ಗುಬ್ಬಿ: .ನಮ್ಮ ಒಳಗೆ ಇದ್ದುಕೊಂಡು ಸೋಲಿಗೆ ಕಾರಣರಾದವರ ವಿರುದ್ಧ ಸಿಂಹ ಸ್ವಪ್ನವಾಗಿ ಕಾಡುತ್ತೇನೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ತಿಳಿಸಿದರು.
ಪಟ್ಟಣದ ಬಾವಿ ಮನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು 52ಸಾವಿರ ಮತಗಳನ್ನು ನೀಡಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ ತಾಲೂಕಿನ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಬಿಜೆಪಿ ಗೆಲ್ಲುವ ಸಾಧ್ಯತೆ ಇದ್ದರೂ ಕುತಂತ್ರ ರೂಪಿಸಿ ಸೋಲಿಸಲಾಯಿತು ತಾಲೂಕಿನಲ್ಲಿ ಬಿಜೆಪಿಯ ಸೋಲು ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿದ ಮೋಸ ಎಂದ ಅವರು ಕಾರ್ಯಕರ್ತರು ಎದೆಗುಂದದೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸ ಬೇಕು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಸೋಲಿಗೆ ಸಂಸದ ಜಿಎಸ್ ಬಸವರಾಜು, ಗ್ಯಾಸ್ ಬಾಬು, ಎನ್ ಸಿ ಪ್ರಕಾಶ್ ಕಾರಣ ಎಂದು ಕಿಡಿ ಕಾರುವ ಮೂಲಕ ಬಿಜೆಪಿ ಸದಸ್ಯತ್ವ ರದ್ದುಗೊಳಿಸಬೇಕೆಂದು ರಾಜ್ಯ ಕಾರ್ಯದರ್ಶಿ ಎಂ ಬಿ ನಂದೀಶ್ ರವರ ಮುಂದೆ ಕಾರ್ಯಕರ್ತರು ಒಗ್ಗಟ್ಟಿನಿಂದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ. ಬೈರಪ್ಪ, ತಾಲೂಕ್ ಅಧ್ಯಕ್ಷ ಬಿ.ಎಸ್. ಪಂಚಾಕ್ಷರಿ, ಪ ಪಂ ಅಧ್ಯಕ್ಷ ಜಿ ಎನ್ ಅಣ್ಣಪ್ಪಸ್ವಾಮಿ, ಮುಖಂಡರಾದ ಸಾಗರನಹಳ್ಳಿ ನಂಜೇಗೌಡ, ಬಲರಾಮ್, ಲಕ್ಷ್ಮಿ ರಂಗಯ್ಯ, ರಘು, ಕೀರ್ತಿ, ಯತೀಶ್, ಗಿರೀಶ್, ಮುಂತಾದವರಿದ್ದರು.