ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಜ್ಯದ 7 ಕೋಟಿ ಕನ್ನಡಿಗರ ಆಶೀರ್ವಾದ ಇರುವು ದರಿಂದ ಕಾಂಗ್ರೆಸ್ ಪಕ್ಷಕ್ಕೆ 136 ಎಂಎಲ್‌ಎಗಳ ಬಲವಿದೆ. ಮೇಲಾಗಿ ಹೈಕಮಾಂಡ್ ಆಶೀರ್ವಾದ, ಪಾರ್ಲಿಮೆಂಟ್‌ನ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಬೆಂಬಲ ಇದೆ. ಯಾರಿಂದಲೂ ಅವರನ್ನು ಕಟ್ಟಿ ಹಾಕಲು ಆಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿದರು.
ರಾಜ್ಯಪಾಲರಿಗೆ ಮುರುಗೇಶ್ ನಿರಾಣಿ, ಶಶಿಕಲಾಜೊಲ್ಲೆ, ಜನಾರ್ಧನರೆಡ್ಡಿ,ಕುಮಾರಸ್ವಾಮಿ ಅವರ ವಿರುದ್ಧದ ಕೇಸಿನ ಕನ್ನಡ ಅರ್ಥವಾಗುತ್ತಿಲ್ಲ. ಮುಖ್ಯಮಂತ್ರಿಗಳ ಕೇಸಲ್ಲಿ ಮಾತ್ರ ಬೇಗನೆ ಕನ್ನಡ ಅರ್ಥಆಗುತ್ತತ್ರಿದು ಎಲ್ಲರಿಗೂ ಗೊತ್ತಿ ರುವ ವಿಚಾರವೇ. ಆದ್ದರಿಂದ ನಾವ್ಯಾರು ಎಫ್‌ಐಆರ್ ಆದ ತಕ್ಷಣ ಧೃತಿಗೆಡಬೇಕಿಲ್ಲ ಎಂದರು.
ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ಯಾಕೆ ಕೊಡಬೇಕು?
ಯಾರೇ ದೂರು ನೀಡಿದ ತಕ್ಷಣ ಎಫ್‌ಐಆರ್ ಆಗುತ್ತದೆ. ಲೋಕಾಯುಕ್ತಕ್ಕೆ ತನಿಖೆಗೆ 3 ತಿಂಗಳ ಒಳಗೆ ತನಿಖೆ ಪೂರ್ಣ ಗೊಳಿಸಲು ಜನಪ್ರತಿನಿಧಿಗಳ ಕೋರ್ಟು ನಿರ್ದೇಶನ ನೀಡಿದೆ. ಅವರು ತನಿಖೆ ಮಾಡುತ್ತಾರೆ. ಇದರಲ್ಲಿ ಸಿದ್ಧರಾ ಮಯ್ಯ ಅವರ ಪಾತ್ರ ಇದೆಯಾ? ಪತ್ರ ನೀಡಿದ್ದಾರಾ? ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರಾ? ಎನ್ನುವ ಬಗ್ಗೆ ತನಿಖೆ ಮಾಡುತ್ತಾರೆ.
ಕುಮಾರಸ್ವಾಮಿ ಅವರು ಫೈಲ್ ಮೇಲೆ ಬರೆದಿರುವಂತಹುದನ್ನೇ ಏನಿಲ್ಲಾ ಎಂದು ರಾಜಾರೋಷವಾಗಿ ಮಾತನಾ ಡುತ್ತಾರೆ. ಯಡಿಯೂರಪ್ಪ ಅವರು ಪೋಕ್ಸೋ ಕೇಸಲ್ಲಿ ಬೇಲ್ ಪಡೆದು ಓಡಾಡುತ್ತಿದ್ದಾರೆ. ಇದರ ಬಗ್ಗೆ ನರೇಂದ್ರ ಮೋದಿ ಅವರು ಹರಿಯಾಣದಲ್ಲಿ ಯಾಕೆ ಮಾತನಾಡುವುದಿಲ್ಲ. ಅವರದೇ ಮಂತ್ರಿಗಳು, ಸಚಿವರ ಮೇಲೆ ಹಿಂದೆ ಎಷ್ಟು ಕೇಸುಗಳಿದ್ದಾವೆ? ಅದರ ಬಗ್ಗೆ ಪ್ರದಾನಿಗಳು ಮಾತನಾಡಲಾಗಲ್ಲ. ಸಿದ್ಧರಾಮಯ್ಯ ಅವರ ಬಗ್ಗೆ ದೂರು ಕೊಟ್ಟ ತಕ್ಷಣ ಎಲ್ಲಿ ಸಾಬೀತು ಆಯಿತು. ತನಿಖೆ ಆಗುವುದಕ್ಕೆ ನಾವು ಯಾರೂ ಏನೂ ಅಡ್ಡಿಮಾಡುವುದಿಲ್ಲ. ಕಾನೂನು ಬದ್ಧವಾಗಿ ತನಿಖೆ ಆಗಲಿ, ಊಹಾಪೋಹಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.
ಕುಮಾರಸ್ವಾಮಿ ಡಿನೋಟಿಫಿಕೇಶನ್ ಆಗುವ ಮುಂಚೆಯೇ ಫೈಲ್ ಪುಟಪ್ ಮಾಡಿ ಎಂದು ಬರೆಯುತ್ತಾರೆ. ಅವರ ಅತ್ತೆ ಹೆಸರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಸತ್ತವರ ಹೆಸರಿನಲ್ಲಿ ಬೇರೆಯವರಿಂದ ಅರ್ಜಿ ಕೊಡಿಸಿ ಅದರ ಮೇಲೆ ಡೀನೋಟಿಫಿಕೇಷನ್ ಮಾಡುತ್ತಾರೆ. ಬುದ್ದಿವಂತಿಕೆಯಿಂದ ಎಲ್ಲಾ ರೆಡಿ ಮಾಡಿಸಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಕೈಯಲ್ಲಿ ಆದೇಶ ಮಾಡಿಸುತ್ತಾರೆ. ನಂತರ ಬಾಮೈದನ ಹೆಸರಿಗೆ ರಿಜಿಸ್ಟರ್ ಮಾಡಿಸುತ್ತಾರೆ. ಇದೆಲ್ಲ ನಡೆದು ಎಷ್ಟು ಎಷ್ಟು ಆಯ್ತು? ಸಿದ್ಧರಾಮಯ್ಯ ಅವರ ಪ್ರಕರಣ ಎಷ್ಟು ವರ್ಷದಿಂದ ನಡೆಯುತ್ತಿದೆ? ಆ ರೀತಿ ಇದ್ದರೆ ಡೀನೋಟಿಫಿಕೇನ್ ಆದ ತಕ್ಷಣ ಮಾರಿಕೊಳ್ಳಬಹುದಿತ್ತು ಅಲ್ಲವೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.