ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ವರ್ಣಿ ದರ್ಪಕ್ಕೆ ಗೋವುಗಳ ಮೂಕವೇದನೆ
ಚಿಕ್ಕಬಳ್ಳಾಪುರ : ಭಾರತ ಸರಕಾರ ಬಿಕರಿ ಮಾಡಿರುವ ಸಂಶೋಧನಾ ಕೇಂದ್ರದ ಬರಡುರಾಸುಗಳನ್ನು ಕಾನೂನು ಪ್ರಕಾರವೇ ಕೊಂಡುಕೊಂಡು ಪಾಲನೆ ಪೋಷಣೆ ಮಾಡುತ್ತಿರುವ ಶ್ರೀಯೋಗಿವೇಮನ ಗೋಶಾಲೆಯ ಮೇಲೆ ವಿನಾ ಕಾರಣ ಧ್ವೇಷ ಸಾಧಿಸುತ್ತಿರುವ ಸಾಕುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ವರ್ಣಿ ದರ್ಪಕ್ಕೆ ಸಿಕ್ಕಿ ನಿಷ್ಪಾಪಿ ಗೋವುಗಳು ಮೂಕವೇಧನೆ ಅನುಭವಿಸುತ್ತಿರುವ ಘಟನೆ ಬಾಗೇಪಲ್ಲಿ ತಾಲೂಕು ವ್ಯಾಪ್ತಿಯ ಪರಗೂಡು ಅಂಚೆ ಸೋಲಮಾಕಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ನಗರದಲ್ಲಿ ವಿಶ್ವವಾಣಿ ಪತ್ರಿಕೆಗೆ ನೀಡಿದ ದೂರಿನಲ್ಲಿ ತಮಗಾಗುತ್ತಿರುವ ನೋವನ್ನು ತೋಡಿಕೊಂಡಿದ್ದಾರೆ.
ಏನಿದು ಕಥೆ!!
ಶ್ರೀವಿಶ್ವಮಹಾಯೋಗಿ ವೇಮನ ಪೌಂಡೇಷನ್ ವತಿಯಿಂದ ಸೋಲಮಾಕಲಪಲ್ಲಿ ಗ್ರಾಮದಲ್ಲಿ ನಡೆಸುತ್ತಿರುವ ಗೋಶಾಲೆಯನ್ನು ಶ್ರೀನಿವಾಸರೆಡ್ಡಿ ಆದ ನಾನು ಸ್ವಂತ ಹಣದಿಂದ ಕಾನೂನು ಬದ್ದವಾಗಿ ನಡೆಸುತ್ತಿದ್ದೇನೆ. ರೋಗ ಪೀಡಿತ ಹಸುಗಳನ್ನು ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಎಸ್ಡಿಆರ್ಐ ರಿಜಿನಲ್ ಸೆಂಟರ್ನಲ್ಲಿ 4.70 ಲಕ್ಷ ಹಣ ನೀಡಿ ಟೆಂಡರ್ನಲ್ಲಿ ಖರೀದಿ ಮಾಡಿದ್ದೇನೆ.ಗೋಶಾಲೆ ನಡೆಸಲು ರಾಜ್ಯ ಹಾಗೂ ಕೇಂದ್ರದ ಸರಕಾರದಿಂದ ಯಾವುದೇ ಅನುದಾನ ಪಡೆದಿಲ್ಲ,ಖಾಸಗಿ ಸಂಸ್ಥೆಗಳ ನೆರವೂ ಪಡೆಯದೆ ಸ್ವಂತ ಭೂಮಿ ಮಾರಿ ಬಂದ ಹಣದಲ್ಲಿ ಗೋವುಗಳ ಸೇವೆಗಾಗಿ ಗೋಶಾಲೆ ನಡೆಸುತ್ತಿದ್ದೇನೆ.
ಇಲ್ಲಿರುವ 70 ಹಸುಗಳು ರೋಗ ಪೀಡಿತವಾಗಿದ್ದು ಇವುಗಳ ಸೇವೆ ಮಾಡುವ ಏಕೈಕ ಉದ್ದೇಶದಿಂದ ಬಡಕಲು ಹಸುಗಳನ್ನು ಸಾಕುತ್ತಿದ್ದೇನೆ. ಆದರೆ ನನಗೆ ಗೋಶಾಲೆ ನಡೆಸಲು ಭೂಮಿ ಭೋಗ್ಯಕ್ಕೆ ನೀಡಿರುವ ಸತೀಶ್ ಬಿನ್ ನಂಜುAಡಪ್ಪ ಎಂಬ ವ್ಯಕ್ತಿ ತನಗಿರುವ ರಾಜಕೀಯ ಶಕ್ತಿ ಪೊಲೀಸರ ಸಹಕಾರ ಪಡೆದು ಗೋಶಾಲೆಗೆ ಮೇವು, ನೀರು ಸಾಗಿಸಲು ದಾರಿ ನೀಡದೆ,ಒಪ್ಪಂದಂತೆ ನೀರು, ವಿದ್ಯುತ್ ನೀಡದೆೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೆ ಕ್ರಮವಹಿಸಬೇಕಾದ ಬಾಗೇಪಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರಶಾಂತ್ ವರ್ಣಿ ಭೂಮಾಲಿಕರ ಜತೆ ಕೈಜೋಡಿಸಿ ಜಾಗ ಖಾಲಿ ಮಾಡುವಂತೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ.ಎಸ್ಪಿ ಸಾಹೇಬರು ಕೂಡಲೇ ಸ್ಥಳ ಮಹಜರು ಮಾಡಿ ನ್ಯಾಯ ನೀಡಬೇಕೆಂದು ಮನವಿ ಮಾಡಿದ್ದಾರೆ.
ಭೂಮಿಯ ಮಾಲಿಕನ ಜತೆಗೆ ಕೈಜೋಡಿಸಿರುವ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕಾರಣವಾಗಿ ಕಳೆದ ಮೂರು ತಿಂಗಳಿAದ ಗೋಶಾಲೆಯಲ್ಲೇ ಗೋವುಗಳು ದಿಗ್ಭಂಧನಕ್ಕೆ ಒಳಗಾಗಿವೆ.ಮೊದಲೇ ಅನಾರೋಗ್ಯ ಪೀಡಿತವಾದ ಗೋವುಗಳಿಗೆ ಮೇವು ನೀರು ಬಿಸಿಲು ಸಿಗದೆ ಪರಿತಪಿಸುತ್ತಿವೆ. ಪಶು ವೈಧ್ಯಾಧಿಕಾರಿಗಳು ಗೋವುಗಳನ್ನು ಬಯಲಿಗೆ ಬಿಡಬೇಕು ಎಂದು ಹೇಳಿದ್ದರೂ ಮಾಲಿಕರ ಕಿರುಕುಳದಿಂದ ಹೊರಗೆ ಬಿಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಈಗಾಗಲೇ ಗೋಶಾಲೆ ಪಕ್ಕದಲ್ಲಿ ವಿಷ ಸಿಂಪಡಿಸಿದ ಪರಿಣಾಮ ಇದುವರೆಗೂ ಮೂರು ಗೋವುಗಳು ಸಾವನ್ನಪ್ಪಿದ್ದು ಇದರ ಬಗ್ಗೆಯೂ ದೂರು ನೀಡಲಾಗಿದ್ದರೂ ಕನಿಷ್ಟ ತನಿಖೆ ಕೂಡ ಮಾಡಿಲ್ಲ ಎಂದು ಶ್ರೀನಿವಾಸರೆಡ್ಡಿ ಆರೋಪ ಮಾಡಿದ್ದಾರೆ.
ನಾನು ಹೃದ್ರೋಗಿಯಾದ ಕಾರಣ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಗೋಶಾಲೆಯಲ್ಲಿ ಗೋವುಗಳನ್ನು ನೋಡಿ ಕೊಳ್ಳಲು ಬರುವ ಕೂಲಿಗಳ ಮೇಲೆ ದಬ್ಬಾಳಿಕೆ ಮಾಡಿ ದೈಹಿಕ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿರುವ ಹಿನ್ನಲೇ ರೋಗಪೀಡಿತ ಗೋವುಗಳು ಇದ್ದಲ್ಲಿಯೇ ದಿಗ್ಭಂಧನಕ್ಕೆ ಒಳಗಾಗಿ ಮೇವು ನೀರು ಇಲ್ಲದೆ ಪರಿತಪಿಸುವಂತೆ ಮಾಡಿದ್ದಾರೆ.ನಮಗೆ ತೊಂದರೆ ಕೊಡುತ್ತಿರುವವರಿಗೆ ದೇವರು ಒಳ್ಳೆಯದು ಮಾಡುವುದಿಲ್ಲ ಎಂದು ಬೇಸರಿಸಿದರು.
ಗೋಶಾಲೆಗೆ ತೊಂದರೆ ಕೊಡುತ್ತಿರುವ ಬಗ್ಗೆ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು ೨೮-೧೨-೨೪ ರಂದು ಹೈಕೋರ್ಟ್ ತಡೆಯಾಜ್ಞೆ ನೀಡಲಾಗಿದೆ. ಮುಂದಿನ ಆದೇಶದವರೆಗೆ ಭೂಮಿಯ ಮಾಲೀಕರು ಗುತ್ತಿಗೆಗೆ ನೀಡಿರುವ ಗೋಶಾಲೆಯ ಭೂ ಪ್ರದೇಶದಲ್ಲಿ ಯಾವುದೇ ಅತಿಕ್ರಮಣ ಪ್ರವೇಶ ಮಾಡುವುದಾಗಲಿ,ಗೋಶಾಲೆಗೆ ತೊಂದರೆ ನೀಡುವುದಾಗಲಿ ಮಾಡದಂತೆ ತಿಳಿಸಿದೆ. ಈ ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿ ರಕ್ಷಣೆ ನೀಡುವಂತೆ ಕೋರಿದರೆ ಅವರು ಬಾಗೇಪಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಗೆ ವರ್ಗಾಹಿಸಿದ್ದಾರೆ.ಆದರೂ ಯಾವುದೇ ಕ್ರಮವನ್ನು ಕೈಗೊಳ್ಳದೆ, ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತು ನೀಡದೆ ದರ್ಪದ ಆಡಳಿತ ನಡೆಸುತ್ತಿದ್ದಾರೆ ಎಂದು ಶ್ರೀನಿವಾಸರೆಡ್ಡಿ ದೂರಿದ್ದಾರೆ.
೨೮-೧೨-೨೪ ರಲ್ಲಿ ಹೈಕೋರ್ಟ್ನಲ್ಲಿ ಶ್ರೀ ವಿಶ್ವಮಹಾ ಯೋಗಿ ವೇಮನ ಪೌಂಡೇಷನ್ ವತಿಯಿಂದ ನಡೆಸುತ್ತಿರುವ ಪುಣ್ಯಕೋಟಿ ಗೋಶಾಲಾ ಯಥಾಸ್ಥಿತಿಯಲ್ಲಿ ನಡೆಸಿಕೊಂಡು ಹೋಗುವಂತೆ ಹಾಗೂ ಭೂಮಿಯ ಮಾಲೀಕರು ಯಾವುದೇ ಕಿರುಕುಳ ನೀಡಬಾರದೆಂದು ತಡೆಯಾಜ್ಞೆ ನೀಡಿದೆ. ರಕ್ಷಣೆ ನೀಡಬೇಕಾದ ಸರ್ಕಲ್ ಇನ್ಸ್ಪೆಕ್ಟರ ಪ್ರಶಾಂತ್ವರ್ಣಿ ಗೋ ಶಾಲೆಯನ್ನು ನಡೆಸಲು ಬಿಡದೆ ಖಾಲಿಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ವಿಶ್ವಮಹಾ ಯೋಗಿ ವೇಮನ ಪೌಂಡೇಷನ್ ವತಿಯಿಂದ ನಡೆಸುತ್ತಿರುವ ಪುಣ್ಯಕೋಟಿ ಗೋ ಶಾಲಾ ಸಂಸ್ಥಾಪಕ ಶ್ರೀನಿವಾಸರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: chikkaballapurnews