Sunday, 5th January 2025

Construction: ಸಂಸದರಿಂದ ಕಾಮಗಾರಿಗಳ ಪ್ರಗತಿ ಪರಿಶೀಲನೆ

ಗೌರಿಬಿದನೂರು: ಕೇಂದ್ರೀಯ ವಿದ್ಯಾಲಯದ ಕಾಮಗಾರಿ ನಿಗಧಿತ ಹದಿನೆಂಟು ತಿಂಗಳ ಅವಧಿಯಲ್ಲಿ ಪೂರ್ಣ ಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಂಸದ ಡಾ ಕೆ.ಸುಧಾಕರ್ ವ್ಯಕ್ತಪಡಿಸಿದರು.

ನಗರದ ಇಡಗೂರು ರಸ್ತೆ ಸಮೀಪ ನಿರ್ಮಾಣವಾಗುತ್ತಿರುವ ಕೇಂದ್ರೀಯ ವಿದ್ಯಾಲಯದ ಕಾಮಗಾರಿಯ ಪ್ರಗತಿ ಯನ್ನು ಪರಿಶೀಲನೆ ನಡೆಸಿದ ನಂತರ ಮಾತನಾಡುತ್ತಿದ್ದರು.

ಸುಮಾರು ಇಪ್ಪತೈದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಾಲ್ಕು ಎಕರೆ ವಿಸ್ತೀರ್ಣದ ಜಾಗದಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಇತ್ತೀಚಿಗೆ ಪ್ರಾರಂಭವಾಗಿದೆ,ಕಾಮಗಾರಿಯು ನಿಗಧಿತ ಅವಧಿಯೊಳಗೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದ ಅವರು ತಾಲ್ಲೂಕಿನ ಚಿಕ್ಕಕುರುಗೋಡು ಗ್ರಾಮದ ಸಮೀಪ ರೈಲ್ವೆ ಮೇಲು ಸೇತುವೆ ಮಂಜೂರಾಗಿದ್ದು ಕಾಮಗಾರಿಯ ಕೆಲಸ ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ,ತಹಶಿಲ್ದಾರ್ ಮಹೇಶ್ ಎಸ್ ಪತ್ರಿ,ಮುಖಂಡರಾದ ರವಿನಾರಾಯಣರೆಡ್ಡಿ, ಡಾ.ಶಶಿಧರ್, ಬಿಜಿ.ವೇಣುಗೋಪಾಲರೆಡ್ಡಿ, ನಗರ ಬಿಜೆಪಿ ಅಧ್ಯಕ್ಷ ಮಾರ್ಕೆಟ್ ಮೋಹನ್, ಜಯಣ್ಣ. ವೇಣು, ಪಾರ್ವತಮ್ಮ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಪ್ರೇಮ ಅರುಳ್, ಅಮಿತ್ ಶರ್ಮ, ಆರ್ಯನ್ ಕನ್ಸ್ಟ್ರಕ್ಚನ್ ಅಮರೇಗೌಡ, ಮಲ್ಲಿಕಾರ್ಜುನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: chikkaballapurnews