Monday, 25th November 2024

ಪರಂ ಮುಖ್ಯಮಂತ್ರಿಯಾಗಲಿ: ಅಭಿಮಾನಿಗಳ ಆಶಯ

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಇಂದು

ತುಮಕೂರು: ಮಾಜಿ ಉಪ ಮುಖ್ಯಮಂತ್ರಿ,ಕೊರಟಗೆರೆ ಕ್ಷೇತ್ರದ ಶಾಸಕ ಹಾಗು ಶ್ರೀಸಿದ್ದರ‍್ಥ ಶಿಕ್ಷಣ ಸಂಸ್ಥೆಯ ಕರ‍್ಯರ‍್ಶಿ, ಕಾಂಗ್ರೆಸ್ ಪ್ರಭಾವಿ ರಾಜಕಾರಣಿ ಡಾ.ಜಿ.ಪರಮೇಶ್ವರ್ ಅವರ ೭೧ನೇ ಹುಟ್ಟುಹಬ್ಬವನ್ನು ಆ.೬ರಂದು ನಾಡಿ ನಾದ್ಯಂತ ಅಭಿಮಾನಿಗಳು, ಕರ‍್ಯರ‍್ತರು, ಸಂಸ್ಥೆಯ ಸಿಬ್ಬಂದಿಗಳು ಸಂಭ್ರಮ ದಿಂದ ಆಚರಿಸಲಿದ್ದಾರೆ.

ಜಾಲತಾಣದಲ್ಲಿ ಶುಭಾಶಯ ಕೋರುವ ಸಂದೇಶದೊಂದಿಗೆ ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಲಿ ಎಂಬ ಆಶಯವನ್ನು ಅಭಿಮಾನಿಗಳು ಆಶಿಸಿದ್ದಾರೆ.

ಹುಟ್ಟು ಹಬ್ಬದ ಅಂಗವಾಗಿ ಜಿಲ್ಲಾ ಛಲವಾದಿ ಮಹಾಸಭಾ ಹಾಗು ಶ್ರೀಸಿದ್ದರ‍್ಥ ವೈದ್ಯಕೀಯ ಸಂಶೋಧನಾ ಮಹಾವಿದ್ಯಾಲಯದ ಸಹಯೋಗದಲ್ಲಿ ಆಗಸ್ಟ್ ೬ರ ಶನಿವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀಸಿದ್ದರ‍್ಥ ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿರುವ ಶ್ರೀ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಮತ್ತು ಸಸಿ ನೆಡುವ ಕರ‍್ಯಕ್ರಮ ಆಯೋಜಿಸಿದ್ದು, ಕರ‍್ಯಕ್ರಮದ ಅಧ್ಯಕ್ಷತೆಯನ್ನು ನಗರಪಾಲಿಕೆ ಸದಸ್ಯರಾದ ಪ್ರಭಾವತಿ ವಹಿಸುವರು.ಶ್ರೀಸಿದ್ದರ‍್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್ ಇದರ ರಿಜಿಸ್ಟಾರ್ ಡಾ.ಎಂ.ಜೆಡ್.ಕುರಿಯನ್ ಅವರು ಕರ‍್ಯಕ್ರಮ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಸಿದ್ದರ‍್ಥ ಪ್ರಥಮ ರ‍್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ರಮೇಶ್ ಮಣ್ಣೆ, ಪಾಲಿಕೆ ಸದಸ್ಯೆ ಗೀತಾ ರುದ್ರೇಶ್,ಪಾಲಿಕೆ ಸದಸ್ಯರಾದ ಮಂಜುನಾಥ್, ಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಕಾಂಗ್ರೆಸ್ ಮುಖಂಡರಾದ ಆಟೋರಾಜು, ಹೆಗ್ಗೆರೆ ಗ್ರಾಮಪಂಚಾಯಿತಿ ಸದಸ್ಯರಾದ ಮಮತಾ ಅವರುಗಳು ಭಾಗವಹಿಸಲಿದ್ದಾರೆ.

ಸಾಕ್ಷ್ಯ ಚಿತ್ರ ಪ್ರಸಾರ
ಶಿಕ್ಷಣ ಪ್ರೇಮಿ, ಪ್ರಭಾವಿ ರಾಜಕಾರಣಿ ಡಾ.ಜಿ.ಪರಮೇಶ್ವರ್ ಅವರ ಸುಧರ‍್ಘಪಯಣದ ದಾದಿಯನ್ನು ಕುರಿತು ಮೈಸೂರಿನ ಬಾಳೆಎಲೆ ಪ್ರೊಡಕ್ಷನ್ ಅವರು ನರ‍್ಮಿಸಿರುವ ಅಜಾತಶತ್ರು ಸಾಕ್ಷ್ಯಚಿತ್ರ ದೂರರ‍್ಶನ ಚಂಚನವಾಹಿನಿಯಲ್ಲಿ ಆ.೫ರಂದು ರಾತ್ರಿ ಪ್ರಸಾರವಾಯಿತು. ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆಂದು ಕಾಂಗ್ರೆಸ್ ಕರ‍್ಯರ‍್ತರು ತಿಳಿಸಿದ್ದಾರೆ.