Sunday, 15th December 2024

ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಮಾಜವಾದಿ ಬೆಂಬಲಿಸಿ: ರಾಜ್ಯಾಧ್ಯಕ್ಷ ಮಂಜಪ್ಪ

ತುಮಕೂರು: ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕರ್ನಾಟಕ ರಾಜ್ಯದ ಜನತೆ 2023ರ ಚುನಾವಣೆಯಲ್ಲಿ ಅಖಿಲೇಶ್  ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷ ಮಂಜಪ್ಪ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರಕಾರ ದಿಂದ ಅಭಿವೃದ್ದಿ ಎಂಬುದು ಕುಂಠಿತ ವಾಗಿದು, ಎಲ್ಲಾ ವಿಭಾಗಗಳಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.ಇದರಿಂದಾಗಿ ರಾಜ್ಯ ಅಭಿವೃದ್ದಿಯಲ್ಲಿ ಮತ್ತಷ್ಟು ಹಿಂದಕ್ಕೆ ಜಿಗಿದಿದೆ ಎಂದರು.
ಸಾರ್ವಜನಿಕರೇ ಹೇಳುವಂತೆ ಬಿಜೆಪಿ ಸರಕಾರದಲ್ಲಿ ಕಾಮಗಾರಿಯ ಬಿಲ್ ಪಡೆಯಲು ಶೇ40ರಷ್ಟು ಕಮಿಷನ್,ಉದ್ಯೋಗ ಪಡೆಯಲು 5 ಲಕ್ಷದಿಂದ 1.50 ಕೋಟಿಯಷ್ಟು ಲಂಚ ನೀಡಬೇಕಾಗಿದೆ.
ಕಮಿಷನ್ ಸ್ಥಿತಿಯಿಂದಾಗಿ ಸರಕಾರದಿಂದ ಮಾಡಿರುವ ಎಲ್ಲಾ ಕಾಮಗಾರಿಗಳು ಕಳಪೆ ಯಿಂದ ಕೂಡಿದ್ದು, ಒಂದು ಸಣ್ಣ ಮಳೆ ಬಂದರೂ ತಡೆದುಕೊಳ್ಳದ ಸ್ಥಿತಿ ತಲುಪಿವೆ. ಇದಕ್ಕೆಲ್ಲಾ ಕಾರಣ ಭ್ರಷ್ಟಾಚಾರ. ಇದರಿಂದ ರಾಜ್ಯದ ಜತೆಗೆ ರೋಸಿ ಹೋಗಿ, ಬದಲಾವಣೆ ಬಯಸಿದ್ದಾರೆ. ಹಾಗಾಗಿ ಕಳೆದ ಐದು ವರ್ಷಗಳ ಕಾಲ ಉತ್ತರಪ್ರದೇಶದಲ್ಲಿ ಉತ್ತಮ ಆಡಳಿತ ನೀಡಿ, ಆ ರಾಜ್ಯದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮಾಜವಾದಿ ಪಕ್ಷಕ್ಕೆ ಮತದಾರರು ಆಶೀರ್ವಾದ ಮಾಡುವ ಮೂಲಕ ಕರ್ನಾಟಕವನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೊಗಲು ಸಹಕರಿಸುವಂತೆ  ಮನವಿ ಮಾಡಿದರು.
ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಿ.ಪರಮೇಶ್ವರಯ್ಯ ಮಾತನಾಡಿ, ಮುಂಬರುವ 2023ರ ಚುನಾವಣೆಯಲ್ಲಿ ಸಮ್ಮ ಪಕ್ಷ ದಿಂದ ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು,ಸಭ್ಯ, ಸಜ್ಜ ಮತ್ತು ಪ್ರಾಮಾಣಿಕ ವ್ಯಕ್ತಿ ಗಳನ್ನು ಪಕ್ಷದ ಅಭ್ಯರ್ಥಿಗಳನ್ನಾಗಿ ಮಾಡಲಿದೆ.ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜವಾದಿ ಪಾರ್ಟಿಯ ರಾಜ್ಯ ಸಮಿತಿ ಜಗದೀಶ್,  ಜಿಲ್ಲಾ ಕಾರ್ಯದರ್ಶಿ ಹಿತೇಶ್, ನಗರ ಘಟಕದ ಅಧ್ಯಕ್ಷ  ದೀಪಕ್, ಕೊರಟಗೆರೆ ಅಧ್ಯಕ್ಷ ನಾಗರಾಜಯ್ಯ,ಮಧುಗಿರಿ ತಾಲೂಕು ಅಧ್ಯಕ್ಷ ನಾಗೇಂದ್ರ, ತುಮಕೂರು ನಗರ ಅಧ್ಯಕ್ಷ ದೇವನೂರು ಪ್ರಮೋದ್, ವಕೀಲರಾದ ಕೊರಟಗೆರೆ ಹನುಮಂತರಾಯ  ಉಪಸ್ಥಿತರಿದ್ದರು.