Friday, 22nd November 2024

Chikkaballapur News: ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಯುವ ತಲೆಮಾರು ಜಾಗೃತ ಗೊಳ್ಳಬೇಕಿದೆ-ಎಸ್.ಎಫ್.ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ ಸಾನು

ಸತತ 3ನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಸರಕಾರ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇತ್ಯಾದಿ ಜ್ವಲಂತ ಸಮಸ್ಯೆಗಳಿಗೆ ಮದ್ದರೆಯುವ ಬದಲು ತನ್ನ ಜನವಿರೋಧಿ ನೀತಿಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ಬಗ್ಗೆ ಯುವ ತಲೆಮಾರು ಜಾಗೃತರಾಗಬೇಕಿದೆ ಎಂದು ಎಸ್.ಎಫ್.ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ ಸಾನು ಹೇಳಿದರು.

ಚಿಕ್ಕಬಳ್ಳಾಪುರ ನಗರದ ಕೆ.ಇ.ಬಿ ಸಮುದಾಯ ಭವನದ ಆವರಣದಲ್ಲಿ ಗುರುವಾರ ಎಸ್.ಎಫ್.ಐ ಜಿಲ್ಲಾ ಘಟಕ ಆಯೋಜಿಸಿದ್ದ 16ನೇ ರಾಜ್ಯಮಟ್ಟದ ಸಮ್ಮೇಳನದ ಮೊದಲ ದಿನದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರದ ಜನವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳಿಂದ ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗದ ಘೋಷಣೆಗಳು ಇದುವರೆಗೂ ಈಡೇರಿಲ್ಲ. ಸತತ 3ನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಸರಕಾರ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇತ್ಯಾದಿ ಜ್ವಲಂತ ಸಮಸ್ಯೆಗಳಿಗೆ ಮದ್ದರೆಯುವ ಬದಲು ತನ್ನ ಜನವಿರೋಧಿ ನೀತಿಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ಬಗ್ಗೆ ಯುವ ತಲೆಮಾರು ಜಾಗೃತರಾಗಬೇಕಿದೆ ಎಂದು ಎಸ್.ಎಫ್.ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ ಸಾನು ಹೇಳಿದರು.

ಶಿಕ್ಷಣ ನೀತಿ ಮೂಲಕ ಸರಕಾರಗಳು ಎಲ್ಲರಿಗೂ ಕಡ್ಡಾಯ ಶಿಕ್ಷಣ, ಉದ್ಯೋಗ ನೀಡುವ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದರು.

ಈ ಸಮ್ಮೇಳನ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧದ ಹೋರಾಟಕ್ಕೆ ನಮ್ಮೆಲ್ಲರಿಗೂ ಶಕ್ತಿ ನೀಡಲಿದ್ದು, ಸರ್ವರಿಗೂ ಉಚಿತ ಶಿಕ್ಷಣ, ಕಡ್ಡಾಯ ಉದ್ಯೋಗ ನೀತಿ ಜಾರಿಯಾಗುವ ತನಕ ಆಳುವ ಸರಕಾರಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವಕ್ಕೆ 2024 ಅತೀ ಮುಖ್ಯವಾದ ವರ್ಷವಾಗಿದ್ದು, ದ್ವೀಪಗಳ ನಾಡು ಶ್ರೀಲಂಕಾದಲ್ಲಿ ಕಳೆದ ಬಾರಿ ಶೇ.3ರಷ್ಟು ಮತಗಳಿಸಿದ್ದ ಎಡಪಂಥೀಯ ಪಕ್ಷ, ಇದೀಗ ಶೇ.75ಕ್ಕೂ ಅಧಿಕ ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದೆ. ಇದು ಪ್ರಜಾಪ್ರಭುತ್ವ ಪ್ರಣೀತ ಸಿಪಿಐಎಂ ಪಕ್ಷದ ಸಿದ್ಧಾಂತಕ್ಕೆ ದೊರೆತ ದೊಡ್ಡ ಗೆಲುವು ಎಂದರು.

ಎಲ್ಲಿ ಸರಕಾರಗಳು ಜನರ ವಿರುದ್ಧ ನಿಲ್ಲುತ್ತವೋ, ಎಲ್ಲಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತವೋ ಅಲ್ಲಿ ಜನರು ಎಡಪಂಥೀಯ ಸಿದ್ದಾಂತಗಳೊಂದಿಗೆ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಸಾಗುತ್ತದೆ. ಇದು ಇಡೀ ವಿಶ್ವದಲ್ಲೇ ನಡೆಯುತ್ತಿದ್ದು, ಭಾರತದಲ್ಲೂ ಎಡಪಂಥೀಯ ಸಿದ್ಧಾಂತಗಳೊAದಿಗೆ ಜನರು ಗಟ್ಟಿ ನಿಲುವು ತಾಳುವು ದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಸ್.ಎಫ್.ಐ ರಾಷ್ಟಿçÃಯ ಅಧ್ಯಕ್ಷ ವಿ.ಪಿ.ಸಾನು ಭವಿಷ್ಯ ನುಡಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಈ ಹಿಂದೆ ಎಸ್.ಆಫ್.ಐ ಸಂಘಟನೆ ಇದೆ ಎಂಬ ಕಾರಣಕ್ಕಾಗಿ, ಪ್ರಗತಿಪರ ಚಿಂತನೆಯ ವಿದ್ಯಾರ್ಥಿಗಳಿದ್ದಾರೆ ಎಂಬ ಕಾರಣಕ್ಕೆ ಶಾಲಾ-ಕಾಲೇಜುಗಳಲ್ಲಿ ಯಾವುದೇ ಸಮಸ್ಯೆಗಳು ಆಗುತ್ತಿರಲಿಲ್ಲ. ಆದರೆ ವರ್ತಮಾನದಲ್ಲಿ ಸರಕಾರ ಯಾರ ಕೈಯಲ್ಲಿದೆ ಎಂಬುದನ್ನು ಆಧರಿಸಿ ಸಮಸ್ಯೆಗಳು ಹುಟ್ಟುಪಡೆಯುತ್ತಿವೆ ಎಂದರು.

ಸುಳ್ಳು ಹೇಳಲು ಕೇವಲ ನಾಲಿಗೆ ಬೇಕು, ನಿಜ ಹೇಳಲು ಹೃದಯ ಸಾಕು.ಇಂದು ರಾಜಕಾರಣಕ್ಕೆ ಹಣವೇ ಮಾನ ದಂಡ. ಇದೇ ಮುಂದುವರೆದರೆ ನಾಳೆಗಳನ್ನು ನೋಡುವುದಾದರೂ ಹೇಗೆ. ಮಾನವೀಯತೆಯ ನಾಡಿಗಳು ನಿಂತರೆ ದೇಶದ ಹೃದಯ ನಿಲ್ಲುತ್ತದೆ ಎಂಬುದನ್ನು ಯುವಪೀಳಿಗೆ ಅರಿಯಬೇಕಿದೆ ಎಂದರು.

ಇತ್ತೀಚೆಗೆ ಕೇಂದ್ರ ಮತ್ತು ಕೆಲ ರಾಜ್ಯ ಸರಕಾರಗಳ ರಚನೆಯ ಹಿಂದೆ ಪಟ್ಟಭದ್ರರ ಕೈವಾಡ ಇದೆ. ಉದ್ದೇಶಪೂರ್ವಕ ವಾಗಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಆದರೆ ನೆನಪಿರಲಿ ನಮ್ಮ ದೇಶದಲ್ಲಿ ನಾಜಿ ಬೀಜಗಳು ಮೊಳೆಯುವುದಿಲ್ಲ. ಅದು ಜರ್ಮನಿಯಲ್ಲಿ ಮಾತ್ರ ಸಾಧ್ಯ. ಕೆಂಪು, ನೀಲಿ, ಹಸಿರು ಒಂದಾದಲ್ಲಿ ನಿಜವಾದ ಸಮಾಜ ಕಟ್ಟಲು ಸಾಧ್ಯ ಎಂಬುದನ್ನು ಯುವಶಕ್ತಿ ಅರಿಯಬೇಕು ಎಂದರು.

ಬೆಳಕನ್ನು ಬಂಧಿಸಲು ಸಾಧ್ಯವಿಲ್ಲ, ಬದಲಾವಣೆಯನ್ನು ಬಂಧಿಸಲು ಸಾಧ್ಯವಿಲ್ಲ. ಆಘಾತಕಾರಿ ಬೆಳವಣಿಗೆ ದೇಶ ದಲ್ಲಿ ನಡೆಯುತ್ತಿದೆ. ಸುಳ್ಳುಗಳಿಂದ ಕಟ್ಟಿದ ಸೌಧ, ನಿಜದ ಗಾಳಿಯಲ್ಲಿ ನಿಲ್ಲುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಎಸ್‌ಎಫ್‌ಐ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅನಿಲ್ ಮಾತನಾಡಿ, ವೈದ್ಯಕೀಯ ಶಿಕ್ಷಣ, ವೈಯಕ್ತಿಕ ಜೀವನ ನಡೆಸಲು ಕೊಡುವ ಶಕ್ತಿಯಲ್ಲ.ಬದಲಿಗೆ ಸಮಾಜದ ಆರೋಗ್ಯವನ್ನು ಕಾಪಾಡಲು ಕೊಟ್ಟಿರುವ ಶಕ್ತಿ ಎಂದು ರುಡಾಲ್ಫ್ ಅವರ ಮಾತುಗಳನ್ನು ಸ್ಮರಿಸಿದರು.

ಹೊಸ ಶಿಕ್ಷಣ ನೀತಿ ಕುವೆಂಪು ಅವರ ಆಶುಗಳಿಗೆ ವಿರುದ್ಧವಾಗಿದೆ. ಮನುಜ ಮತ, ವಿಶ್ವಪಥ, ದೇಶ ದೇಶಗಳ ನಡುವೆ ಗೋಡೆಗಳನ್ನು ನಿರ್ಮಿಸಿಕೊಂಡು, ಬೇರೆ ದೇಶಗಳಿಗೆ ನಮ್ಮ ದೇಶದ ಜನರನ್ನು ಕಳಿಸುತ್ತಿರುವ ನಮ್ಮ ಸರಕಾರಗಳಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.

ಎಸ್ ಎಫ್ ಐ ರಾಜ್ಯಾಧ್ಯಕ್ಷ ಅಮರೇಶ್ ಮಾತನಾಡಿ, ನಮ್ಮ ಶಿಕ್ಷಣ ಪದ್ಧತಿ ಅನೇಕ ತಾರತಮ್ಯದಿಂದ ಕೂಡಿದೆ. ಅಭ್ಯಾಸದ ಜತೆಗೆ ಸಮಾಜದಲ್ಲಿನ ಅಸಮಾನತೆ, ಅನ್ಯಾಯದ ವಿರುದ್ಧ ಹೋರಾಡಬೇಕಿದೆ. ಪ್ರಸ್ತುತ ಶಿಕ್ಷಣ ಸಂಪೂರ್ಣ ವ್ಯಾಪಾರೀಕರಣ ಆಗುತ್ತಿದೆ. ಇದನ್ನು ಆಳುವ ಸರಕಾರಗಳೇ ಮುಂದೆ ನಿಂತು ಮಾಡುತ್ತಿವೆ ಎಂದು ಗುಡುಗಿದರು.

ಸದ್ದಿಲ್ಲದೆ ಹೊಸ ರಾಷ್ಟಿçÃಯ ಶಿಕ್ಷಣ ನೀತಿ ಜಾರಿಗೆ ತಂದರು. ಎನ್‌ಇಪಿ ಅಡಿ ವಿದ್ಯಾಭ್ಯಾಸ ಮುಗಿಸಿ ಮೂರು ವರ್ಷಗಳಾದರೂ ಅಂಕಪಟ್ಟಿ ಸಿಕ್ಕಿಲ್ಲ. ಎನ್‌ಇಪಿ ಪರಿಣಾಮದಿಂದ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ವಿಭಾಗವಾರು ಶಿಕ್ಷಣ ಕೊಡುವದು ನಿಲ್ಲಬೇಕಿದೆ ಎಂದು ಹೇಳಿದರು.

ಇದೇ ವೇಳೆ ಸಮಾವೇಶವನ್ನು ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತ ನಾಡೋಜ, ತಮಟೆ ವಾದನವನ್ನು ಉಸಿರಾಗಿ ಸಿಕೊಂಡಿರುವ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು.

ಸಮಾವೇಶದಲ್ಲಿ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಭೀಮಪ್ಪ ಗೌಡ, ಅಖಿಲ ಭಾರತ ಜಂಟಿ ಕಾರ್ಯದರ್ಶಿ ಆಕಾಶ್, ರಾಜ್ಯ ಮುಖಂಡ ಎನ್.ಪಿ.ಮುನಿವೆಂಕಟಪ್ಪ, ಎಸ್‌ಎಫ್‌ಐ ಮಾಜಿ ಅಧ್ಯಕ್ಷ ಕೆ.ಪ್ರಕಾಶ್, ವಿದ್ಯಾರ್ಥಿನಿಯರ ಉಪ ಸಮಿತಿ ರಾಜ್ಯ ಸಂಚಾಲಕಿ ಸುಜಾತ, ಸರ್ದಾರ್ ಚಾಂದ್ ಪಾಷಾ, ಎಸ್‌ಎಫ್‌ಐ ಕಾರ್ಯದರ್ಶೀ ಡಿ.ಎನ್. ಮುನಿವೆಂಕಟಪ್ಪ, ಎಸ್‌ಎಫ್ ಐ ಜಿಲ್ಲಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಸೋಮಶೇಖರ್, ಸಿಐಟಿಯು ಮುನಿಕೃಷ್ಣಪ್ಪ, ಶಿವಪ್ಪ ಕೋಲಾರ ಹಾಗೂ ನೂರಾರು ವಿದ್ಯಾರ್ಥಿಗಳಿದ್ದರು.