Monday, 18th November 2024

Chikkaballapur News: ಕನಕದಾಸರ ಆದರ್ಶಗಳು ನಮಗೆ ಮಾದರಿ: ತಹಶಿಲ್ದಾರ್ ಮನೀಶಾ ಮಹೇಶ್ ಪತ್ರಿ

ಬಾಗೇಪಲ್ಲಿ: ಸಮಾಜದ ಜಾತಿ ಶ್ರೇಷ್ಠತೆ ರೂಪದ ಅಂಧಕಾರವನ್ನು ತೊಲಗಿಸುವಲ್ಲಿ ಹೆಚ್ಚು ಕಾಳಜಿಯಿಂದ ಶ್ರಮಿಸಿದ ಕನಕದಾಸರ ಆದರ್ಶಗಳು ನಮಗೆ ಮಾದರಿ ಆಗಲಿ ಎಂದು ತಹಶಿಲ್ದಾರ್ ಮನೀಶಾ ಮಹೇಶ್ ಪತ್ರಿ ಹೇಳಿದರು.

ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಅವರ ಚಿತ್ರ ಪಟ್ಟಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ದಾಸ ಪರಂಪರೆಯಲ್ಲಿ ಸರ್ವಶ್ರೇಷ್ಠ ಸಂತ ಶ್ರೀ ಕನಕದಾಸರು. ತಮ್ಮ ತತ್ವಜ್ಞಾನ ಚಿಂತನೆಗಳು ಮತ್ತು ಕೀರ್ತನೆಗಳ ಮುಖಾಂತರ ಸಮಾಜದಲ್ಲಿ ಸಮಾನತೆ, ಜ್ಞಾನ ಸಾಮಾಜಿಕ ಸ್ಥಿರತೆಯನ್ನು ಸ್ಥಾಪಿಸಿದ ದೈವ ಪುರುಷ. ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲಯಾವುದೆಂದು ಬಲ್ಲಿರಾ ಎಂದು ನುಡಿಯುವುದರ ಮೂಲಕ  ಸಮಾಜದಲ್ಲಿ ಜಾತಿ ತಾರತಮ್ಯವನ್ನು ನಶಿಸುವಂತೆ ಮಾಡಿದವರು. ದಾಸ ಶ್ರೇಷ್ಠ ಶ್ರೀ ಕನಕದಾಸರ ಸಿದ್ಧಾಂತಗಳು ಆದರ್ಶಗಳು ಕೇವಲ ಅವರ ಜಯಂತ್ಯೋತ್ಸವದ ದಿನಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಜೀವದ್ಲಲೂ ಅಳವಡಿಸಿಕೊಂಡು ಸಮಾಜದ ಸ್ವಾಸ್ಥ್ಯಕ್ಕೆ ಕೊಡುಗೆಯನ್ನು ನಾವೆಲ್ಲರೂ ನೀಡಬೇಕು.

ತದನಂತರ. ಪುರಸಭೆ ಸದಸ್ಯರಾದ ಶ್ರೀನಾಥ್ ಅವರು “ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ   ಮಾತನಾಡಿ ಕನಕದಾಸರು ತಮಗೆ ದೊರೆತ ಸಂಪತ್ತನ್ನು ಬಡವರಲ್ಲಿ ಹಂಚಿದ ಮಹಾದಾನಿ. ಜಾತಿ ರಹಿತವಾದ ಸಮಸಮಾಜ ನಿರ್ಮಾಣವಾಗಬೇಕೆಂದು ಕನಸು ಕಂಡಿದ್ದರು. ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದಲು ಪ್ರಯತ್ನಿಸಿದ್ದ ಪರಿವರ್ತನೆಯ ಹರಿಕಾರರು ಎಂದು ಬಣ್ಣಿಸಿದರು.”

ಈ ಸಂದರ್ಭದಲ್ಲಿ ಎಸ್. ಎಸ್. ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು  ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಇಓ ಎನ್ ವೆಂಕಟೇಶಪ್ಪ, ಆರ್.ಹನುಮಂತ ರೆಡ್ಡಿ, ಶಿವಪ್ಪ, ಡಾ.ಸತ್ಯನಾರಾಯಣ ರೆಡ್ಡಿ, ನಾರಾಯಣಪ್ಪ, ನಾಗರಾಜು, ಎಂ.ವಿ.ರ೦ಗಾರೆಡ್ಡಿ ಹಾಗೂ ಕುರುಬ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.