Saturday, 23rd November 2024

Dharmasthala: ಧರ್ಮಸ್ಥಳ ಯೋಜನೆಗೆ ಎಸ್‌ಬಿಐ 4,500 ಕೋಟಿ ಸಾಲ

ತುಮಕೂರು: ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(Dharmasthala Rural Development) ಬಿ.ಸಿ ಟ್ರಸ್ಟ್‌ಗೆ ಎಸ್‌ಬಿಐ 4,500 ಕೋಟಿ ಸಾಲ ನೀಡಿದ್ದು, ಮಹಿಳೆಯರ‌ ಸ್ವಯಂ ಉದ್ಯೋಗ(Self Employment) ಕ್ಕೆ ಅನುಕೂಲವಾಗಿದೆ ಎಂದು ಎಸ್‌ಬಿಐ (SBI) ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಕೆ.ಎನ್.ವಾದಿರಾಜ ತಿಳಿಸಿದರು.

ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಸಂಘವು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ 1 ಲಕ್ಷದಿಂದ 5 ಲಕ್ಷದ ವರೆಗೆ ಸಾಲ ನೀಡುತ್ತಿದೆ. ಎಸ್‌ಬಿಐ ಸಂಘದ ಮೂಲಕ ಮಹಿಳೆಯರಿಗೆ ಸಾವಿರಾರು ಕೋಟಿ ಸಾಲ ವಿತರಿಸಿದೆ. ಕೊಟ್ಟ ಸಾಲ ಶೇ 100ರಷ್ಟು ಮರು ಪಾವತಿಯಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ರಾಜ್ಯದಲ್ಲಿ 50 ಲಕ್ಷ ಮಹಿಳೆಯರು ಸಂಘದ ಸದಸ್ಯತ್ವ ಪಡೆದಿದ್ದಾರೆ. 1 ಲಕ್ಷ ವಿದ್ಯಾರ್ಥಿಗಳು ಶಿಷ್ಯವೇತನ ಪಡೆದು ವಿದ್ಯಾಭ್ಯಾಸ ಮುಂದುವರಿಸು ತ್ತಿದ್ದಾರೆ. ರಾಜ್ಯದಲ್ಲಿ 10 ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ 24 ಸಾವಿರ ಕೋಟಿ ಸಾಲ ವಿತರಿಸಲಾಗಿದೆ ಎಂದರು.

ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ತಾಲ್ಲೂಕು ಯೋಜನಾಧಿಕಾರಿ ಪಿ.ಬಿ.ಸಂದೇಶ್ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮಹಿಳೆಯ ಶಕ್ತಿಯು ಸ್ವಾವಲಂಬಿ ಮತ್ತು ಆತ್ಮವಿಶ್ವಾಸದ ಬೆಳಕು : ಶ್ರೀ ಗುರುಕುಲ ಸ್ವಾಮೀಜಿ ಅಭಿಮತ