ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಸಾಹದಿಂದ ಕೂಡಿರುವ ಸುಖಾಸೀನ ಅನುಭವ ನೀಡುವ ಉದ್ದೇಶದಿಂದ ರೂಪಿಸಿರುವ ರೋಪ್‌ವೇ ಕಾಮಗಾರಿ ಪ್ರಾರಂಭಿಸಲು ಇರುವ ಎಲ್ಲಾ ಅಡೆತಡೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ತೋಟಕಾರಿಕೆ, ಕಂದಾಯ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಹಂತದಲ್ಲಿ ಸರಣಿ ಸಭೆಗಳನ್ನು ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವರಿ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳು ತಡವಾದಾಗ ಈ ವೇಳೆಯನ್ನು ಸದುಪಯೋಗ ಪಡಿಸಿ ಕೊಳ್ಳಲು ನಂದಿಬೆಟ್ಟದ ವೀಕ್ಷಣೆ ಮಾಡಲು ಬೇಕಾದ ವ್ಯವಸ್ಥೆ ಮಾಡಲು ಸರಕಾರ ಮುಂದಾಗಿದೆ. ನಂದಿ ಬೆಟ್ಟದ ಮೇಲೆ ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಪ್ರವಾಸಿಗಳಿಗೆ ಬೇಕಾದ ಆಧುನಿಕ ಆಹಾರ ದೊರೆಯುವಂತೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
೨೦೨೩ರ ವಿಧಾನಸಭಾ ಚುನಾವಣೆ ಪ್ರಾರಂಭಕ್ಕೂ ಮುನ್ನ ಗುದ್ದಲಿ ಪೂಜೆ ಮಾಡಿರುವ ಗುತ್ತಿಗೆದಾರರು ರೋಪ್‌ವೇ ನಿರ್ಮಾಣಕ್ಕೆ ಈಗಲೂ ೨ ವರ್ಷಗಳ ಅವಧಿ ಕೇಳಿದ್ದಾರೆ. ಈ ವಿಚಾರದಲ್ಲಿ ಏನೇ ತೊಂದರೆ ಇದ್ದರೂ ನನಗೆ ತಿಳಿಸಿ ಎಂದು ಹೇಳಿ ಆದರೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದೇನೆ. ಗುತ್ತಿಗೆದಾರರು ಯಾವುದೇ ಕಾರಣಕ್ಕೂ ನಂದಿಬೆಟ್ಟದ ಮೂಲ ಸೌಂದರ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ರೋಪ್‌ವೇ ಮಾಡಬೇಕು ಎಂದು ಕೂಡ ನಿರ್ದೇಶನ ನೀಡಲಾಗಿದೆ ಎಂದರು.
ದೊಡ್ಡಬಳ್ಳಾಪುರ ಭಾಗದ ಭೂಮಿಯ ಸಮಸ್ಯೆ ಪರಿಹಾರ ಮಾಡಲಾಗಿದೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಬೆಟ್ಟ ಇದೆ ಎಂದು ಹೇಳಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಲು ಸೂಚಿಸಿದ್ದು ನಮ್ಮ ಸರಕಾರದ ಅವಧಿಯೊಳಗೆ ಜನಬಳಕೆಗೆ ತರಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.
ರಾಜ್ಯೋತ್ಸವಕ್ಕೆ ರಂಗಮಂದಿರ ಲೋಕಾರ್ಪಣೆ
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರವನ್ನು ಮುಂಬರುವ ರಾಜ್ಯೋತ್ಸವದ ವೇಳೆಗೆ ಸಾರ್ವಜನಿಕ ಬಳಕೆ ನೀಡುವಂತೆ ವ್ಯವಸ್ಥೆ ಮಾಡಿದ್ದು, ಭವನ ಪೂರ್ಣಗೊಳಿಸಲು ಇದ್ದ ಎಲ್ಲಾ ಅಡೆತಡೆ ನಿವಾರಿಸ ಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ 4 ಕಾಲು ಕೋಟಿ ಹಣವನ್ನು ಕೂಡ ಮಂಜೂರು ಮಾಡಿಸಿದ್ದೇನೆ ಎಂದರು.
ಇದನ್ನೂ ಓದಿ: Chikkaballapur News: ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ-ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ