Wednesday, 27th November 2024

ಸಿದ್ದರಾಮಯ್ಯ, ದೇವರಾಜ ಅರಸು ನಂತರದ ಶ್ರೇಷ್ಠ ಮುಖ್ಯಮಂತ್ರಿ

ವಿಜಯಪುರ : ದಾವಣಗೆರೆಯಲ್ಲಿ ನಡೆಯುವ ಮಾಜಿ ಸಿಎಂ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸುಮಾರು 50 ಸಾವಿರ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಚಂದ್ರಶೇಖರ ಕೋಟಬಾಗಿ ಮಾಹಿತಿ ನೀಡಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕಾರ್ಯ ಜಿಲ್ಲೆ ಯಿಂದಲೇ ಪ್ರಾರಂಭವಾಗಲಿದೆ ಎಂದರು. ವಿಶೇಷವಾಗಿ ಅಹಿಂದ್ ಸಮುದಾಯದವರು, ಸೇರಿದಂತೆ ಎಲ್ಲ ಸಮಾಜದವರ ಏಳಿಕೆಗಾಗಿ ದುಡಿದಿರುವ ಸಿದ್ದರಾಮಯ್ಯನವರು ದೇವರಾಜ ಅರಸು ನಂತರ ಒಬ್ಬ ಶ್ರೇಷ್ಠ ಮುಖ್ಯಮಂತ್ರಿ, ಇವರ ಹುಟ್ಟುಹಬ್ಬ ವನ್ನು ಪಕ್ಷಾತೀತವಾಗಿ ಆಚರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಇದೇವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ವಿಜಯಪುರ ನಗರ ದಿಂದಲೇ 200 ವಾಹನಗಳು ತೆರಳುತ್ತಿದ್ದು, ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಸಿದ್ದರಾಮಯ್ಯನವರು ಜಿಲ್ಲೆಗೆ ಭೇಟಿ ನೀಡಿದಾಗ ಹುಟ್ಟುಹಬ್ಬದ ಆಚರಣೆಯ ಈ ಬಗ್ಗೆ ಚರ್ಚೆ ನಡೆಸಿದ್ದೆವು, ಈಗ ಜಿಲ್ಲೆಯಿಂದ ಪಕ್ಷಾತೀತವಾಗಿ ಜಿಲ್ಲೆಯ ಜನರು ಈ ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಮೀದ್ ಮುಶ್ರೀಫ್, ಸುರೇಶ್ ಘೋನಸಗಿ, ಸೋಮನಾಥ್ ಕಳ್ಳಿಮನಿ, ಸುನಿಲ್ ಉಕ್ಕಲಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.