Wednesday, 27th November 2024

ಶಿರಾದಲ್ಲಿ ಸಿಪಿಐ 13 ಜಿಲ್ಲಾ ಸಮ್ಮೇಳನ

ತುಮಕೂರು: ಜಿಲ್ಲೆಯ ಶಿರಾ ನಗರದಲ್ಲಿ ಸೆ.6 ಮತ್ತು 7 ರಂದು ನಡೆದ ಸಿಪಿಐ 13ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟçದ ವಿವಿಧ ಸಮಸ್ಯೆಗಳ ಪರಿಹಾರ ಕುರಿತಂತೆ 22 ನಿರ್ಣಯಗಳನ್ನು ಕೈಗೊಂಡಿದ್ದು, ಮುಂದಿನ ಮೂರು ವರ್ಷಗಳ ಕಾಲ ಇವುಗಳ ಜಾರಿಗಾಗಿ ವಿವಿಧ ರೀತಿಯ ಹೋರಾಟ ಹಮ್ಮಿಕೊಳ್ಳುವುದಾಗಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಬೆಳೆಹಾನಿ ವೈಜ್ಞಾನಿಕ ಪರಿಹಾರ, ಜಾನುವಾರುಗಳ ಅಕಾಲಿಕ ಮರಣಕ್ಕೆ ಪರಿಹಾರ, 12 ಗಂಟೆಗಳ ಕಾರ್ಮಿಕರ ದುಡಿಮೆ ರದ್ದು, ಮುರುಘಾ ಶರಣರ ವಿರುದ್ದ ಸೂಕ್ತ ತನಿಖೆಗೆ ಒತ್ತಾಯ ಸೇರಿದಂತೆ ಹಲವು ಸ್ಥಳೀಯ ಸಮಸ್ಯೆಗಳ ಪರಿಹಾರದ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಇದೇ ತಿಂಗಳ 24-27ರವರೆಗೆ ಹಾಸನದಲ್ಲಿ ನಡೆಯುವ ರಾಜ್ಯಮಟ್ಟದ 24ನೇ ಸಮ್ಮೇಳನದಲ್ಲಿ ಈ ವಿಚಾರಗಳನ್ನು ಮಂಡಿಸಲಾಗುವುದು ಎಂದರು.
ಕೇ0ದ್ರ ಸರಕಾರದ ಇತ್ತೀಚಿನ ಬಹುತೇಕ ಕಾಯ್ದೆಗಳು ಕಾರ್ಮಿಕರಿಗೆ ಮಾರಕ, ಉದ್ದಿಮೆ ದಾರರಿಗೆ ಪೂರಕ ಎಂಬ0ತಾಗಿವೆ. ಹಾಗಾಗಿ ಸರಕಾರಗಳು ಕಾರ್ಮಿಕರ ಪರವಾದ ಕಾಯ್ದೆಗಳನ್ನು ಜಾರಿಗೆ ತರಬೇಕು, ದುಡಿಮೆಯ ಅವಧಿಯನ್ನು ಈ ಹಿಂದಿನ0ತೆ 8 ಗಂಟೆ ಗಳಿಗೆ ಸಿಮೀತಗೊಳಿಸಬೇಕು. ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿ ಪಡಿಸಬೇಕೆಂಬುದು ಸಿಪಿಐನ ಒತ್ತಾಯ ವಾಗಿದೆ ಎಂದು ಗಿರೀಶ್ ತಿಳಿಸಿದರು.
ತುಮಕೂರು ಜಿಲ್ಲೆ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿದ್ದರೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ವಿದ್ಯಾವಂತ ನಿರು ದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಿ, ಉದ್ಯೋಗ ದೊರೆಯುವಂತೆ ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ, ದುಬಾರಿಯಾಗುತ್ತಿರುವ ಹೈನುಗಾರಿಕೆಯಿಂದ ಬಡವರು ಪಶುಸಂಗೋಪನೆ ಮಾಡುವುದು ಕಷ್ಟಕರವಾಗುತ್ತಿದೆ. ಹಾಗಾಗಿ ಹಿಂಡಿ, ಭೂಸಾ ಸೇರಿದಂತೆ ಜಾನುವಾರು ಮೇವುಗಳ ಬೆಲೆ ಕಡಿಮೆ ಮಾಡಿ, ಹೈನುಗಾರಿಕೆಗೆ ಉತ್ತೇಜನ ನೀಡಬೇಕೆಂದು ಜಿಲ್ಲಾ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಮುರುಘಾಶ್ರೀಗಳ ವಿರುದ್ದದ್ದ ಪೋಕ್ಸೋ ಕಾಯ್ದೆಯನ್ನು ಸರಕಾರದ ಹಸ್ತಕ್ಷೇಪವಿಲ್ಲದೆ ನಡೆಸಿ, ಸತ್ಯಾಂಶವನ್ನು ಜನರಿಗೆ ತಿಳಿಸಬೇಕು.ಹಾಗೆಯೇ ಅನಧಿಕೃತವಾಗಿ ಬಂಧನದಲ್ಲಿರುವ ಆನಂದ ತೆಲ್ತುಂಬೆ ಸೇರಿದಂತೆ ಮಾನವ ಹಕ್ಕುಗಳ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಗುಜರಾತಿನ ಬಲ್ಕೀಸ್‌ಭಾನು ಪ್ರಕರಣದಲ್ಲಿ ಸನ್ನಡೆತೆಯಿಂದ ಬಿಡುಗಡೆಯಾಗಿರುವ 9 ಜನ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆAಬುದು ಸಿಪಿಐ ಪಕ್ಷದ ಒತ್ತಾಯವಾಗಿದೆ ಎಂದು ಗಿರೀಶ್ ನುಡಿದರು.
ಅರ್ಥಿಕ ಸಂಕಷ್ಟದಲ್ಲಿರುವ ಶೇಂಗಾ ಬೆಳೆಗಾರರಿಗೆ ಸೂಕ್ತ ಪರಿಹಾರ, ಎತ್ತಿನಹೊಳೆ, ಭದ್ರಮೇಲ್ದಂಡೆ, ಹೇಮಾವತಿ ಯೋಜನೆ ಯಲ್ಲಿ ಜಿಲ್ಲೆಗೆ ಬರಬೇಕಾದ ನೀರಿನ ಸಂಪೂರ್ಣ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳುವುದು, ಬಲವಂತದ ಭೂ ಸ್ವಾಧೀನ ಕೈಬಿಡ ಬೇಕು.
ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿ, ಅಗತ್ಯವಸ್ತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಸೇರಿದಂತೆ ಹಲವು ನಿರ್ಣಯಗಳನ್ನು 13ನೇ ಜಿಲ್ಲಾ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದ್ದು, ಸದರಿ ನಿರ್ಣಯಗಳನ್ನು ರಾಜ್ಯಮಟ್ಟದ ಸಮ್ಮೇಳನದಲ್ಲಿಯೂ ಮಂಡಿಸಿ, ರಾಜ್ಯ ಸಮಿತಿಯ ಗಮನಕ್ಕೆ ತರಲಾಗುವುದು.ರಾಜ್ಯ ಸಮ್ಮೇಳನಕ್ಕೆ ತುಮಕೂರು ಜಿಲ್ಲೆಯಿಂದ 3000 ಸಾವಿರ ಜನ ಭಾಗವಹಿಸಲಿದ್ದೇವೆ ಎಂದರು.
ತುಮಕೂರು ಜಿಲ್ಲಾ ಸಿಪಿಐ ಘಟಕವನ್ನು ಪುನರಚಿಸಿದ್ದು, ಜಿಲ್ಲಾ ಕಾರ್ಯದರ್ಶಿಯಾಗಿ ಗಿರೀಶ್, ಸಹಕಾರ್ಯದರ್ಶಿಗಳಾಗಿ ಗೋವಿಂದರಾಜು,ಆರ್,ಚ0ದ್ರಶೇಖರ್ ಜಿ., ಖಜಾಂಚಿಯಾಗಿ ಆಶ್ವಥನಾರಾಯಣ, ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಜಯಲಕ್ಷö್ಮಮ್ಮ,ಶಶಿಕಾಂತ್, ರುದ್ರಪ್ಪ, ಚಂದ್ರಶೇಖರ್ ಡಿ.ಎಲ್.ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.