Thursday, 19th December 2024

Chikkaballapur News: ಕ್ಷೇತ್ರದಲ್ಲಿ ಸಂಚಲನ ಮೂಡಿಸಲಿರುವ ವಿನಯ್‌ ಶ್ಯಾಮ್ ಜನ್ಮದಿನ

ಜನವರಿ ೩ರಂದು ವಿನಯ್‌ಶ್ಯಾಮ್ ಜನ್ಮದಿನದ ಅಂಗವಾಗಿ ಪೂರ್ವಭಾವಿ ಸಭೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟವಾಗಿ ಕಟ್ಟುವಲ್ಲಿ ಅಪಾರ ವಾಗಿ ಶ್ರಮಿಸಿದ್ದ ಯುವ ನಾಯಕ ಆರ್.ಎಲ್.ಜಾಲಪ್ಪ ಅವರ ಮೊಮ್ಮಗ, ಸಮಾಜ ಸೇವಕ ಜಿ.ಹೆಚ್. ನಾಗರಾಜ್ ಅವರ ಪುತ್ರ ವಿನಯ್ ಶ್ಯಾಮ್ ಜನ್ಮದಿನವನ್ನು ಸಾವಿರಾರು ಅಭಿಮಾನಿಗಳ ಸಮಕ್ಷಮದಲ್ಲಿ ಜ.೩ರಂದು ಅವರ ನಿವಾಸದಲ್ಲಿ ಅದ್ಧೂರಿಯಾಗಿ ಆಚರಿಸುವ ಮೂಲಕ ಸೊರಗಿರುವ ಪಕ್ಷಕ್ಕೆ ಶಕ್ತಿತುಂಬುವ ಕೆಲಸ ಮಾಡಲಾಗು ವುದು ಎಂದು ಕೆ.ಪಿ.ಸಿ.ಸಿ. ಮಾಜಿ ಸದಸ್ಯ ಲಾಯರ್ ನಾರಾಯಣಸ್ವಾಮಿ ತಿಳಿಸಿದರು.

ವಿನಯ್‌ಶ್ಯಾಮ್ ಜನ್ಮದಿನದ ಅಂಗವಾಗಿ ಹಾರೋಬಂಡೆಯ ಸಾಯಿಧ್ಯಾನಮಂದಿರದ ಆವರಣದಲ್ಲಿ ಗುರುವಾರ ನಡೆಸಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರು  ಕಾಂಗ್ರೆಸ್ ಪಕ್ಷವನ್ನು ಬಲಿಷ್ಟವಾಗಿ ಕಟ್ಟುವಲ್ಲಿ ಮುಂಚೂಣಿಯಲ್ಲಿ ನಿಂತು ತಮ್ಮ ತನುಮನಧನ ಅರ್ಪಿಸಿದ್ದರು.ಆಮೂಲಕ ಗ್ರಾಮಪಂಚಾಯಿತಿ,ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿ ಪಕ್ಷವನ್ನು ಬಲಿಷ್ಟಗೊಳಿಸಿದ್ದ ವಿನಯ್‌ಶ್ಯಾಮ್, ನಂತರದಲ್ಲಿ ನಡೆದ ರಾಜಕೀಯ ಏರಿಳಿತಗಳಿಂದ ಬೇಸರಿಸಿ, ಸಕ್ರಿಯ ರಾಜಕಾರಣದಿಂದ ದೂರವಾದರು.

ಇದು ಇವರ ಅಭಿಮಾನಿಗಳಿಗೆ ಬೆಂಬಲಿಗರಿಗೆ ತೀವ್ರ ಬೇಸರತರಿಸಿದ್ದು ಜ.೩ರಂದು ನಡೆಯುವ ಅವರ ಹುಟ್ಟು ಹಬ್ಬದಲ್ಲಿ ಮರಳಿ ಅವರನ್ನು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಲು ಪೂರ್ವಭಾವಿ ಸಮಿತಿ ಸಭೆಯಲ್ಲಿ ತೀರ್ಮಾನಿಸಿದೆ. ಆದ್ದರಿಂದ ಇದು ಕೇವಲ ಹುಟ್ಟುಹಬ್ಬ ಮಾತ್ರವಾಗಿರದೆ, ರಾಜಕೀಯ ಸಂಚಲನಕ್ಕೆ ಕಾರಣವಾಗಲಿದೆ ಎಂದು ಭವಿಷ್ಯ ನುಡಿದರು.

ಹಿರಿಯ ಕಾಂಗ್ರೆಸ್ ಮುಖಂಡ ಮರಸನಹಳ್ಳಿ ಪ್ರಕಾಶ್ ಮಾತನಾಡಿ ಲೋಕಸಭಾ ಮಾಜಿ ಸದಸ್ಯ ಆರ್,ಎಲ್, ಜಾಲಪ್ಪ ಅವರ ಮೊಮ್ಮಗ ವಿನಯ್ ಶ್ಯಾಮ್ ೨೦೨೩ರ ವಿಧಾನಸಭೆ ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದಾರೆ. ನಂತರದ ದಿನಗಳಲ್ಲಿ ಅವರನ್ನು ಕಡೆಗಣಿಸಲಾಗಿದೆ. ಇದು ಪಕ್ಷದ ಬೆಳವಣಿಗೆಗೆ ಅಡ್ಡಿಯಾಗಿದೆ ಎಂಬುದನ್ನು ಅವರ ವಿರೋಧಿಗಳೂ ಹೇಳುತ್ತಾರೆ. ಇಂತಹ ಬದ್ಧತೆಯ ಯುವ ನಾಯಕರನ್ನು ಮತ್ತೆ ಪಕ್ಷದ ಚಟವಟಿಕೆಗಳಲ್ಲಿ ತೊಡಗಿಸಲು ಮನವಿ ಮಾಡಿದ್ದೇವೆ. ಮುಂಬರುವ ತಾಲೂಕು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಇವರ ಶಕ್ತಿ ಸಾಮರ್ಥ್ಯ ಏನೆಂಬುದು ಜನತೆಗೆ ಗೊತ್ತಾಗಲಿದೆ ಎಂದರು.

ಸಭೆಯಲ್ಲಿ ಕೆ.ಪಿಸಿಸಿ ಮಾಜಿ ಸದಸ್ಯ ಲಾಯರ್ ನಾರಾಯಣಸ್ವಾಮಿ, ನಗರಸಭೆ ಸದಸ್ಯ ಅಂಬರೀಶ್, ನರಸಿಂಹ ಮೂರ್ತಿ,ಮAಡಿಕಲ್ ಭಾಗದ ಮುಖಂಡರಾದ ಅಜಿತ್ ಪ್ರಸಾದ್,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ, ಜಾತವಾರ ಮೂರ್ತಿ, ಮರಸನಹಳ್ಳಿ ಪ್ರಕಾಶ್,ದೇವಿಶೆಟ್ಟಿಹಳ್ಳಿ ಗಂಗಾಧರ್,ಇತರರು ಇದ್ದರು.