Saturday, 11th January 2025

Chikkaballapur News: ಡಿ.29ಕ್ಕೆ ಹಿಂದೂ ಸಾದರ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಮಂಡಿ ಹರಿಯಣ್ಣ ಜಯಂತೋತ್ಸವ

ಗೌರಿಬಿದನೂರು : ನಗರದ ವೀರಂಡಹಳ್ಳಿಯಲ್ಲಿನ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಡಿ.೨೯, ಭಾನುವಾರ ಸಮುದಾಯದ ಸಂಸ್ಥಾಪಕ ಅಧ್ಯಕ್ಷರಾದ ಮಾನ್ಯ ಶ್ರೀಮಂಡಿಹರಿಯಣ್ಣ ರವರ ಜಯಂತೋತ್ಸವದ ಅಂಗವಾಗಿ ‘ಸಾದರ ಹಬ್ಬ’ ವನ್ನು ಆಯೋಜನೆ ಮಾಡಲಾಗಿದೆ ಎಂದು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಆರ್.ವೇಣುಗೋಪಾಲ್ ತಿಳಿಸಿದರು.

ನಗರದಲ್ಲಿ ಮಾಧ್ಯಮದಿಂದಿಗೆ ಮಾತನಾಡಿದ ಅವರು ಸಾದರ ಹಬ್ಬದ ಪೂರ್ವಭಾವಿ ಸಭೆ ಮತ್ತು ಪತ್ರಿಕಾಗೋಷ್ಠಿ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದೂ ಸಾದರ ಸಮುದಾಯದ ಹಿರಿಯ ಚೇತನ, ಮೈಸೂರು ಶಾಸನ ಸಮಿತಿಯ ಸದಸ್ಯರು, ಬೆಂಗಳೂರಿನ ಪ್ರಸಿದ್ಧ ವರ್ತಕರು ಮತ್ತು ದಾಸೋಹಿಗಳಾದ ಪೂಜ್ಯ ಶ್ರೀಮಂಡಿ ಹರಿಯಣ್ಣ ರವರ ಜನ್ಮದಿನಾಚರಣೆಯ ಅಂಗವಾಗಿ ಸಾದರ ಹಬ್ಬವನ್ನು ಆಯೋಜಿಸಲಾಗಿದೆ. ಸ್ವಾತಂತ್ರ‍್ಯ ಪೂರ್ವದಿಂದಲೇ ಬೆಂಗಳೂರು ನಗರದಲ್ಲಿ ಖ್ಯಾತ ವರ್ತಕ ರಾಗಿದ್ದ ಮಂಡಿ ಹರಿಯಣ್ಣ ನವರು ದಾಸೋಹಿಗಳಾಗಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ನೆರವಾಗಿ ದ್ದಾರೆ. ಇಂತಹ ಮಹಾನ್ ನಾಯಕರ ಜನ್ಮದಿನಾಚರಣೆಯನ್ನು ಸಮುದಾಯದ ವತಿಯಿಂದ ಅರ್ಥಪೂರ್ಣವಾಗಿ ನಡೆಸಲಾಗುವುದು ಎಂದರು.

ಕಾರ್ಯಕ್ರಮವು ಡಿ.೨೯, ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಮೂಲಕ ಆರಂಭವಾಗಲಿದೆ. ಹೂವಿನ ಅಲಂಕಾರವುಳ್ಳ ಬೆಳ್ಳಿ ರಥದಲ್ಲಿ ಪೂಜ್ಯ ಮಂಡಿ ಹರಿಯಣ್ಣನವರ ಭಾವಚಿತ್ರ ವನ್ನಿಟ್ಟು ಮೆರವಣಿಗೆ ಮೂಲಕ ಸಾಗಲಿದ್ದೇವೆ. ಈ ವೇಳೆ ಸುಮಾರು ಒಂದು ಸಾವಿರಕ್ಕೂ ಅಧಿಕ ಸಮುದಾಯದ ಮಹಿಳೆಯರು ಪೂರ್ಣಕುಂಭ ಕಳಸಗಳನ್ನು ಹೊತ್ತು ಸಾಗಲಿದ್ದಾರೆ. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ.

ಮೆರವಣಿಗೆಯು ವಾಲ್ಮೀಕಿ ವೃತ್ತದಿಂದ ಆರಂಭಗೊAಡು ಅಂಬೇಡ್ಕರ್ ವೃತ್ತ, ಎನ್.ಸಿ.ನಾಗಯ್ಯರೆಡ್ಡಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಶ್ರೀಶನಿಮಹಾತ್ಮ ದೇವಾಲಯದ ಮುಂಭಾಗದಿAದ ನ್ಯಾಷನಲ್ ಕಾಲೇಜ್ ವೃತ್ತಕ್ಕೆ ತಲುಪಿ ಅಲ್ಲಿಂದ ಸಮುದಾಯದ ಆವರಣದಲ್ಲಿರುವ ವೇದಿಕೆಯತ್ತ ಸಾಗಲಿದ್ದೇವೆ.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಕೇಂದ್ರ ಸಂಘದ ಸಲಹಾ ಸಮಿತಿಯ ಗೌರವಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಸದರಾದ ಡಾ.ಕೆ.ಸುಧಾಕರ್ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ, ಸ್ಥಳೀಯ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ಪೂಜ್ಯ ಮಂಡಿ ಹರಿಯಣ್ಣನವರ ಭಾವಚಿತ್ರ ಅನಾವರಣ ಮಾಡಲಿದ್ದಾರೆ.

ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮತ್ತು ಜಿ.ಪಂ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ಪೂಜ್ಯ ಮಂಡಿ ಹರಿಯಣ್ಣ ಮತ್ತು ಎಂ.ಎಸ್.ಮಲ್ಲಯ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯರಾದ ಎಂ.ಬೋಜರಾಜು ಮತ್ತು ಸಿ.ರವಿಶಂಕರ್ ವಿದ್ಯಾಬಂಧು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ಕ್ಯಾಪ್ಟನ್ ಎಂ.ಎಂ.ಹರೀಶ್, ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಆರ್.ವೇಣುಗೋಪಾಲ್, ಗೌರವ ಅಧ್ಯಕ್ಷರಾದ ಜಿ.ಎನ್.ಕೃಷ್ಣಯ್ಯ, ಮುಖಂಡರಾದ ಎನ್.ಎಂ.ರವಿನಾರಾಯಣರೆಡ್ಡಿ ಸೇರಿದಂತೆ ಕೇಂದ್ರ ಮತ್ತು ತಾಲ್ಲೂಕು ಸಮಿತಿಯ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಸಮುದಾಯದ ಕೇಂದ್ರ ಸಮಿತಿಯ ಖಜಾಂಚಿ ಜಿ.ಆರ್.ರಾಜಶೇಖರ್, ನಿರ್ದೇಶಕರಾದ ಬಿ.ಮಂಜುನಾಥ್, ಪ್ರಭಾಕರ್, ಡಾ.ಸಿ.ಗಂಗಲಕ್ಷ್ಮಮ್ಮ, ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಟಿ.ಕೆ.ವಿಜಯರಾಘವ, ಉಪಾಧ್ಯಕ್ಷರಾದ ಆರ್.ಪಿ.ಗೋಪಾಲಗೌಡ, ಖಜಾಂಚಿ ಸಂಕೇತ್ ಶ್ರೀರಾಮ್, ನಿರ್ದೇಶಕರಾದ ಜಿ.ಸಿ.ಸತೀಶ್ ಕುಮಾರ್, ವೆಳಪಿ ನರಸಿಂಹಮೂರ್ತಿ, ಜಿ.ಎಂ.ಅರುಣ್ ಕುಮಾರ್, ಎನ್.ನರಸಿಂಹಮೂರ್ತಿ, ಪಿ.ವಿ.ರವೀಂದ್ರ, ಮುಖಂಡರಾದ ಎ.ಎಸ್.ಜಗನ್ನಾಥ್, ವರುಣ್, ಓಂಪ್ರಕಾಶ್, ಲಕ್ಷ್ಮೀ ಸೇರಿದಂತೆ ಇತರರು ಉಪಸ್ಥಿತರಿದ್ದರು.