Thursday, 9th January 2025

Christmas Gift: ಮ್ಯಾಗ್ನಿಫ್ಲೆಕ್ಸ್ ಇಂಡಿಯಾದಿಂದ ಕ್ರಿಸ್‌ಮಸ್‌ ಉಡುಗೊರೆ

ಬೆಂಗಳೂರು: ಮಕ್ಕಳೆಂದರೆ ದೇವರ ಸಮಾನ. ಅವರ ಮುಖದಲ್ಲಿ ನಗುವನ್ನು ಕಾಣುವುದು ಸಂತೋಷದ ಸಂಗತಿ ಯೇ ಸರಿ ಎಂದು ಮ್ಯಾಗ್ನಿಫ್ಲೆಕ್ಸ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಆನಂದ ನಿಚಾಣಿ ಹೇಳಿದರು.

ಕ್ರಿಸ್‌ಮಸ್‌ ಸಂದರ್ಧದ ನೆನಪಿಗೆ ಮ್ಯಾಗ್ನಿಪ್ಲೆಕ್ಸ್‌ ಮಾಸ್‌ ಎನ್ನುವ ಕಾರ್ಯಕ್ರಮದಡಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಉಡುಗೊರೆಗಳನ್ನು ನೀಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ಎನ್‌ಜಿಓ ಗಳಿಗೆ ನೀಡಲಿದ್ದೇವೆ. ಇಂತಹ ಅನುದಾನವನ್ನು ನೀಡುತ್ತಿರುವುದರಿಂದಲೇ ಮ್ಯಾಗ್ನಿಫ್ಲೆಕ್ಸ್‌ ಕಂಪನಿಯು ಯುರೋಪಿನ ನಂ.ಒನ್‌ ಮ್ಯಾಟ್ರಸ್‌ ಕಂಪನಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.