ಗೌರಿಬಿದನೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗೌರಿಬಿದನೂರು ತಾಲೂಕು ಗ್ರಾಮ ಲೆಕ್ಕ ಅಧಿಕಾರಿಗಳಗಳ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಹೇಶ್‌ಪತ್ರಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿ ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಅಮರನಾರಾಯಣ್ ಮೊಬೈಲ್ ಆಪ್ ಮತ್ತು ಅಪ್ಲಿಕೇಶನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆ ಗಳ ಬಗ್ಗೆ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು ಪ್ರತಿ ದಿನ ೧೭ ಆಪ್ ಗಳೊಂದಿಗೆ ಮೊಬೈಲ್ ಗಳಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ, ನಮ್ಮ ಕೆಲಸದ ಒತ್ತಡವನ್ನು ಕಡಿಮೆ ಗೊಳಿಸಬೇಕು ಎಂದು ಕೋರಿ ದರು.
ಸಂಘದ ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ಷಾಭಕ್ಕ ಅಕ್ಕಿ ಹಾಲಪ್ಪ, ಖಜಾಂಚಿ ಲಿಖಿತಬಿ, ಗೌರವಾಧ್ಯಕ್ಷರು ರಮೇಶ್ ಜಿ ವಿ ಮತ್ತು ಕಂದಾಯ ಇಲಾಖೆ ನೌಕರರು. ಜಯಪ್ರಕಾಶ್, ಗಿರೀಶ್, ರವಿ ಮತ್ತು ಸಂಘದ ಎಲ್ಲಾ ಹಾಗೂ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
೨೭ಸಿಬಿಪಿಎA೩ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗೌರಿಬಿದನೂರು ತಾಲೂಕು ಗ್ರಾಮ ಲೆಕ್ಕ ಅಧಿಕಾರಿಗಳಗಳ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಹೇಶ್‌ಪತ್ರಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.