Saturday, 23rd November 2024

Chikkaballapur News: ಮಣ್ಣಿನ ದೀಪ, ಎಣ್ಣೆ ವಿತರಿಸಿ ಜಾಗೃತಿ ಮೂಡಿಸಿದ ಸಮಾನ ಮನಸ್ಕರ ಸಂಘ

ಪಟಾಕಿ ಬೇಡ ಹಣತೆ ಹಚ್ಚಿ ಜಾಗೃತಿ ಅಭಿಯಾನ

ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬದ ಹೆಸರಿನಲ್ಲಿ ಬಾರಿ ಶಬ್ದ ಮಾಡುವ ಮತ್ತು ಅದಿಕಿ ಹೊಗೆ ಬಿಡುವ ಪಟಾಕಿ ಗಳನ್ನು ಹಚ್ಚಬೇಡಿ ಬದಲಿಗೆ ಹಣತೆ ಹಚ್ಚಿ ಸಂಭ್ರಮ ಹಾಗು ಸಂತೋಷಕರ ದೀಪಾವಾಳಿ ಆಚರಿಸಿ ಎಂದು ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಸಂಚಾರಿ ಪೊಲೀಸ್ ಠಾಣೆ ಹಾಗು ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೀಪಾವಳಿ ಹೆಸರಿನಲ್ಲಿ ದೇಶಾಧ್ಯಂತ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಬಾರಿ ಗಾತ್ರದ ಪಟಾಕಿ ಸುಡುವ ಕೆಟ್ಟ ಅಬ್ಯಾಸ ನಿಲ್ಲಿಸಬೇಕು ಅದರಿಂದ ಉಂಟಾಗುವ ಶಬ್ದ ಮಾಲಿನ್ಯ ವಾಯು ಮಾಲಿನ್ಯ ತಡೆಯೋಣ ಅದಕ್ಕಾಗಿ ದೀಪ ಹಚ್ಚಿ ಪಟಾಕಿ ಬೇಡ ಎನ್ನುವ ಆಂದೋಲನವನ್ನು ಚಿಕ್ಕಬಳ್ಳಾಪುರ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಸಂಚಾರಿ ಪೊಲೀಸ್ ಠಾಣೆ ಹಾಗು ಆಟೋ ಚಾಲಕರ ಸಂಘ ಮತ್ತು ಮಾಲೀಕರ ಸಂಘದಿಂದ ಉಚಿತವಾಗಿ ಮಣ್ಣಿನ ದೀಪ ಹಾಗು ಎಣ್ಣೆ ವಿತರಿಸಿ ಜಾಗೃತಿ ಮೂಡಿಸಿದರು.

ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ನಡೆಸಿದ ಜಾಗೃತಿ ಆಂದೋಲನದಲ್ಲಿ ಹಂಚಿಕೆ ಮಾಡುತಿದ್ದ ದೀಪ ಮತ್ತು ಎಣ್ಣೆಯನ್ನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಮಂಜುಳ ಇದೊಂದು ಅತ್ಯುತ್ತಮ ಕಾರ್ಯಕ್ರಮ ಸರಳ ಕಾರ್ಯಕ್ರಮವಾದರೂ ಸಾವಿರಾರು ಲಕ್ಷಾಂತರ ಜನರ ಕಣ್ಣು ತೆರೆಸಿ ಜ್ಞಾನೋದಯ ಮಾಡುತ್ತಿದ್ದಾರೆ. ಪಟಾಕಿ ಹಚ್ಚುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಮಕ್ಕಳು ಮತ್ತು ವೃದ್ದರು ಮೇಲೆ ಅಡ್ಡ ಪರಿಣಾಮಗಳಾಗುತ್ತದೆ ಮನೆ ಮುಂದೆ ಬೇಕಾದಷ್ಟ ದೀಪ ಹಚ್ಚಿ ಮನೆಯೂ ಅಂದವಾಗಿ ಕಾಣುತ್ತೆ ನಿಮ್ಮ ಮನೆ ಮನಸ್ಸು ಖುಷಿಯಾಗಿರುತ್ತೆ ಜನರಿಗೆ ಈ ಸಂದೇಶ ಸಾರುತ್ತಿರುವ ಇವರ ಪ್ರಯತ್ನ ಅತ್ಯುತ್ತಮವಾಗಿದೆ ಎಂದರು.

ಕಾರ್ಯಕ್ರಮ ಆಯೋಜಿಸಿದ್ದ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಗೌರವಾಧ್ಯಕ್ಷ ಹೋಟೆಲ್ ರಾಮಣ್ಣ ಮಾತನಾಡಿ ದೀಪಾವಳಿ ಜನರಿಗೆ ಬೆಳಕು ನೀಡಬೇಕು ಪಟಾಕಿ ಹಚ್ಚಿ ಪರಿಸರ ಹಾಳು ಮಾಡಿ ಅನಾರೋಗ್ಯದ ಸಮಾಜ ಸೃಷ್ಟಿಸಿ ಕತ್ತಲ ಕಡೆಗೆ ಹೋಗಬಾರದು. ಇದೇ ಕಾರಣ ಕಳೆದ ಎಂಟತ್ತು ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸಲು ಆಂದೋಲನ ಮಾಡುತ್ತಾ ಬಂದಿದ್ದೇವೆ. ನಾವು ಸಾಂಕೇತಕವಾಗಿ ದೀಪ ಮತ್ತು ಎಣ್ಣೆ ವಿತರಿಸಿ ಮೂಡಿಸುತ್ತಿರುವ ಜಾಗೃತಿಯ ಹಿನ್ನೆಲೆ ಅರ್ಥಮಾಡಿಕೊಂಡರೆ ಸಾಕು. ಎಲ್ಲರೂ ದೀಪ ಹಚ್ವಿ ದೀಪಾವಳಿ ಆಚರಿ ಸೋಣ ಎಂಬ ಸಂದೇಶ ಎಲ್ಲರಿಗೂ ತಲುಪಲಿ. ಒಂದಷ್ಟು ಜನರಾದರೂ ಪರಿವರ್ತನೆ ಆದರೆ ಸಾಕು. ನಮ್ಮ ಸಣ್ಣ ಪ್ರಯತ್ನಕ್ಕೆ ಸಿಕ್ಕ ಫಲ ಎಂದು ಭಾವಿಸುತ್ತೇವೆ ಎಂದರು.

ರಾಜ್ಯ ಸರ್ಕಾರವೂ ಸಹ ಕೇವಲ ಹಸಿರು ಪಟಾಕಿ ಮಾತ್ರ ಹಚ್ಚಬೇಕು. ದೀಪಾವಳಿ ದಿನದಂದು ಸಂಜೆ ಎಂಟರಿಂದ ಹತ್ತು ಗಂಟೆವರೆಗೂ ಮಾತ್ರ ಪಟಾಕಿ ಹಚ್ಚಲು ಸರ್ಕಾರ ಅನುಮತಿ ನೀಡಿದೆ. ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಳಪೆ ಗುಣಪಟ್ಟದ ಪಟಾಕಿಗಳಿಂದ ಪರಿಸರ ಹಾನಿಯಾಗುವ ಜತೆಗೆ ಜನರ ಕಣ್ಣು, ಕಿವಿ ದೇಹದ ಇತರೆ ಭಾಗಗಳಿಗೆ ಸಿಡಿದು ಅಪಾಯವಾಗುವ ಅವಕಾಶ ಗಳಿವೆ. ಭಾರೀ ಸಿಡಿತದ ಪಟಾಕಿಗಳನ್ನು ನಿಷೇಧಿಸಿದ್ದು ಹಸಿರು ಪಟಾಕಿ ಮಾತ್ರ ಸಿಡಿಸಬೇಕು ಇದರ ಬಗ್ಗೆ ಜಾಗರೂಕ ರಾಗಿರಿ ಎಂದು ಸಂಚಾರಿ ಪೊಲೀಸ್ ಠಾಣಾ ಪಿಎಸ್‌ಐ ಮಂಜುಳ ಕರೆ ನೀಡಿದರು.

ಈ ವೇಳೆ ಪರಿಸರ ಪ್ರೇಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗುಂಪುಮರದ ಆನಂದ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮೊಬೈಲ್ ಬಾಬು, ಇಬ್ರಾಹಿಂ ಕಲೀಲ್, ಸಮಾನ ಮನಸ್ಕರ ವೇದಿಕೆ ಸದಸ್ಯರಾದ ಹೆನ್ರಿ ಪ್ರಸನ್ನ ಕುಮಾರ್, ಕೆ.ಎಸ್.ನಾರಾಯಣಸ್ವಾಮಿ ಇತರರು ಹಾಜರಿದ್ದರು.