ಮಧುಗಿರಿ: ಅನಾರೋಗ್ಯದಿಂದ ಸಾವನ್ನಪ್ಪಿದ್ದ ದಲಿತ ಮಹಿಳೆಯ ಅಂತ್ಯಸAಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿರುವ ಘಟನೆ ತಾಲ್ಲೂಕಿನ ಬಿಜವರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಸಬಾ ವ್ಯಾಪ್ತಿಯ ಬಿಜವರ ಗ್ರಾಮದ ಹನುಮಕ್ಕ(೭೫) ಇಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಹನುಮಕ್ಕ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ಥಳವಾಗಲಿ, ಸರ್ಕಾರಿ ರುದ್ರಭೂಮಿ ಯಾಗಲಿ ಇಲ್ಲದೆ ಇರುವುದರಿಂದ ಗ್ರಾಮಸ್ಥರು ಹನುಮಕ್ಕ ಮೃತ ದೇಹಕ್ಕೆ ಅಂತ್ಯ ಸಂಸ್ಕಾರ ಮಾಡಲಾಗದೆ ಪರದಾಡುತ್ತಿರುವ ವಿಚಾರ ತಿಳಿದ ದಲಿತ ಸಾಹಿತ್ಯ ಪರಿಷತ್ತು ಹಾಗೂ ಆದಿಜಾಂಭವ ಸಂಘಟನೆ ಪದಾಧಿಕಾರಿಗಳು ಗ್ರಾಮಕ್ಕೆ ತೆರಳಿ ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಒಂದು ವೇಳೆ ಶವ ಸಂಸ್ಕಾರಕ್ಕೆ ಜಾಗ ನೀಡಲ್ಲಿಲ್ಲವೆಂದರೆ ತಾಲೂಕು ಕಛೇರಿ ಮುಂದೆ ಶವ ಸಂಸ್ಕಾರ ಮಾಡ ಲಾಗುತ್ತದೆ ಎಂದು ಆದಿಜಾಂಭವ ಮಹಾಸಭಾದ ಅಧ್ಯಕ್ಷ ಡಾ.ಮಹರಾಜು ಎಚ್ಚರಿಸಿದರು.
ಬಿಜವಾರ ಗ್ರಾಮದಲ್ಲಿ ಸುಮಾರು ೩೫೦ ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಾಗಿದ್ದು ಹೆಣ ಹೂಳಲು ಅಂಗೈ ಅಗಲ ಜಾಗವಿಲ್ಲದ ಕಡುಬಡವರಿದ್ದಾರೆ. ಈ ಗ್ರಾಮದಲ್ಲಿ ಯಾರಾದ್ರೂ ಮೃತಪಟ್ಟರೆ ಇವರಿಗೆ ಶವ ಸಂಸ್ಕಾರಕ್ಕೂ ಜಾಗ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಇದ್ದು ತಾಲ್ಲೂಕು ಆಡಳಿತ ಕಾಟಾಚಾರಕ್ಕೆ ದಲಿತರ ಕುಂದು ಕೊರತೆ ಸಭೆಗಳನ್ನ ನಡೆಸುತ್ತಿದ್ದಾರೆ.
ಸಭೆಗಳಲ್ಲಿ ರುದ್ರಭೂಮಿ ಮುಂಜೂರು ಮಾಡುವುದಾಗಿ ಹೇಳಿ ದಲಿತರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮದುಗಿರಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ದಲಿತರ ಸ್ಮಶಾನಗಳಿಗೆ ಜಮೀನು ಮಂಜೂರು ಮಾಡುವಂತೆ ದಲಿತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಹನುಮಂತರಾಜು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಆದಿ ಜಾಂಭವ ಮಹಾ ಸಭಾದ ಬಿಜವರ ರವಿಕುಮಾರ್, ಮಾತನಾಡಿ ನಮ್ಮ ಗ್ರಾಮಕ್ಕೆ ರುದ್ರಭೂಮಿ ಮುಂಜೂರು ಮಾಡುವಂತೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರು ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ನಿರ್ಲಕ್ಷö್ಯಮಾಡಿದ್ದಾರೆ. ಇಂದು ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದರು.
ಸಂಘಟನೆಗಳ ಕರೆಗೆ ತಕ್ಷಣವೇ ಪ್ರತಿಕ್ರಿಯಿಸಿದ ತಹಶೀಲ್ದಾರ್ ಸುರೇಶ್ ಆಚಾರ್ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರು ಹಾಗೂ ಗ್ರಾಮಸ್ಥರೊಂದಿಗೆ ತೆರಳಿ ಗುರುವಡೇರಹಳ್ಳಿ ಸರ್ವೆ ನಂ ೫೮ ರಲ್ಲಿ ಸರ್ಕಾರದಿಂದ ಸ್ಮಶಾನಕ್ಕೆಂದೇ ಮುಂಜೂರು ಆಗಿರುವ ರುದ್ರಭೂಮಿ ಇರುವ ಜಾಗವನ್ನು ತಮ್ಮ ಕಂದಾಯ ಸಿಬ್ಬಂದಿಗಳೊ0ದಿಗೆ ಗುರುತಿಸಿ ನೀವು ಇಲ್ಲಿಯೇ ಶವ ಸಂಸ್ಕಾರ ಮಾಡಿಕೊಳ್ಳ ಬಹುದು ಎಂದು ತಿಳಿಸುವ ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್. ಈ ಸಂದರ್ಭದಲ್ಲಿ ಕಂದಾಯ ಇಲಾಖಾಧಿ ಕಾರಿಗಳಾದ ಸಿದ್ದರಾಜು, ಕಾವ್ಯ, ಗಂಗಾಧರ್, ಪಿಡಿಒ ಮಹೇಶ್, ಗ್ರಾ.ಪಂ ಸದಸ್ಯರಾದ ಚಿಕ್ಕರಂಗಪ್ಪ, ಸುಬ್ರಮಣ್ಯ, ಬಾಬು, ಸಿ ಮಂಜುನಾಥ್, ಬಿ ವಿ ಮಂಜುನಾಥ್, ಕಾಂತರಾಜು, ಬಿ ಆರ್ ಮಂಜುನಾಥ್, ಹನು ಮಂತಿ, ಆನಂದ, ಕೃಷ್ಣ, ಮುದ್ದಮ್ಮ, ಸಣ್ಣಮ್ಮ, ಹಾಗೂ ಸಂಘಟನೆಯ ಮುಖಂಡರು ಮತ್ತು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು.