Thursday, 5th December 2024

Chikkaballapur News: ಜಗತ್ತಿನಲ್ಲಿಯೇ ವಕೀಲಿಕೆ ವೃತ್ತಿ ಶ್ರೇಷ್ಠ : ಜೆ.ಎಂ.ಎಫ್.ಸಿ.ಹಿರಿಯ ಶ್ರೇಣಿ ನ್ಯಾಯಾಧೀಶೆ ಎಂ.ಭಾರತಿ

ಬಾಗೇಪಲ್ಲಿ: ಸ್ವಾತಂತ್ರ‍್ಯ ಪೂರ್ವದಿಂದಲೂ ವಕೀಲರು ತಮ್ಮ ವೃತ್ತಿಪರತೆ ಮೆರೆದಿದ್ದು, ದೇಶ ಸ್ವಾತಂತ್ರ‍್ಯ ಪಡೆಯವ ಸಂದರ್ಭದಲ್ಲಿ ತಮ್ಮ ವೃತ್ತಿ ತ್ಯಜಿಸಿ ಹೋರಾಟದಲ್ಲಿ ಧುಮುಕಿದ ಹಲವು ಉದಾಹರಣೆಗಳಿವೆ ಎಂದು ಬಾಗೇಪಲ್ಲಿ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶೆ ಶ್ರೀಮತಿ ಎಂ.ಭಾರತಿ  ಹೇಳಿದರು.

ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ  ತಾಲ್ಲೂಕು ವಕೀಲರ ಸಂಘ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷ್ ಆಡಳಿತದಿಂದ ದೇಶ ಸ್ವಾತಂತ್ರ‍್ಯ ಪಡೆಯಲು ಹಾಗೂ ಸಂವಿಧಾನ ರಚನೆಯಲ್ಲಿ ವಕೀಲರ ಪಾತ್ರ ಮಹತ್ವವಾದದ್ದು. ಜಗತ್ತಿನಲ್ಲಿಯೇ ವಕೀಲಿಕೆ ವೃತ್ತಿ ಶ್ರೇಷ್ಠವಾಗಿದ್ದು, ವಕೀಲರು ಮಾತ್ರ ನ್ಯಾಯಾಧೀಶರಾಗಲು ಸಾಧ್ಯ ಎಂದು ಹೇಳಿದರು.

ಸಿವಿಲ್ ನ್ಯಾಯಾಧೀಶರಾದ ಮಂಜುನಾಥ ಚಾರಿ ಮಾತನಾಡಿ,ವಕೀಲರ ವೃತ್ತಿಯನ್ನು ಆರಾಧಿಸಿದ ಡಾ. ರಾಜೇಂದ್ರ ಪ್ರಸಾದ್ ರವರು ಉನ್ನತ ಸ್ಥಾನವನ್ನು ಅಲಂಕರಿಸಿದ್ದರು. ಹೀಗಾಗಿ ವಕೀಲರು ವೃತ್ತಿಯಲ್ಲಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು ಕಕ್ಷಿದಾರರ ವಿಶ್ವಾಸವನ್ನು ಉಳಿಸಿ ಕೊಂಡು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ  ವಕೀಲರಾದ ನಾರಾಯಣ ಸ್ವಾಮಿ ರಚಿಸಿದ ಪುಸ್ತಕಗಳನ್ನು ನ್ಯಾಯಾಧೀಶರು ಹಾಗೂ ಹಿರಿಯ ವಕೀಲರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಕೀಲರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಉಪಾಧ್ಯಕ್ಷ ರಾಮಾಂಜಿ,ಕಾರ್ಯದರ್ಶಿ ಮಂಜುನಾಥ್ ಮುಸ್ತಕ್ ಅಹ್ಮದ್, ಬಿ.ಆರ್.ನರಸಿಂಹ ನಾಯ್ಡು, ಎ.ಜಿ.ಸುಧಾಕರ್,ಪ್ರಭಾನಾಗರಾಜು,ಅರುಣಾ ಕುಮಾರಿ ಇನ್ನೂ ಮುಂತಾದವರು ಪ್ರಮುಖರು ಇದ್ದರು.

ಇದನ್ನೂ ಓದಿ: chikkaballapurnews