ ನೀಡಲಾಯಿತು.

ಇದನ್ನೂ ಓದಿ: