Tuesday, 26th November 2024

ವ್ಯಾಪಕ ಭ್ರಷ್ಟಾಚಾರ: ಸಹಕಾರಿ ನಿಗಮದ ಬ್ಯಾಂಕಿನ ವಿರುದ್ದ ವಾಗ್ದಾಳಿ

ಚಿಕ್ಕನಾಯಕನಹಳ್ಳಿ : ಹಸಿರು ಸಮೃದ್ದಿ ಸೌಹಾರ್ದ ಸಹಕಾರಿ ನಿಗಮದ ಬ್ಯಾಂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಬ್ಯಾಂಕ್‌ನಲ್ಲಿ ಸಿಇಓ ರಂಜಿತ್ ಹಾಗು ಶಂಕರಪ್ಪ ಅವರದ್ದೇ ದರ್ಬಾರ್ ಎಂದು ನಿರ್ದೇಶಕ ಪುರದಯ್ಯ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಸಿಇಓ ರಂಜಿತ್ ಓರ್ವ ರಿಂಗ್ ಮಾಸ್ಟರ್ ನೂರಾರು ರೈತರ ಶೇರು ಹಣದಿಂದ ಬ್ಯಾಂಕ್ ಕಾರ್ಯರಂಭ ಮಾಡಿದ್ದರೂ ಅವರ ಅಪ್ಪನ ಮನೆ ಆಸ್ತಿಯಂತೆ ಬ್ಯಾಂಕ್‌ನಲ್ಲಿ ನಡೆದುಕೊಳ್ಳುತ್ತಾರೆ. ನಿರ್ದೇಶಕರಿಗೆ ಗೌರವ ನೀಡುವುದಿಲ್ಲ. ಬ್ಯಾಂಕ್‌ನಲ್ಲಿ ನಡೆದ ಭ್ರಷ್ಟಾಚಾರ ಅವ್ಯವಹಾರದ ಬಗ್ಗೆ ತನಿಖೆ ನಡೆದರೆ ಆಡಳಿತ ಮಂಡಳಿಯ ಕೆಲವರು ತಲೆತಗ್ಗಿಸಬೇಕಾಗುತ್ತದೆ.

ರೈತರಿಂದ ಶೇರು ಹಣವನ್ನು ನಿರ್ದೇಶಕರುಗಳೇ ಸಂಗ್ರಹಿಸಿ ನೀಡಿದ್ದರೂ ಸಂಗ್ರಹಿಸಲು ತೆರಳಿದ ವೆಚ್ಚವೆಂದು ೨೫ ಸಾವಿರ ಹಣವನ್ನು ಬ್ಯಾಂಕ್‌ನಿ0ದ ಕಟಾಯಿಸಿದ್ದಾರೆ. ಸಾಲ ಪಡೆದವರ, ಸುಸ್ಥಿದಾರರ ಇತರೆ ಯಾವುದೇ ಮಾಹಿತಿ ಕೇಳಿದರೆ ನಿಮಗೆ ಯಾಕೆ ನೀಡಬೇಕು ಎಂದು ಕೊಂಕು ನುಡಿಯುತ್ತಾರೆ. ತೀವ್ರವಾಗಿ ಒತ್ತಾಯಿಸಿದರೆ ನಿಮ್ಮ ಶೇರು ಹಣವನ್ನು ವಾಪಸ್ ಪಡೆಯಿರಿ, ಕೋರ್ಟ್ಗೆ ಹೋಗಿ ಎಂದು ಧಮಕಿ ಹಾಕುತ್ತಾರೆಂದು ವಾಗ್ದಾಳಿ ನಡೆಸಿ ದರು.

ಒಂದು ಊಟ ೫ ಸಾವಿರ !
ಮುಖ್ಯ ಅತಿಥಿ ಒಬ್ಬರ ಊಟದ ಖರ್ಚು ೫ ಸಾವಿರ ಎಂದು ಲೆಕ್ಕ ಕೊಟ್ಟಿದ್ದಾರೆ. ಸಭೆಗಳಲ್ಲಿ ನಿರ್ದೇಶಕರು ತಿಳಿಸುವ ಯಾವುದೇ ಮಾಹಿತಿಯನ್ನು ನಡಾವಳಿ ಪುಸ್ತಕದಲ್ಲಿ ನಮೂದಿಸುವುದಿಲ್ಲ. ಆಡಿಟ್ ರಿಪೋರ್ಟ್ ಕೇಳಿದರೆ ನಿಮಗೆಲ್ಲಾ ಏನು ಕೊಡುವುದು ಎಂದು ಶಂಕರಪ್ಪನವರು ತಿಳಿಸುತ್ತಾರೆ ನಂತರ ಕಾನೂನು ಹೋರಾಟದ ಮೂಲಕ ಪಡೆಯಲಾಯಿತು ಎಂದು ಪುರದಯ್ಯ ವಿವರಿಸಿದರು.

ರೈತ ಸಂಘದ ಸಂಚಾಲಕ ತೋಂಟರಾದ್ಯ ಮಾತನಾಡಿ ನಿರ್ದೇಶಕರಿಗೆ ಮೀಟಿಂಗ್‌ಗಳಿಗೆ ಆಹ್ವಾನ ಪತ್ರಿಕೆ ಕಳುಹಿಸುತ್ತಿರಲಿಲ್ಲ. ಯಾವುದೇ ಅಧಿಕಾರ ಇಲ್ಲದಿದ್ದರೂ ಶಂಕರಪ್ಪನವರು ಮೀಟಿಂಗ್‌ನಲ್ಲಿ ಹಾಜರಿರುತ್ತಿದ್ದರು. ಮಗನನ್ನೇ ಸಿಇಓ ಮಾಡಿ ಅವರ ಗ್ರಾಮದವರನ್ನೇ ಅಧ್ಯಕ್ಷ ಹಾಗು ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ೧.೬೩ ಲಕ್ಷ ಹಣ ನಷ್ಟ ಹೊಂದಿದೆ ಎಂದು ವರದಿ ನೀಡಿದ್ದಾರೆ. ೧೫ ಲಕ್ಷಕ್ಕೂ ಹೆಚ್ಚು ಹಣ ಬ್ಯಾಂಕ್‌ನಲ್ಲಿದ್ದರೂ ನಷ್ಟ ಹೊಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಸಂತೋಷ್, ರೈತ ಮುಖಂಡ ಮರುಳಸಿದ್ದಪ್ಪ, ನಟರಾಜು, ಹುಳಿಯಾರ್ ಲೋಕಣ್ಣ, ಅಂಜನಪ್ಪ, ಸದಾಶಿವಯ್ಯ ಇದ್ದರು.