ತುಮಕೂರು: ಹೆಣ್ಣೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕ ಡಿ.ಸಿ.ಗೌರಿಶಂಕ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಗಳಪುರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಗೆ ಶಂಕು ಸ್ಥಾಪನೆ, 22 ಲಕ್ಷ ರೂ. ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರಿನ ನಲ್ಲಿ ಹಾಕುವ ಕಾಮಗಾರಿ ಶಂಕುಸ್ಥಾಪನೆ, 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿ ಉದ್ಘಾಟಿಸಿದರು.
ಸಿದ್ದಣ್ಣನಪಾಳ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟಿಸಿದರು. ಒಂದು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಹರಿಶಿಣ, ಕುಂಕುಮ, ಬಳೆ, ಸೀರೆ, ಬಾಗಿನವನ್ನು ನೀಡುವ ಮೂಲಕ ಗಂಗಾಪೂಜೆ ನೆರವೇರಿಸಿದರು. ಗ್ರಾಮದ ಪ್ರತಿಯೊಂದು ಮನೆಗೆ 20 ಲೀಟರ್ ಕ್ಯಾನ್ಗಳನ್ನು ಉಚಿತವಾಗಿ ಸ್ಥಳದಲ್ಲಿ ವಿತರಿಸಲಾಯಿತು.
ಎಲ್ಲಾ ಗ್ರಾಮಗಳಲ್ಲಿ ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಬಡ ಕುಟುಂಬದ ಆರೋಗ್ಯ ಸಮಸ್ಯೆಗಳಿಗೆ ವೈಯಕ್ತಿಕ ಸಮಸ್ಯೆಗಳ ಸಹಾಯಕ್ಕಾಗಿ ವೈಯಕ್ತಿಕವಾಗಿ ಸ್ಥಳದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಧನ ಸಹಾಯ ಮಾಡಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಸೋಮಣ್ಣ, ಸಾವಿತ್ರಮ್ಮ, ಚಿರತೆ ಚಿಕ್ಕಣ್ಣ, ಡೈರಿ ವೆಂಕಟೇಶ್, ಕೆ.ಬಿ.ರಾಜಣ್ಣ, ಪಾಲ ನೇತ್ರಯ್ಯ, ರಾಜೇಶ್, ರಾಘ ವೇಂದ್ರ, ಶ್ರೀರಂಗ, ತಮ್ಮಯ್ಯ, ದಾದಾಪೀರ್ ಮತ್ತಿತರರಿದ್ದರು.