ಬಾಗೇಪಲ್ಲಿ: ದೇಶದ ಸ್ವಾಭಿಮಾನಿ ದಲಿತರ ವಿಜಯ ಸಂಕೇತವಾದ ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ವೀರ ಯೋಧರಿಗೆ ಗೌರವಪೂರ್ವಕವಾದ ಕ್ರಾಂತಿಕಾರಿ ಭೀಮ ನಮನಗಳನ್ನು ಸಲ್ಲಿಸಲು ಪ್ರಯಾಣಿಸುತ್ತಿರುವ ನಮ್ಮ ದಲಿತ ಮುಖಂಡರಿಗೆ ಶುಭವಾಗಲಿ ಎಂದು ವಕೀಲರ ಸಂಘದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎ.ನಂಜುಂಡಪ್ಪ ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣ ಜಾಗದಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಚಲೋ ಭೀಮ ಕೊರೆಂಗವ್ ಯಾತ್ರೆಗೆ ಚಾಲನೆ ನೀಡಿ ಅವರು ಮಾತ ನಾಡಿದರು.
ಕೋರೆಗಾಂವ್, ಮಹಾರಾಷ್ಟ್ರ ರಾಜ್ಯದ ಪುಣೆಯಿಂದ ೧೭ ಕಿ.ಮೀ. ದೂರದಲ್ಲಿರುವ ಒಂದು ಪಟ್ಟಣ ಜನವರಿ ೦೧, ೧೮೧೮ ರಂದು ಇಡೀ ದೇಶ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ‘500 ಜನ’ ಮಹರ್ ಸೈನಿಕರ ತಂಡ, ಭೀಮಾನದಿ ದಂಡೆಯ ಮೇಲೆ ಇರುವ ಕೋರೆಗಾಂವ್ ಪಟ್ಟಣದಲ್ಲಿ ಬ್ರಾಹ್ಮಣ ಪೇಶ್ವೆ ರಾಜವಂಶದ ೨೦,೦೦೦ ಅಶ್ವದಳ, ೮,೦೦೦ ಕಾಲ್ದಳದಷ್ಟು ದೊಡ್ಡ ಸಂಖ್ಯೆಯ ಸೈನ್ಯವನ್ನು, ಶಿರೂರಿನಿಂದ ಭೀಮಾ ಕೋರೆಗಾಂವ್‌ಗೆ ಸುಮಾರು ೨೭ ಮೈಲಿ ದೂರವನ್ನು ಊಟ, ನೀರು, ವಿರಾಮವಿಲ್ಲದೆ ಕಾಲ್ನಡಿಗೆಯಲ್ಲಿ ಕ್ರಮಿಸಿ, ಯುದ್ಧದ ರಣಭೂಮಿಯಲ್ಲಿ ಆತ್ಮ ಗೌರವ ಹಾಗೂ ಅಸಹಾಯಕ ವರ್ಗಗಳ ಹಕ್ಕುಗಳಗಾಗಿ ಸತತ 12 ಘಂಟೆಗಳು ವೀರಾವೇಶದಿಂದ ಹೋರಾಡಿ ಗೆದ್ದರು.
ಈ ಯುದ್ಧದಲ್ಲಿ 22 ಜನ ಮಹರ್ (ದಲಿತ) ಜನಾಂಗದವರು ವೀರ ಮರಣ ಹೊಂದಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ತಪ್ಪದೇ ಜನವರಿ ೧ನೆ ತಾರೀಕು ಕೋರೆಗಾಂವ್‌ಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೋರಾಟಗಳು ಮತ್ತು ಅವರ ಆಶಯಗಳನ್ನು ಮೈಗೂಡಿಸಿಕೊಂಡು ರಾಜ್ಯಾದ್ಯಂತ ದಲಿತ, ಅಲ್ಪಸಂಖ್ಯಾತ ಹಿಂದುಳಿದ ಕಡುಬಡತನದ ಎಲ್ಲಾ ವರ್ಗಗಳ ಪರವಾಗಿ ಅನೇಕ ಭೂ ಹೊರಾಟಗಳನ್ನು, ಮೂಲಭೂತ ಸೌಕರ್ಯಗಳನ್ನು ಒದಗಿಸಿರುತ್ತದೆ ಎಂದರು.
ದಲಿತ ಸಂಘರ್ಷ ಸಮಿತಿ ಬಾಗೇಪಲ್ಲಿ ತಾಲ್ಲೂಕು ಶಾಖೆಯು ನ್ಯಾಯಯುತವಾದ ಇನ್ನೂ ಹಲವಾರು ಹೋರಾಟ ಗಳನ್ನು ಮಾಡಿಕೊಂಡು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷವು “ಬೀಮಾ ಕೋರೆಗಾಂವ್” ಭಾರತ ದೇಶದ ದೊಡ್ಡ ಮಟ್ಟದ ಇತಿಹಾಸ ಹೊಂದಿರುವ ಸಮಸ್ತ ದೇಶದ ಸ್ವಾಭಿಮಾನ ದಲಿತರ ವಿಜಯ ಸಂಕೇತವಾದ ಕೋರೆ ಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ವೀರ ಯೋಧರಿಗೆ ಗೌರವಪೂರ್ವಕವಾದ ಕ್ರಾಂತಿಕಾರಿ ಭೀಮ ನಮನ ಗಳನ್ನು ಸಲ್ಲಿಸಿ, ವೀರ ಯೋಧರಿಗೆ ಶುಭ ಹಾರೈಸಲು ನೂರಾರು ಮುಖಂಡರು ತೆರಳುತ್ತಿದ್ದು ಅವರ ಪ್ರಯಾಣ ಸುಖಮಯವಾಗಿ ಇರಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀನಿವಾಸ್, ಈಶ್ವರಪ್ಪ ಮುಖಂಡರಾದ ಗಿರಿಜಾ ಕಲ್ಯಾಣ ಮಂಟಪದ ಮಾಲೀಕ ಬಾಬಣ್ಣ, ದಸಂಸ ತಾಲ್ಲೂಕು ಸಂಘಟನಾ ಸಂಚಾಲಕರಾದ ಎಲ್.ಎನ್.ನರಸಿಂಹಯ್ಯ, ಎಂ.ವಿ.ನರಸಿಂಹಪ್ಪ, ಡಿ.ಕೆ.ರಮೇಶ್, ಕೆ.ಸತೀಶ್, ಜಿ.ಬಾಬು, ಜಿ.ನರಸಿಂಹಪ್ಪ, ವೈ.ನಾರಾಯಣಸ್ವಾಮಿ, ಶಿವಣ್ಣ, ಪಿ. ಎಲ್. ಡಿ.-ಬ್ಯಾಂಕ್ ನಿರ್ದೇಶಕರಾದ ವೆಂಕಟರಮಣ, ಶ್ರೀನಿವಾಸ, ಅಶೋಕ, ಟೈಲರ್ ವೆಂಕಟೇಶ, ಧನಂಜಯ್, ನಂಜುಂಡಪ್ಪ , ಎಂ.ವಿ.ಶಿವಣ್ಣ ಇದ್ದರು.