ಗೌರಿಬಿದನೂರು: ತಾಲ್ಲೂಕಿನ ಹುದುಗೂರು ಗ್ರಾಮದಿಂದ ಮುದುಗಾನಕುಂಟೆಗೆ ಹೋಗುವ ರಸ್ತೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ೩ನೇ ಬಾರಿ ರೈತಮಿತ್ರ ಬಳಗ ಸಮೂಗದಿಂದ ಖಾಲಿ ಎತ್ತಿನಗಾಡಿ ಓಡಿಸೋ ಸ್ಪರ್ಧೆ ಆಯೋಜಿ ಸಿದ್ದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹುದುಗೂರು ರೈತಮಿತ್ರ ಬಳಗದ ವತಿಯಿಂದ ವಿಶೇಷ ವಿಭಾಗೀಯ ಪ್ರತ್ಯೇಕವಾಗಿ ಸೂಕ್ತ ಬಹುಮಾನಗಳನ್ನು ವಿತರಿಸಲು ಸಿದ್ದಪಡಿಸಿದ್ದರು.
ಯಾವ ಎತ್ತಿನ ಜೋಡಿ ೩೦೦ಮೀ ಅಂತವನ್ನು ಮೊದಲು ಓಡುತ್ತವೆಯೋ ಅವುಗಳನ್ನು ವಿಜಯ ಎತ್ತುವಳೆಂದು ಘೋಷಿಸಿ ಬಹುಮಾನ ನೀಡಲಾಗುವುದಾಗಿ ಸಮಿತಿಯವರು ತಿಳಿಸಿದರು. ತಾಲ್ಲೂಕಿನ ಹೊರಭಾಗದಲ್ಲಿ ನಡೆದ ಜೋಡಿ ಎತ್ತಿನ ಬಂಡಿ ಓಟದಲ್ಲಿ ಜಾನುವಾರುಗಳು ದೂಳೆಬ್ಬಿಸಿ ರೈತ ಸಮೂಹವನ್ನು ಖುಷಿ ಪಡಿಸಿದವು. ಎತ್ತಿನ ಬಂಡಿಯ ಓಟವೆಂದರೆ ರೈತ ಸಮೂಹಕ್ಕೆ ಎಲ್ಲಿಲ್ಲದ ಖುಷಿ ಹಿಗಾಗಿ ಸದರಿ ಸ್ಪರ್ಧೆಯಲ್ಲಿ ತಾಲ್ಲೂಕಿನವರು ಮಾತ್ರ ವಲ್ಲದೆ ನೆರೆಯರಾಜ್ಯವಾದ ಆಂಧ್ರಪ್ರದೇಶದಿAದಲೂ ಸಹ ಒಟ್ಟು 50ಕ್ಕೂ ಹೆಚ್ಚು ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿದ್ದವು. ಸ್ಪರ್ಧೆಯನ್ನು ೨ವಿಭಾಗಳಾಗಿ ವಿಂಗಡಿಸಲಾಗಿತ್ತು. ಹಸುಗಳವಿಭಾಗ ಮತ್ತು ಎತ್ತುಗಳ ವಿಭಾಗವಾಗಿ ಪ್ರತ್ಯೇಕವಾಗಿಯೇ ಸ್ಪರ್ಧೆಯನ್ನು ನಡೆಸಲಾಯಿತು.
ಅಬ್ಬಾ ಎತ್ತುಗಳ ಶರವೇಗವದ ಓಟ, ಧೂಳೆಬ್ಬಿಸಿ ಮಿಂಚಿನAತೆ ಓಡುವ ನೋಟ ನೋಡಿದ್ರೆ ಮೈ ಜುಮ್ ಎನ್ನು ವಂತಿತ್ತು. ಎತ್ತಿನಗಾಡಿ ಓಟದ ಸ್ಪರ್ಧೆ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಗಾಡಿ ಓಟದಲ್ಲಿದ್ದಾಗ ಜನ ಕೂಗುವ ಮೂಲಕ ಯುವಕರಿಗೆ ಹುರಿದುಂಬಿಸಿದರು. ಕೆಲವು ಜೋಡಿ ಎತ್ತುಗಳ ಅಭಿಮಾನಿಗಳು ಎತ್ತುಗಳು ಅಖಾಡದಲ್ಲಿ ಮಿಂಚಿನ ಓಟ ಓಡುತ್ತಿದ್ದಂತೆ ಅವುಗಳ ಜೊತೆ-ಜೊತೆಗೆ ಓಡಿ ಹುರುಪು ತುಂಬಿದರು.
ಮಾಲಿಕನ ಮನೋಭಾವಕ್ಕೆ ತಕ್ಕಂತೆ ಎತ್ತುಗಳು ಬಂಡಿಯನ್ನು ಹೊತ್ತು ಓಡುತ್ತಿರುವ ದೃಶ್ಯ ನೆರೆದ ಜನರಲ್ಲಿ ರೋಮಾಂಚನ ಮೂಡಿಸುವಂತೆ ಮಾಡಿತ್ತು. ಕ್ರೀಡಾಂಗಣದ ಇಕ್ಕೆಲಗಳಲ್ಲಿ ನೆರೆದಿದ್ದ ತಾಲ್ಲೂಕಿನ ಕ್ರೀಡಾಸಕ್ತರು ಚಪ್ಪಾಳೆಮೂಲಕ ಎತ್ತುಗಳನ್ನು ಹಾಗೂ ಚಕ್ಕಡಿಗಳಲ್ಲಿ ಕುಳಿತ ಸವಾರರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದರು.
ಶಾಸಕರಾದ ಕೆ.ಹೆಚ್.ಪುಟ್ಟಸ್ವಾಮಿಗೌಡ ಸ್ಪರ್ಧೆಗೆ ಚಾಲನೆ ನೀಡಿದರು. ನಂತರ ಮಾತನಾಡಿದರು ಮಾಡನಾಡಿ, ಈ ದಿನದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ನಮ್ಮ ದೇಶದಲ್ಲಿ ಹೆಚ್ಚಿನ ಭಾಗದ ಜನರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ದೇಸಿ ತಳಿ ಹಸುಗಳನ್ನು ಸಾಕಾಣಿಕೆಯಿಂದ ರೈತರಿಗೆ ಹೆಚ್ಚು ಲಾಭದಾಯಕವಾಗಲಿದೆ. ನಮ್ಮ ದೇಶದಲ್ಲಿ ಬಹುತೇಕ ರೈತರು ಕೃಚಿಜೊತೆಗೆ ಹೂನುಗಾರಿಕೆಯಲ್ಲಿ ತೊಡಗಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ಹಿಂದೆ ಪ್ರತಿ ರೈತರ ಮನೆಯಲ್ಲಿ ಕೃಷಿಗಾಗಿ ಎತ್ತು, ಹಸುಗಳನ್ನು ಸಾಕುತ್ತಿದ್ದರು. ಆದರೆ ಇಂದು ಅವುಗಳ ಜಾಗದಲ್ಲಿ ಸೀಮೆ ಹಸುಗಳನ್ನು ತುಂಬಿವೆ.. ಭತ್ತ,ಕಬ್ಬು ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತದ್ದ ರೈತರು ಇಂದು ಜಾನುವಾರಗಳಿಗಾಗಿ ಮಾತ್ರ ಮೇವು ಬೆಳೆದುಕೊಳ್ಳುತ್ತಿದ್ದಾರೆ. ಎಂದೆಡೆ ದವಸ-ಧಾನ್ಯಗಳನ್ನು ಬೆಳೆಯುವುದು ಕಡಿಮೆಯಾಗುತ್ತಿರುವುದು ಆತಂಕ ಕಾರಿಯಾದರೆ, ಮತ್ತೊಂದಡೆ ಹೈನುಗಾರಿಕೆಯಿಂದ ಜೀವನ ಮಟ್ಟ ಸುಧಾರಣೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಪರ್ಧೆಯಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಿ: ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ರೈತವರ್ಗದವರು ಸೋಲು, ಗೆಲುವು ಸಮವಾಗಿ ಸ್ವೀಕರಿಸಬೇಕೆಂದು ಯಾವುದೇ ರಹಿತಕರ ಘಟನೆಗೆ ಅವಕಾಶ ಕೊಡದೆ ಸ್ಪರ್ದೆಯನ್ನು ನಡೆಸಬೇಕೆಂದು ತಿಳಿಸಿದರು.
ವಕೀಲ ಚಂದನ್ ರಾಜಪ್ಪರವರ ಮಾತನಾಡಿ ನಮ್ಮ ತಾಲ್ಲೂಕಿಗೆ ಒಂದು ಗೋಶಾಲೆ ಪ್ರಾರಂಬಿಸುವ ಕಾರ್ಯವನ್ನು ನಡೆಸುತ್ತಿದ್ದೇವೆ. ನಮ್ಮ ಗೋಶಾಲೆಗೆ ಎಲ್ಲಾ ತಳಿಯ ಹಸುಗಳನ್ನು ತಂದು ಸಾಕಾಣಿಕೆ ಪಣ ತೊಟ್ಟದ್ದೇವೆ. ಇನ್ನು ಕೆಲವೇ ತಿಂಗಳುಗಳಲ್ಲಿ ನಮ್ಮ ತಾಲ್ಲೂಕಿನಲ್ಲಿ ಗೋ-ಶಾಲೆಯನ್ನು ಪ್ರಾರಂಭಿಸಲಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೆ.ಹೆಚ್.ಪಿ. ಆಪ್ತಕಾರ್ಯದರ್ಶಿ ಶ್ರೀನಿವಾಸಗೌಡ, ಗ್ರಾ.ಪಂ.ಅಧ್ಯಕ್ಷ-ಬಿ.ಕುಮಾರ್, ಕೆ.ಹೆಚ್.ಪಿ. ಮುಖಂಡರಾದ ನಂಜುಂಡಪ್ಪ, ಹರೀಶ್ ರೆಡ್ಡಿ, ಗ್ರಾ.ಪಂ.ಸದಸ್ಯರಾದ ಅಶ್ವತ್ಥಪ್ಪ, ಬೇಬಿರಮೇಸ್ಗಂ ಗಾಧರಪ್ಪ, ಪ್ರಮೋದು ಕುಮಾರ್, ಬಾಲಪ್ಪ, ಗಾಯಿತ್ರಿಸುರೇಶ್ ಮತ್ತು ರೈತಬಾಂಧವರು ಮತ್ತು ಸಮಾಜ ಸೇವಕ ಕೆ. ಜೈಪಾಲ್ ರೆಡ್ಡಿ ಹಾಗೂ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ: chikkaballapurnews