Tuesday, 26th November 2024

ರಾಜಕೀಯ ಒತ್ತಡದಿಂದ ಸಾವರ್ಕರ್‌ ಪೀಠ ಸ್ಥಾಪನೆ: ಪರಂ

ಸಾವರ್ಕರ್‌ ಪೀಠಕ್ಕೆ ಸರಕಾರ ಸಂಪೂರ್ಣ ಸಹಕಾರ:ಸಿಎಂ

ತುಮಕೂರು: ತುಮಕೂರು ವಿವಿಯಲ್ಲಿ ಸಾರ‍್ಕರ್ ಅಧ್ಯಯನ ಪೀಠ ಆಂತರಿಕವಾಗಿ ತುಮಕೂರು ವಿಶ್ವವಿದ್ಯಾಲಯಕ್ಕೆ ಬಿಟ್ಟ ವಿಚಾರ. ವಿವಿ ಸಮ್ಮತಿಸಿ ಪಾಸ್ ಮಾಡಿದರೆ ಪೀಠ ಸ್ಥಾಪನೆಗೆ ಸಹಕಾರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೀಠ ಸ್ಥಾಪನೆಗೆ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ನಲ್ಲಿ ತರ‍್ಮಾನ ಮಾಡಬೇಕು , ತುಮಕೂರು ವಿವಿ ಸಮ್ಮತಿಸಿ ಪಾಸ್ ಮಾಡಿದರೆ ಸ್ಥಾಪನೆ ಆಗುತ್ತೆ. ಸಾರ‍್ಕರ್ ಅಧ್ಯಯನ ಪೀಠಕ್ಕೆ ಬೇಕಾದ ಸಹಕಾರ ನೀಡುತ್ತೇವೆ ಎಂದರು. ಸಾರ‍್ಕರ್ ಅಧ್ಯಯನ ಪೀಠಕ್ಕೆ ಸರಕಾರ ಒತ್ತಡವೆಂಬ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಗಳು ಒಬ್ಬೊಬ್ಬರು ಒಂದೊಂದು ಕಾಲದಲ್ಲಿ ಒಂದೊಂದು ಪೀಠ ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿದ್ದಾರೆ. ಅವೆಲ್ಲವೂ ಆಗಿನ ಕಾಲದ ಒತ್ತಡ ಅಷ್ಟೇ ಎಂದು ತಿರುಗೇಟು ನೀಡಿದರು.

ರಾಜಕೀಯ ಒತ್ತಡದಿಂದ ಸಾರ‍್ಕರ್ ಪೀಠ ಸ್ಥಾಪನೆ:ಪರಂ ಗರಂ
ರಾಜಕೀಯ ಒತ್ತಡದಿಂದ ಸಾರ‍್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಲು ಮುಂದಾಗಿರುವುದು ದುರಂತ ಮಾಜಿ ಡಿಸಿಎಂ ಪರಮೇಶ್ವರ್ ಗರಂ ಆಗಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಏಕಾಏಕಿ ಕುಲಪತಿಗಳು, ಕುಲಸಚಿವರು, ವಿವಿ ಸಿಂಡಿಕೇಟ್ ಸದಸ್ಯರುಗಳು ತರ‍್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ತುಮಕೂರು ವಿವಿಯನ್ನು ಇದುವರೆಗೆ ಆಡಳಿತ ನಡೆಸಿರುವ ಎಲ್ಲ ಸರಕಾರಗಳು ನರ‍್ಲಕ್ಷ್ಯ ಮಾಡಿವೆ. ನನ್ನ ಪ್ರಯತ್ನದಿಂದ ವಿಶ್ವವಿದ್ಯಾನಿಲಯವನ್ನು ಸ್ಥಾಪನೆಯಾಯಿತು.

ಆದರೆ ಇದುವರೆಗೂ ಹೊಸ ಕ್ಯಾಂಪಸ್ಗೆ ಹೋಗಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಚ್ಚು ಅನುದಾನ ಬಿಡುಗಡೆ ಮಾಡಿ ಆದಷ್ಟು ಬೇಗ ಹೊಸ ಕ್ಯಾಂಪಸ್ಗೆ ತುಮಕೂರು ವಿವಿ ಸ್ಥಳಾಂತರವಾಗುವಂತೆ ಮಾಡಬೇಕು ಎಂದು ಎಂದು ಮಾಜಿ ಡಿಸಿಎಂ ಡಾ.ಪರಮೇಶ್ವರ್ ಆಗ್ರಹಿಸಿದರು. ತುಮಕೂರು ವಿವಿಯಲ್ಲಿ ಆರಂಭವಾಗಿರುವ ಸಾರ‍್ಕರ್ ಅಧ್ಯಯನ ಪೀಠ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ರ‍್ಚೆಗೆ ಗ್ರಾಸವಾಗಿದೆ.