ಅಧ್ಯಕ್ಷ ಉಪಾಧ್ಯಕ್ಷ ಕಾರ್ಯದರ್ಶಿ ಖಜಾಂಚಿ ಸ್ಥಾನಕ್ಕೆ ಸ್ಪರ್ಧೆ ಜೋರು
ಒಟ್ಟು ೪೨೦ ಮತಗಳ ಪೈಕಿ ೪೧ ಮತಗಳು ಚಲಾವಣೆ ಆಗಿವೆ
ಮತ ಸೆಳೆಯಲು ಉಡುಗೊರೆಗಳ ಮೊರೆ ಹೋದ ವಕೀಲರ ಬಣಗಳು
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ವಕೀಲರ ಸಂಘದ ೨೦೨೪-೨೬ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ, ಕಾರ್ಯದರ್ಶಿ ಖಜಾಂಚಿ ಸೇರಿ 20 ಮಂದಿ ನಿರ್ದೇಶಕ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ೪೨೦ ಒಟ್ಟು ಮತಗಳ ಪೈಕಿ ೪೧೩ ಮತಗಳು ಚಲಾವಣೆಗೊಂಡಿದ್ದು ಮೂರು ಬಣಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಮತ ಎಣಿಕೆ ಕಾರ್ಯಭರದಿಂದ ಸಾಗಿದೆ.
ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಗುರುವಾರ ನಡೆದ ೨೦೨೪-೨೬ನೇ ಸಾಲಿನ ನೂತನ ಆಡಳಿಯ ವಕೀಲರ ಸಂಘದ ಚುನಾ ವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲ ಕೆ.ಹೆಚ್ ತಮ್ಮೇಗೌಡ, ಕೆ.ಎಂ.ಗೋವಿಂದರೆಡ್ಡಿ, ಆರ್.ಮಟಮಪ್ಪ, ಯುವ ವಕೀಲ ಕೆ.ವಿ.ಅಭಿಲಾಷ್ ಸ್ಪರ್ಧೆ ಮಾಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ವಿ.ಬಾಲಾಜಿ, ಹೆಚ್.ಮುನಿರಾಜು, ಎಂ.ಜೆ.ರಾಮು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಟಿ.ಎಂ.ವೆಂಕ ಟೇಶ್, ಜಿ.ಎಸ್.ಹರಿಕೃಷ್ಣ, ಮಂಜುನಾಥ್, ಜಂಟಿ ಕಾರ್ಯದರ್ಶಿ ಚಂದ್ರಶೇಖರ್, ಬಿ.ಆರ್. ಶ್ರೀದೇವಿ, ಖಜಾಂಚಿ ಸ್ಥಾನಕ್ಕೆ ಅಯೂಬ್ ಖಾನ್, ಕೆ.ಎನ್. ಶಿವಾರೆಡ್ಡಿ, ಆರ್.ಬಿ.ದೇವರೆಡ್ಡಿ ಸ್ಪರ್ಧಿಸಿದ್ದಾರೆ ಇವರನ್ನು ಹೊರತುಪಡಿಸಿ ೨೦ ಮಂದಿ ಕಾರ್ಯಕಾರಿ ಮಂಡಳಿಗೆ ಸ್ಪರ್ಧೆ ಮಾಡಿದ್ದಾರೆ.
ಈ ಬಾರಿ ಬಣ ರಾಜಕೀಯ ಜೋರಾಗಿ ಸದ್ದು ಮಾಡಿದೆ. ಎಲ್ಲಾ ೩ ಬಣಗಳ ಅಭ್ಯರ್ಥಿಗಳು ಕೂಡ ತಮ್ಮ ಪರ ಹೆಚ್ಚಿನ ಮತಗಳನ್ನು ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನು ನಡೆಸಿದ್ದು, ಪ್ರಧಾನವಾಗಿ ಉಡುಗೊರೆಗಳ ಮೊರೆ ಹೋಗಿರುವುದು ಕಂಡು ಬಂದಿದ್ದು ಇದು ಫಲಿತಾಂಶದ ಮೇಲೆ ಬಾರಿ ಪರಿಣಾಮ ಬೀರುವುದು ಖಚಿತ ಎನ್ನುವುದು ಹೆಸರು ಹೇಳದ ವಕೀಲರೊಬ್ಬರ ಮಾತಾಗಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವ ಮೊದಲು ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ.ವೆಂಕಟೇಶ್ ಗೆಲುವು ಕಂಡಿದ್ದರೆ, ಖಜಾಂಚಿಯಾಗಿ ಅಯೂಬ್ ಖಾನ್ ಗೆಲುವು ಕಂಡಿದ್ದಾರೆ. ಉಳಿದಂತೆ ಕಾರ್ಯಕಾರಿ ಮಂಡಳಿಗೆ ಸ್ಪರ್ಧಿಸಿದ್ದವರ ಪೈಕಿ ಪ್ರವೀಣ್,ಎಸ್.ಮುನಿರಾಜು.,ವೈ,ಎನ್. ಶ್ರೀನಿವಾಸ್, ಅಶ್ವತ್ಥನಾರಾಯಣ, ನರಸಿಂಹಮೂರ್ತಿ, ರಾಜೇಂದ್ರ, ಜಯಗಳಿಸಿದ್ದಾರೆ ಎಂಬ ಮಾಹಿತಿಯಿದ್ದು ಸ್ಪಷ್ಟ ಫಲಿತಾಂಶದ ಮಾಹಿತಿ ನಾಳೆ ಗೊತ್ತಾಗಲಿದೆ ಎನ್ನುವುದು ಹಿರಿಯ ವಕೀಲರೊಬ್ಬರ ಮಾಹಿತಿಯಾಗಿದೆ.
ಇದನ್ನೂ ಓದಿ: chikkaballapurnews