Sunday, 15th December 2024

ಕರೋನಾ ಪಾಸಿಟಿವ್: ಜನತೆ ಆತಂಕ

#corona
ತುಮಕೂರು: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಕರೋನಾ ಪಾಸಿಟಿವ್ ಕಂಡುಬಂದಿದೆ.
ನಗರದ ಸಿದ್ದಗಂಗಾ ಬಡಾವಣೆಯ 61 ವರ್ಷದ ವ್ಯಕ್ತಿಗೆ ಪಾಸಿಟಿವ್ ಕಂಡುಬಂದಿದ್ದು, ಬಿಎಫ್-7 ಸೋಂಕು ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ನಿಗಾವಹಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್ಒ ಡಾ.ಮಂಜುನಾಥ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹಲವು ತಿಂಗಳ ನಂತರ ಕರೋನಾ ಪಾಸಿಟಿವ್ ಕಂಡುಬಂದಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.