ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ: ಡಾ.ಸುಮನ ಟಿ.ಎಂ.
ತಿಪಟೂರು: ಆರೋಗ್ಯ ಎನ್ನುವುದು ಬಹಳ ಮುಖ್ಯವಾದುದು ಆರೋಗ್ಯವನ್ನು ಹೆಚ್ಚಿಸಿಕೊಳ್ಳ ಬೇಕಾದರೆ ನಮ್ಮಲ್ಲಿರುವ ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕೊನೇಹಳ್ಳಿಯ ಆರ್ಯುವೇದ ಆಸ್ವತ್ರೆಯ ಹಿರಿಯ ವೈಧ್ಯಾಧಿಕಾರಿ ಡಾ.ಸುಮನಾ ಟಿ.ಎಂ. ಅಭಿಪ್ರಾಯಪಟ್ಟರು.
ನಗರದ ದೊಡ್ಡಯ್ಯನಪಾಳ್ಯದ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘ ನಿಯಮಿತದ ೨೨ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರೋನಾ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯ ಬಗ್ಗೆ ಎಲ್ಲರಿಗೂ ಅರಿವಿಗೆ ಬಂದಿದೆ, ಹೇಗೆ ಹೆಚ್ಚಿಸಿಕೊಳ್ಳ ಬೇಕೆಂದು ತಮ್ಮದೇ ಆದ ರೀತಿಯಲ್ಲಿ ಅಂದಾಜಿಸಿದ್ದಾರೆ, ಉತ್ತಮ ಆರೋಗ್ಯಕ್ಕೆ ಉತ್ತಮ ಯೋಗಾಭ್ಯಾಸಗಳ ಜೊತೆಗೆ ಉತ್ತಮ ಗುಣಮಟ್ಟದ ಆಹಾರ ಸೇವಿಸುವುದರಿಂದ ಆರೋಗ್ಯಯುತ ಜೀವನವನ್ನು ನಡೆಸಬಹುದೆಂದು ತಿಳಿಸಿದರು.
ಪ್ರಸ್ತುತದಲ್ಲಿ ಎಲ್ಲರೂ ಆರ್ಥಿಕತೆಯ ದೃಷ್ಟಿಯಿಂದ ಸೀಮೆ ಹಸುಗಳ ಬಳಕೆ ಹೆಚ್ಚಾಗಿದ್ದು ನಮ್ಮ ಪುರಾತನ ಕಾಲದಿಂದಲೂ ನಮ್ಮ ಮನೆಗಳಲ್ಲಿ ಬೆಳಸಿದ ದೇಶಿ ಜಾನುವಾರಗಳ ನಾಟಿ ಹಸುಗಳ ಪಾಲನೆ ಪೋಷಣೆಯು ಕಡಿಮೆಯಾಗಿದ್ದು ನಮ್ಮ ಆರೋಗ್ಯ ಹದಗೆಡಲು ಕಾರಣವಾಗಿದೆ, ನಾಟಿ ಹಸುವಿನ ತಪ್ಪು, ಬೆಣ್ಣೆ, ಹಾಲು ಸೇವನೆಯಿಂದ ನಮ್ಮ ಆರೋಗ್ಯವನ್ನು ಸದೃಢವಾಗಿಡಲು ಸಾದ್ಯವಾಗುತ್ತದೆ ಎಂದರು.
ಸ0ಘದ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಕರೋನಾ ಕಷ್ಟಕಾಲದಲ್ಲಿ ನಮ್ಮ ಸಹಕಾರ ಸಂಘ ದಿ0ದ ತ್ವರಿತ ಗತಿಯಲ್ಲಿ ಸಾಲವನ್ನು ಮಂಜೂರು ಮಾಡುವ ಸೇವೆಯನ್ನು ಪ್ರಾರಂಭಿಸಲಾಗಿತ್ತು. ಇದರ ಪ್ರಯೋಜನವನ್ನು ಅನೇಕ ವ್ಯಾಪಾರಸ್ಥರು ಪಡೆದುಕೊಂಡು ಆರ್ಥಿಕ ಸುಧಾರಣೆಯನ್ನು ಪಡೆದು ಕೊಂಡಿರುವ ಉದಾಹರಣೆಗಳಿವೆ. ಜೊತೆಗೆ ಹೊಸ ವ್ಯಾಪಾರ, ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು, ಗೃಹ ಮತ್ತು ವಾಹನಸಾಲವನ್ನಾಗಿ ತ್ವರಿತ ವಾಗಿ ನೀಡುತ್ತಿರುವ ನಮ್ಮ ಸಂಘ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸದಸ್ಯರನ್ನು ಹೊಂದಿ ಅಭಿವೃದ್ಧಿಯ ಧಾಪುಗಾಲನ್ನಿಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿ ದರು.
ನಗರ ಪೊಲೀಸ್ ಠಾಣೆಯ ಪಿಎಸ್ಐ ದ್ರಾಕ್ಷಾಯಣಮ್ಮ ಮಾತನಾಡಿ, ಶಿಸ್ತುಬದ್ದವಾದ ಆರ್ಥಿಕ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರಿ ಸಂಘ ಅನೇಕ ಜನರ ಬದುಕನ್ನು ಬದಲಿಸಿದೆ. ಈ ಸಂಘದಿ0ದ ಸಾಲಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಗಳಾಗಿದ್ದಾರೆ. ಒಂದು ಹಣಕಾಸು ಸಂಘ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯವೆಂದರು.
ಉಪಾಧ್ಯಕ್ಷ ಎಂ.ಸಿ.ಮ0ಜುನಾಥ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎ.ಸಿ.ಮೃತ್ಯುಂಜಯ, ಮಾಜಿ ನಗರಸಭೆ ಸದಸ್ಯೆ ವಿಶಾಲಾ ಸೋಮಶೇಖರ್, ನೌಕರ ಸಂಘದ ಮಾಜಿ ಅಧ್ಯಕ್ಷ ಕೆ.ಎಂ.ರಾಜಣ್ಣ, ನಿರ್ದೇಶಕರಾದ ರಾಜಶೇಖರ್, ಎಂ.ಆರ್.ಸೋಮಶೇಖರ್, ನಟರಾಜು, ಗಿರೀಶ್ ಕುಮಾರ್, ಸಂಜೀವಯ್ಯ, ರೇಣುಕಮೂರ್ತಿ, ಕಲ್ಲೇಶ್ ಸೇರಿದಂತೆ ನಿರ್ದೇಶಕರು, ಸದಸ್ಯರು, ಸಿಬ್ಬಂದಿವರ್ಗ ಮುಂತಾದವರು ಹಾಜರಿದ್ದರು. ಸಂಘದ ಸದಸ್ಯರ ಮಕ್ಕಳು ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.